ಕರೋನಾದಿಂದ ಬೆಂಗಳೂರಲ್ಲಿ ಅಘೋಷಿತ ಬಂದ್!
ಕರೋನಾ ಇಡೀ ದೇಶವನ್ನಷ್ಟೇ ಅಲ್ಲದೇ ಕರ್ನಾಟಕವನ್ನೂ ಭಯಭೀತಿಗೊಳಿಸಿದೆ. ರಾಜ್ಯ ಸರ್ಕಾರ ಈ ಸೋಂಕು ತಗಲದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿದೆ. ಇದರಿಂದ ಇನ್ಮೇಲೆ ಎಲ್ಲವೂ ಬಂದ್ ಆಗಲಿವೆ. ಇಂದಿನಿಂದ ಒಂದು ವಾರಗಳ ಕಾಲ ರಾಜ್ಯದಾದ್ಯಂತ ಮಾಲ್, ಸಿನಿಮಾ ಥೀಯಟರ್, ಸಭೆ, ಸಮಾರಂಭ, ಜಾತ್ರೆ ಮತ್ತಯ ಮದುವೆ ಅಷ್ಟೇ ಅಲ್ಲದೇ ಕ್ರೀಡಾಕೂಟಗಳನ್ನು ಸಹ ಸ್ಥಗಿತಗೊಳಿಸಬೇಕು ಎಂದು ಸಿಎಂ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.
ಇನ್ನು ಅದ್ದೂರಿ ಮದುವೆ ಮಾಡುವ ಸಂದರ್ಭದಲ್ಲಿ ತುಂಬ ಜನ ಸೇರಿದರೆ ಅಲ್ಲಿ ಯಾರಾದರೂ ಕರೋನಾ ಸೋಂಕು ಹರಡಿದವರು ಇದ್ದರೆ ಅದು ಎಲ್ಲರಿಗೂ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ 100 ಜನ ಮಾತ್ರವೇ ಸೇರಬಹುದಾದ ಸರಳ ವಿವಾಹ ಮಾಡಬಹುದು. ಅಲ್ಲದೇ ರಾಜ್ಯದ ಜನರು ಎಲ್ಲಿಯಾದರೂ ಪ್ರಯಾಣ ಮಾಡಬೇಕಾದರೆ, ಅದನ್ನು ಸದ್ಯಕ್ಕೆ ಮುಂದೂಡಬೇಕು ಎಂದು ರಾಜ್ಯದ ಸಿಎಂ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಾತ್ರಾ ಮಹೋತ್ಸವಗಳನ್ನು ಬಂದ್ ಮಾಡಲಾಗಿದೆ. ಇನ್ನು ಸರ್ಕಾರಿ ಕಚೇರಿಗಳು ಮಾತ್ರ ಎಂದಿನಂತೆ ತಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡುತ್ತವೆ. ಆದರೆ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಸಿಎಂ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಇನ್ನು ಸರ್ಕಾರವೇ ನಡೆಸುತ್ತಿರುವ ವಿದ್ಯಾರ್ಥಿ ನಿಲಯ, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತ ಸೂಚನೆ ನೀಡಲಾಗಿದೆ. ಇನ್ನು ಸರ್ಕಾರಿ ಕಚೇರಿಗಳು ಹಾಗೂ ಅಧಿವೇಶನಗಳು ಎಂದಿನಂತೆ ನಡೆಯಲಿವೆ. ಆದರೆ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ಒಂದು ವಾರ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳು ಬಂದ್!
ಹೌದು ಬೆಂಗಳೂರಿನ ಬಹುತೇಕ ಸಾಫ್ಟ್ ವೇರ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಸಾಫ್ಟ್ ವೇರ್ ಕಂಪನಿಗಳ ಕಡೆಗೆ ಉದ್ಯೋಗಿಗಳು ಇದೀಗ ಸುಳಿಯುತ್ತಿಲ್ಲ. ಇನ್ನು ನಿಗದಿ ಆಗಿರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಕರೋನಾ ಭೀತಿಯಿಂದ ಜನರು ಪ್ರಯಾಣವನ್ನು ರದ್ದು ಮಾಡಿ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.