ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 62ನೇ ಮನ್ ಕೀ ಬಾತ್ ನಲ್ಲಿ ದೇಶದ ಜನರೊಂದಿಗೆ ಮಾತನಾಡಿದರು. ಮಂಕಿ ಬಾತ್ ನಲ್ಲಿ ಕಾಮ್ಯಾರನ್ನು ಹಾಡಿ ಹೊಗಳಿದ್ದಾರೆ. ಅಷ್ಟಕ್ಕೂ ಕಾಮ್ಯಾರನ್ನು ಹೊಗಳಿದ್ದಾದರೂ ಯಾಕೆ ಗೊತ್ತಾ! ಮುಂದೆ ಓದಿ....
ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಿ ಕೊಡುವುದು ನಮಗೆಲ್ಲಾ ಗೊತ್ತಿರುವ ವಿಷಯವೇ ಸರಿ. ಆದರೆ ಈ ಬಾರಿಯ ಕಾರ್ಯಕ್ರಮದ ವೇಳೆ ತಾವು ಹುನಾರ್ ಹಾತ್ (ಇಂಡಿಯಾ ಗೇಟ್ ಬಳಿ ನಡೆದ ಕರಕುಶಲ ಮೇಳ)ಗೆ ಭೇಟಿ ನೀಡಿದ್ದ ಬಗ್ಗೆ ವಿವರಿಸಿದರು. ಅಲ್ಲದೆ ಈ ಹುನಾರ್ ಹಾತ್ ಭಾರತದ ವೈವಿಧ್ಯತೆ ಮತ್ತು ಏಕತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಹೌದು, ಭಾರತದ ಕಲೆ ಮತ್ತು ಕರಕುಶಲ ಪರಂಪರೆಯನ್ನು ಹುನಾರ್ ಹಾತ್ ಅನಾವರಣ ಮಾಡುತ್ತದೆ. ಅಲ್ಲದೆ ಮಹಿಳಾ ಸಬಲೀಕರಣಕ್ಕೆ ಸಾಕ್ಷಿ ಎಂದು ಮೋದಿ ಹೇಳಿದರು. ನೀವು ಕೂಡ ಈ ಕರಕುಶಲ ಮೇಳಕ್ಕೆ ಆಗಮಿಸಿ ಎಂದು ದೇಶದ ಜನರಿಗೆ ಹೇಳಿದರು. ಕಲೆ ಮತ್ತು ಕರ ಕುಶಲತೆಯಲ್ಲಿ ಭಾರತ ಮೊದಲಿನಿಂದಲೂ ಪ್ರಥಮ.
ಈ ಬಾರಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ಕೇಂದ್ರ ಕರಕುಶಲ ಮೇಳವನ್ನು ಇಂಡಿಯಾ ಗೇಟ್ ಬಳಿಯ ರಾಜಪಥದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಮೇಳಕ್ಕೆ ಮೋದಿಯವರು ಆಕಸ್ಮಿಕವಾಗಿ ಭೇಟಿ ನೀಡಿ ಮಾತನಾಡಿದರು.
ದಕ್ಷಿಣ ಅಮೆರಿಕಾದ ಅತ್ಯಂತ ಎತ್ತರ ಪರ್ವತ ಅಕೋನ್ಕಾಗುವಾವನ್ನು ಏರುವ ಮೂಲಕ ದಾಖಲೆ ಸೃಷ್ಟಿಸಿದ ಭಾರತದ 12ವರ್ಷದ ಬಾಲಕಿ ಕಾಮ್ಯಾ ಕಾರ್ತಿಕೇಯನ್ ಅವರನ್ನು ನರೇಂದ್ರ ಮೋದಿಯವರು ಮನ್ ಕೀ ಬಾತ್ನಲ್ಲಿ ಹೊಗಳಿದರು.ನಮ್ಮ ದೇಶದ ಮಹಿಳೆಯರ ಉದ್ಯಮಶೀಲತೆ, ಅವರ ಧೈರ್ಯ, ಸಾಹಸಗಳೆಲ್ಲ ನಮ್ಮಲ್ಲಿ ಹೆಮ್ಮೆ ಮೂಡಿಸುತ್ತವೆ.12ವರ್ಷದ ಬಾಲಕಿ ಕಾಮ್ಯಾಳ ಸಾಹಸವನ್ನು ನಾನು ಇಲ್ಲಿ ಹೇಳಲೇಬೇಕು. ಕಾಮ್ಯಾಳಿಗೆ ಈಗ ‘ಮಿಷನ್ ಸಾಹಸ್' ಎಂದು ಕರೆಯಲಾಗಿದೆ. ಮಿಷನ್ ಸಾಹಸ್ನಡಿ ಆಕೆ ಎಲ್ಲ ಖಂಡಗಳ ಅತ್ಯಂತ ಎತ್ತರದ ಪರ್ವತಗಳನ್ನು ಏರಲು ಯತ್ನಿಸಲಿ. ಉತ್ತರ, ದಕ್ಷಿಣ ತುದಿಗಳನ್ನು ಮೆಟ್ಟಲಿ. ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಕಾಮ್ಯಾ ಈ ದೇಶದ ಯುವಜನತೆಗೆ ಪ್ರೇರಣೆಯಾಗಿದ್ದಾಳೆಂದು ಹಾಡಿ ಹೊಗಳಿದ್ದಾಳೆ.