ಕೆ.ಪಿ.ಎಲ್ ಕ್ರಿಕೆಟ್ ಫಿಕ್ಸಿಂಗ್ ಗೂ ಗೃಹ ಸಚಿವ ಬೊಮ್ಮಾಯಿಗೂ ಏನ್ ಸಂಬಂಧ? 

Soma shekhar
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣ ಕೇಳಿಬಂದಿದ್ದು, ಚೆನ್ನೈ ಮತ್ತು ರಾಜಸ್ತಾನ್ ತಂಡಗಳನ್ನು ಎರಡು ವರ್ಷ ಬ್ಯಾನ್ ಮಾಡಲಾಗಿತ್ತು. ಅದರಂತೆ ಇದೀಗ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿಯೂ ಫಿಕ್ಸಿಂಗ್ ನಡೆದಿದ್ದು, ಬೆಚ್ಚಿ ಬೀಳಿಸಿದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಒತ್ತಡದ ಕರೆಗಳು ಬರುತ್ತಿವೆ ಅನ್ನೋದನ್ನು ಸ್ವತಃ ಪೊಲೀಸರೇ ಬಹಿರಂಗ ಪಡಿಸಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಬೊಮ್ಮಾಯಿ ಪುತ್ರನ ಮೇಲೂ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಸ್ವತಃ ಗೃಹ ಸಚಿವರೇ ಪ್ರತಿಕ್ರಿಯೆ ನೀಡಿದ್ದಾರೆ. 
 
ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿರುವ ಫಿಕ್ಸಿಂಗ್ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿತ್ತು, ಇದೀಗ ಹನಿ ಟ್ರಾಪ್ ಮೂಲಕ ಆಟಾಗಾರರನ್ನು ಫಿಕ್ಸಿಂಗ್ ಖೆಡ್ಡಾಗೆ ಬೀಳಿಸಲಾಗಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ.ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪುತ್ರನ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
 
ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, ಕೆಪಿಎಲ್ ಫಿಕ್ಸಿಂಗ್ ತನಿಖೆಗೆ ನನ್ನ ಪುತ್ರ ಅಡ್ಡಿಯಾಗಿಲ್ಲ. ಪೊಲೀಸರ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ನನ್ನ ಮಗನಿಗೂ ತನಿಖೆಗೂ ಯಾವುದೇ ಸಂಬಂಧವಿಲ್ಲ. ನಾನು ಕ್ರಿಕೆಟಿಗ, ನನ್ನ ಮಗ ಕೂಡ ಕ್ರಿಕೆಟಿಗ ಅನ್ನೋ ಕಾರಣಕ್ಕೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ಕಠಿಣ ತನಿಖೆಗೆ ಆದೇಶಿಸಿದ್ದೇನೆ. ನನ್ನ ಪುತ್ರ ಪೊಲೀಸರಿಗೆ ಒತ್ತಡ ಹಾಕಿದ್ದಾನೆ ಅನ್ನೋ ಆರೋಪಕ್ಕೆ ಪೊಲೀಸರನ್ನೇ ಕೇಳಿ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 
 
ಇದೇ ವೇಳೆ ಕಾಂಗ್ರೆಸ್ ಶಾಸಕ,ಮಾಜಿ ಸಚವ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದ ತನಿಖೆ ಕುರಿತು ಕೆಲ ಮಾಹಿತಿ ಬಹಿರಂ ಪಡಿಸಿದ್ದಾರೆ. ರಾಜಕೀಯ ಪೈಪೋಟಿ ಮತ್ತು ರಾಜಕೀಯ ಅಸ್ಥಿತ್ವಕ್ಕಾಗಿ ನಡೆದಿರುವ ಹತ್ಯೆ ಯತ್ನ ಎಂದು  ಬೊಮ್ಮಾಯಿ ಮೈಸೂರಿನಲ್ಲಿ ಅಧಿಕೃತ ಹೇಳಿಕೆ ನೀಡಿದ್ದಾರೆ.ಸೈದ್ದಾಂತಿಕ ಭಿನ್ನಭಿಪ್ರಾಯ ಹಾಗೂ ರಾಜಕೀಯ ಅಸ್ಥಿತ್ವಕ್ಕಾಗಿ ಹತ್ಯೆ ನಡೆದಿದೆ. ಇನ್ನೆರಡು ದಿನದಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಬಂಧಿತ ಆರೋಪಿ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಯಲ್ಲಿ ಸಕ್ರಿಯನಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದಿದ್ದಾರೆ.

Find Out More:

Related Articles: