ಉಪಚುನಾವಣೆಯಲ್ಲಿ ಶಿವಾಜಿನಗರದ ರೋಷನ್ ಬೇಗ್ ಏನಾದ್ರು?

Soma shekhar
ಬೆಂಗಳೂರು: 17 ಶಾಸಕರು ರಾಜೀನಾಮೆ ನೀಡಿ ಯಡಿಯೂರಪ್ಪ ಸರ್ಕಾರ ರಚಿಸಿದರು. ಇದೀಗ ಅನರ್ಹರು ಟಿಕೆಟ್ ಪಡೆದರು. ಆದರೆ ಶಿವಾಜಿ ನಗರದ ರೋಷನ್ ಬೇಗ್ ಮಾತ್ರ ಚುನಾವಣಾ ಕಣದಿಂದ ಹಿಂದುಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಗುಡುಗಿದ್ದ ಬೇಗ್ ಗೆ ಇದ್ದಕ್ಕಿದ್ದಂತೆ ಏನಾಯಿತು. ಚುನಾವಣಾ ಕಣದಿಂದ ಹಿಂದುಳಿಯಲು ಕಾರಣವಾದರು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.
 
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೋಷನ್​ ಬೇಗ್​ ಬಿಜೆಪಿ ಸೇರ್ಪಡೆಗೊಂಡು ಹೊಸ ರಾಜಕೀಯ ಜೀವನ ಆರಂಭಿಸಲು ನಿರ್ಧರಿಸಿದ್ದರು. ಆದರೆ ಐಎಂಎ ಜ್ಯುವೆಲರಿ ಹಗರಣದಲ್ಲಿ ಅವರ ಹೆಸರು ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್​ ಅವರ ಪಕ್ಷ ಸೇರ್ಪಡೆಗೆ ಕೆಂಪು ನಿಶಾನೆ ತೋರಿತ್ತು. ಇದರಿಂದ ಬೇಸತ್ತಿದ್ದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದರು.
 
ವಿಷಯ ತಿಳಿಯುತ್ತಲೇ ಅವರನ್ನು ಸಂಪರ್ಕಿಸಿದ್ದ ಸಿಎಂ ಬಿ.ಎಸ್​. ಯಡಿಯೂರಪ್ಪ ರೋಷನ್​ ಬೇಗ್​ ಅವರ ಮನವೊಲಿಸಲು ಪ್ರಯತ್ನಿಸಿದ್ದರು. ಆದಾಗ್ಯೂ ಉಪಚುನಾವಣೆಗೆ ಸ್ಪರ್ಧಿಸುವ ತಮ್ಮ ನಿರ್ಧಾರ ಅಚಲ ಎಂದು ಹೇಳಿದ್ದರು. ಆದರೆ ಸೋಮವಾರ ಬೆಳಗ್ಗೆ ವೇಳೆಗೆ ಎಲ್ಲವೂ ಬದಲಾಗಿತ್ತು. ರೋಷನ್​ ಬೇಗ್​ ತಾವು ಸ್ಪರ್ಧಾ ಕಣದಿಂದ ಹಿಂದೆಸರಿಯುತ್ತಿರುವುದಾಗಿ ಹೇಳಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸಂದೇಶ ಪ್ರಕಟಿಸಿದ್ದರು.
 
ರುಮಾನ್​ ಬೇಗ್​ ಸೇರಿ ತಮ್ಮ ರಾಜಕೀಯ ನೆಲೆ ಕಲ್ಪಿಸುವ ಜವಾಬ್ದಾರಿ ತಮ್ಮದು ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಸ್​. ಸಂತೋಷ್​ ಅವರು ರೋಷನ್​ ಬೇಗ್​ ಅವರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ. ರುಮಾನ್​ ಬೇಗ್​ ಅವರನ್ನು ಯಾವುದಾದರೂ ನಿಗಮ, ಮಂಡಳಿಗೆ ನೇಮಿಸುವ ಜತೆಗೆ ರೋಷನ್​ ಬೇಗ್​ ಅವರಿಗೆ ಶಿವಾಜಿನಗರ ಉಪಚುನಾವಣೆಯ ಟಿಕೆಟ್​ ಕೊಟ್ಟರೆ ಕ್ಷೇತ್ರದಲ್ಲಿರುವ ಹಿಂದು ಮತದಾರರು ಕೋಪಗೊಳ್ಳಬಹುದು. ಈ ಕಾರಣಕ್ಕಾಗಿ ಪಕ್ಷ ಶರವಣ ಅವರಿಗೆ ಟಿಕೆಟ್​ ಕೊಡಲು ನಿರ್ಧರಿಸಿತು ಎಂದು ಬಿ.ಎಸ್​. ಸಂತೋಷ್​ ಅವರು ರೋಷನ್​ ಬೇಗ್​ ಅವರಿಗೆ ಮನದಟ್ಟು ಮಾಡಿಕೊಟ್ಟರು ಎನ್ನಲಾಗಿದೆ. ಆಗ ಸಿಎಂ ಯಡಿಯೂರಪ್ಪ ಕೂಡ ರುಮಾನ್​ ಹಾಗೂ ರೋಷನ್​ ಬೇಗ್​ ಅವರಿಗೆ ಅವರವರ ರಾಜಕೀಯ ಹಿತಾಸಕ್ತಿ ಕಾಪಾಡುವ ಭರವಸೆ ನೀಡಿದರು ಎನ್ನಲಾಗಿದೆ. ಆದ್ದರಿಂದಲೇ ಬೇಗ್ ಚುನಾವಣೆಯಿಂದ ಹಿಂದುಳಿದಿದ್ದಾರೆ.

Find Out More:

Related Articles: