ಸಾಹೋ ರಿಲೀಸ್ ಡೇಟ್ ಫೈನಲ್!

somashekhar
 ಪ್ರಭಾಸ್ ನಟನೆಯ ಸಾಹೋ ಚಿತ್ರ ಟಾಲಿವುಡ್ ಲೋಕದಲ್ಲಿ ಅಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲೇ ನಿರೀಕ್ಷೆ ಹೆಚ್ಚಿಸಿದೆ. ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ನಟಿಸಿರುವ ಈ ಬಹು ನಿರೀಕ್ಷಿತ ಚಿತ್ರ ಭಾರಿ ದೊಡ್ಟ ಬಜೆಟ್ ನಲ್ಲಿ ನಿರ್ಮಾಣ ಆಗಿದೆ.


ಈ ಚಿತ್ರ ಶೂಟಿಂಗ್ ಹಂತದಲ್ಲಿ ಇದ್ದಾಗಲೇ ದೊಡ್ಡ ಮಟ್ಟಗೆ ಸದ್ದು ಮಾಡಿತ್ತು. ಹೀಗಾಗಿ ಚಿತ್ರವು ಅದ್ಯಾವಾಗ ತೆರೆ ಕಾಣುತ್ತದೆ ಎಂದು ಸಿನಿ ಪ್ರೇಕ್ಷಕರು ತುದಿಗಾಲಲ್ಲಿ ನಿಂತುಕೊಂಡಿದ್ದರು. ಕೊನೆಗೂ ಚಿತ್ರತಂಡ ಇದೀಗ ತಮ್ಮ ಡೇಟ್ ಫೈನಲ್ ಮಾಡಿದೆ. 


ಅಂದುಕೊಂಡಂತೆ ಸಾಹೋ ಚಿತ್ರ ಆಗಸ್ಟ್ 15ಕ್ಕೆ ಬಿಡುಗಡೆ ಆಗತ್ತಿಲ್ಲ. ಈ ದಿನಾಂಕ ಮುಂದೂಡಿ ಅದನ್ನು ಆಗಸ್ಟ್ 30ಕ್ಕೆ ಹಾಕಲಾಗಿದೆ. ಹೀಗಾಗಿ ಪ್ರಭಾಸ್ ಅಭಿಮಾನಿಗಳನ್ನು ಮತ್ತೊಂದು ಹದಿನೈದು ದಿನಗಳ ಕಾಲ ಕಾಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.


Find Out More:

Related Articles: