ಜಾಧವ್‌ ಪ್ರಕರಣದಲ್ಲಿ ಪಾಕ್ ಗೆ ಭಾರೀ ಅವಮಾನ

somashekhar
ವಿಶ್ವಸಂಸ್ಥೆ: ಕೈಲಾಗದವರು ಮೈ ಪರಚಿಕೊಂಡರಂತೆ ಹಾಗಾಯಿತು ಪಾಕಿಸ್ತಾನದ ಪರಿಸ್ಥಿತಿ. ಭಾರತದ ಎದುರು ಏನು ಮಾಡಲಾಗದಿದ್ದರು ಸಹ ಬಾರತದ ಮೇಲೆ ಯುದ್ಧ ಮಾಡಿ ಗೆದ್ದು ಬಿಡುತ್ತೇವೆ ಎಂಬ ಹುಮ್ಮಸ್ಸು ಪಾಕಿಸ್ತಾನ ದ್ದು. ತನ್ನ ರಾಷ್ಟ್ರದಲ್ಲಿನ ಜನರಿಗೆ ತಿನ್ನಲು ಅನ್ನವಿಲ್ಲದ್ದಿದ್ದರು ಸಹ ಶಸ್ತ್ರಾಸ್ತ್ರಗಳ ಖರೀದಿಗೆ ಹಣ ವಿನಿಯೋಗಿಸುತ್ತದೆ. ತನ್ನ ತಪ್ಪೇ ಇಲ್ಲದಿದ್ದರೂ ಸಹ ಜಾಧವ್ ರನ್ನು ಬಂಧಿಯಾಗಿಸಿಕೊಂಡಿದೆ. ಹೋದಲ್ಲಿ ಬಂದಲ್ಲಿ ಅವಮಾನಕ್ಕೀಡಾಗುವುದೇ ಪಾಕಿಸ್ತಾನದ ಕೆಲಸ.

ಜಾಧವ್‌ ಪ್ರಕರಣದಲ್ಲಿ ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ ಎಂದ ಅಂತಾರಾಷ್ಟ್ರೀಯ ನ್ಯಾಯಾಲಯ ಗುರುವಾರ ಸ್ಪಷ್ಟವಾಗಿ ತಿಳಿಸಿದೆ. ವಿಯೆನ್ನಾ ಒಪ್ಪಂದದ ವಿಧಿ 36ರ ಅಡಿಯಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಯನ್ನು ಮರೆತಿದೆ ಆದ್ದರಿಂದ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಲು ಪಾಕಿಸ್ತಾನಕ್ಕೆ  ಸೂಚನೆ ನೀಡಿದೆ. ಸುಳ್ಳು ಆರೋಪದಡಿ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ, ವಿಯೆನ್ನಾ ಒಪ್ಪಂದದ  ಕಾನೂನನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ಕಾವಿ ಯೂಸುಫ್ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.

ವಿಶ್ವಸಂಸ್ಥೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ವರದಿ ಸಲ್ಲಿಸಿದ ನ್ಯಾಯಾಧೀಶ ಯೂಸಫ್, ವಿಯೆನ್ನಾ ಒಪ್ಪಂದದ ವಿಧಿ 36 ರ ಅಡಿಯಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಯನ್ನು ಮರೆತು ಒಪ್ಪಂದ ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಜಾಧವ್‌ ಗೆ ನೀಡಲಾಗಿರುವ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಲು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದ್ದು, ಪಾಖಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಇನ್ನು ವಿಶ್ವಸಂಸ್ಥೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ವರದಿ ಸಲ್ಲಿಕೆಯಾಗುತ್ತಿದ್ದಂತೇ ಕುಲಭೂಷಣ್‌ ಅವರಿಗೆ ರಾಜತಾಂತ್ರಿಕ ನೆರವು ನೀಡಲು ಪಾಖಿಸ್ತಾನ ಒಪ್ಪಿಗೆ ಸೂಚಿಸಿದೆ. 

ಇದೊಂದೆ ಪ್ರಕರಣವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವು ಸಾಕಷ್ಟು ಭಾರೀ ಅವಮಾನಕ್ಕೀಡಾಗಿದೆ. ಭಾರತದ ಒಂದು ರಾಜ್ಯ ದಷ್ಟು ಭೂ ಪ್ರದೇಶ ಹೊಂದಿರುವ ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ಯುದ್ಧ ಮಾಡುವ ಬೆದರಿಕೆ ಯೊಡ್ಡಿದೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದಕ್ಕೆ ನಾವೇನು ಕೈಕಟ್ಟಿ ಕುಳಿತಿಲ್ಲ ಎಂದಿದ್ದಾರೆ. ಬಿಪಿನ್ ರಾವತ್ ಅವರು ಎಲ್ಲದಕ್ಕೂ ಸಿದ್ದ ಎಂದು ಗುಡುಗಿದ್ದಾರೆ. 


Find Out More:

Related Articles: