ಡಿಕೆ ಶಿವಕುಮಾರ್ ಗೆ ಭರ್ಜರಿ ಸ್ವಾಗತ. ಬಂದ ತಕ್ಷಣ ಏನ್ ಅಂದ್ರು?

somashekhar
ಬೆಂಗಳೂರು / ಬಳ್ಳಾರಿ: ಮಾಜಿ ಸಚಿವ, ಕನಕಪುರ ಬಂಡೆ ಇಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಮುಂದಿದೆ ಅಸಲೀ ಕಥೆ ಎಂದು ಗುಡುಗು ಮೂಲಕ ಸಿಡಿಲಬ್ಬರದಂತೆ ಹೇಳಿಕೆ ನೀಡಿದ್ದಾರೆ. ಗಮನಿಸಲೇ ಬೇಕಾದ ಅಂಶವೇನೆಂದರೆ ಮುಖ್ಯ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಡಿ ಕೆ ಬೆಂಗಳೂರಿಗೆ ಆಗಮನದ ಕುರಿತು ಮಾತನಾಡಿದ್ದಾರೆ.  ಹಿಂದೆ ಜೈಲಿಗೆ ಹೋಗಿ ಬಂದವರನ್ನು ಜನರು ತಿರಸ್ಕಾರ ಭಾವದಿಂದ ನೋಡ್ತಿದ್ರು. ಇದೀಗ ಕಾಲ ಬದಲಾಗಿದೆ. ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದವರಿಗೆ ಸ್ವಾಗತ ಮಾಡುವ ಸಮಾಜದಲ್ಲಿ ನಾವಿದ್ದೇವೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರೋದು ಸಮಾಜಕ್ಕೆ ಮಾರಕ ಎಂದಿದ್ದಾರೆ. 

 ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅದ್ಧೂರಿ ಸ್ವಾಗತಕ್ಕೆ ಕಾರ್ಯಕರ್ತರು ಬೆಂಬಲಿಗರು ಸಜ್ಜಾಗಿದ್ದು, ಈ ಬಗ್ಗೆ ಪರೋಕ್ಷವಾಗಿ ಟೀಕಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಏಕ ವ್ಯಕ್ತಿಯನ್ನ ಪೂಜೆ ಮಾಡಿ. ಆದರೆ ಭ್ರಷ್ಟರನ್ನ ಪೂಜೆ ಮಾಡಬಾರದು ಎಂದು ತಿಳಿಸಿದರು.ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದು, ಸಮಾಜ ಬದಲಾಗಬೇಕಿದೆ. ಜನರಲ್ಲಿ ಬದಲಾವಣೆ ಬರಬೇಕು. ಜನರಲ್ಲಿ ದುರಾಸೆ ಅಧಿಕಾರದ ಆಸೆ ಜಾಸ್ತಿಯಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಅಂತಾರೆ. ಅಧಿಕಾರದಲ್ಲಿ ಬಂದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದರು. 

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯೂ ದುರ್ಬಲವಾಗಿದೆ. ಎಸಿಬಿ ಪೊಲೀಸ್ ವ್ಯವಸ್ಥೆಯಲ್ಲಿ ಬರುತ್ತದೆ. ಭ್ರಷ್ಟಾಚಾರ ಇಂದು ಮಿತಿಮೀರಿ ಬೆಳೆಯುತ್ತಿದ್ದು, ಏಕವ್ಯಕ್ತಿ ಪೂಜೆಯನ್ನಾದರೂ ಮಾಡಿ, ಆದರೆ ಭ್ರಷ್ಟರನ್ನ ಪೂಜೆಮಾಡಬೇಡಿ ಎಂದು ಸಂತೋಷ್ ಹೆಗ್ಡೆ ತಿಳಿಸಿದರು. ಏನೇ ಆಗಲಿ ಮಾಜಿ ಸಚಿವ ಡಿ. ಕೆ ಶಿವಕುಮಾರ್ ರಾಜ್ಯ ರಾಜಧಾನಿಗೆ ಬಂದಿಳಿದಿದ್ದು ಭರ್ಜರಿಯಾಗಿ ಗುಡುಗಲು ಬಿಗ್ ಪ್ಲಾನ್ ವೊಂದನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 48 ದಿನಗಳ ಜೈಲುವಾಸ ದಲ್ಲಿ ಇದೇ ಕೆಲಸವನ್ನೇ ಅವರು ಮಾಡುತ್ತಿದ್ದರು. ಯಾರನ್ನು ಹೇಗೆಲ್ಲಾ ಏನ್ ಮಾಡಬಹುದು ಎಂಬ ಹೊಸ ಐಜಿಯಾವೊಂದನ್ನು ಸಿದ್ದಪಡಿಸಿ ಕೊಂಡಿದ್ದಾರೆ. ಕೆಲವರಿಗೆ ಮುಂದಿದೆ ಹಬ್ಬ ಎಂದಿದ್ದಾರೆ. ಡಿಕೆಶಿ ಆಗಮನದಿಂದ ಅಭಿಮಾನಿಗಳು ಮಾತ್ರ ಫುಲ್ ಖುಷ್ ಆಗಿದ್ದಾರೆ. 


Find Out More:

Related Articles: