ಜಿ. ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲಿನ ಐಟಿ ದಾಳಿಗೆ ಕಾರಣ ಇದೇ ನೋಡಿ!

somashekhar
ಬೆಂಗಳೂರು: ಕಳೆದೆರಡು ದಿನಗಳಿಂದ ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸಂಪೂರ್ಣವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. 
ತುಮಕೂರು, ನೆಲಮಂಗಲ, ಟಿ. ಬೇಗೂರು, ಬೆಂಗಳೂರಿನ ಸದಾಶಿವನಗರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಕಾರಣವೆಂದರೆ ರಾಜಸ್ಥಾನ ಮೂಲದ ಇಬ್ಬರು ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ನೀಟ್ ಪರೀಕ್ಷೆ ಬಳಿಕ ಸೀಟ್ ಪಡೆದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವ ಸಾಧ್ಯತೆಯಿದೆ.

 ವಿದ್ಯಾರ್ಥಿಗಳಿಗೆ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಬ್ಲಾಕ್ ಮಾಡಲಾಗಿತ್ತು. ಸೀಟ್ ಬ್ಲಾಕ್ ಮಾಡಿದ ಬಳಿಕ ಸೀಟ್ ಸೆರೆಂಡರ್ ಮಾಡಲಾಗಿತ್ತು. ವರ್ಷಕ್ಕೆ 30 ಲಕ್ಷ ಹಣದ ರೀತಿಯಲ್ಲಿ ವ್ಯವಹಾರ ನಡೆಸಲಾಗಿತ್ತು. ಇದೇ ವಿಚಾರಕ್ಕೆ ಐಟಿ ಮಾಹಿತಿ ಕಲೆ ಹಾಕಿತ್ತು. ಐಟಿಯಿಂದ ಆ ಇಬ್ಬರು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಲಾಗಿತ್ತು. ಕಾಲೇಜಿನಲ್ಲಿ ನಡೆದ ಅವ್ಯವಹಾರ ಪತ್ತೆ ಮಾಡಿದ ಐಟಿ ಅಧಿಕಾರಿಗಳು ಆ ನಂತರವೇ ಡಾ. ಜಿ. ಪರಮೇಶ್ವರ್ ಮನೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.

120 ಬ್ಯಾಂಕ್​ ಖಾತೆಗಳು ಮುಟ್ಟುಗೋಲು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳಿಂದ ಇಂದು ಮೆಡಿಕಲ್ ಕಾಲೇಜಿನ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಆಡಿಟರ್ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಈ ಹಿಂದೆ ಆಡಿಟಿಂಗ್ ನಡೆಸುತ್ತಿದ್ದವರನ್ನು ವಿಚಾರಣೆ ಮಾಡುವ ಸಾಧ್ಯತೆಯಿದೆ. ಕಳೆದ ಎರಡು ವರ್ಷಗಳ ಹಿಂದೆಯೇ ಐಟಿ ದಾಳಿ ನಡೆಯಬಹುದೆಂದು ತಿಳಿದು ಕಾಲೇಜಿನ ಅಕೌಂಟ್​ಗಳನ್ನು ಡಾ. ಜಿ. ಪರಮೇಶ್ವರ್ ಆಡಿಟ್ ಮಾಡಿಸಿದ್ದರು. ಹೀಗಾಗಿ, ಆಡಿಟರ್​ಗಳನ್ನೂ ಇಂದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿ. ಪರಮೇಶ್ವರ್ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಬ್ಯಾಗ್ ದಾಖಲೆ ಜೊತೆಗೆ ತೆರಳಿದ್ದಾರೆ. ಇಂದು ಬೆಳಗ್ಗೆಯಿಂದ ತಪಾಸಣೆ ನಡೆಸಿದ್ದ ತಂಡಕ್ಕೆ ಒಂದು ಬ್ಯಾಗ್​ ಪೂರ್ತಿ ಆಸ್ತಿ ದಾಖಲೆಗಳು ಕೊಂಡೊದಿದ್ದಾರೆ ಎಂದು ತಿಳಿದು ಬಂದಿದೆ.


Find Out More:

Related Articles: