ಚುನಾವಣಾ ಆಯೋಗದಿಂದ ಅನರ್ಹ ಶಾಸಕರಿಗೆ ಬಿಗ್ ಶಾಕ್

somashekhar
ಬೆಂಗಳೂರು: ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ರಾಜ್ಯ ಚುನಾವಣೆ ಆಯೋಗ ಸ್ಪಷ್ಟಪಡಿಸಿದೆ. ಈ ಹೇಳಿಕೆ ಮೂಲಕ ಅನರ್ಹ ರಿಗೆ ಬಿಗ್ ಶಾಕ್ ಆಗಿದೆ. ಏಕೆಂದರೆ ತಮಿಳುನಾಡು ಮಾದರಿ ನಾವು ಚುನಾವಣೆಯಲ್ಲಿ ಸ್ಪರ್ಧಿಸಬಹುದು, ಸ್ಪರ್ಧಿಸಿ ಗೆಲ್ಲಬಹುದು ಎಂದು 15 ಶಾಸಕರು ನಿರೀಕ್ಷಿಸಿದ್ದರು. ಆದರೆ ಈ ಸುದ್ದಿ ಕೇಳಿದ ಅವರ ಸ್ಥಿತಿ ಅಯೋಮಯವಾಗಿದೆ. 

ಕೇಂದ್ರ ಚುನಾವಣಾ ಆಯೋಗ ಶನಿವಾರ ತಾನೇ ಉಪಚುನಾವಣೆ ದಿನಾಂಕ ಫಿಕ್ಸ್ ಮಾಡಿದೆ. ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಹಿತಿ ನೀಡಿರುವ ಅವರು, ಈಗಾಗಲೇ ರಾಜ್ಯದಲ್ಲಿ ಶಾಸಕರಾಗಿ ಅನರ್ಹಗೊಂಡವರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

2023ರವರೆಗೆ ಶಾಸಕರನ್ನು‌ ಅನರ್ಹಗೊಳಿಸಿ ಸ್ಪೀಕರ್ ರೂಲಿಂಗ್ ‌ನೀಡಿರುವ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಒಂದು ವೇಳೆ ಸುಪ್ರೀಂಕೋರ್ಟ್ ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ‌ನೀಡಿದರೆ ಸ್ಪರ್ಧಿಸಲು ಅವಕಾಶ ಇದೆ ಅಂತಾ ತಿಳಿಸಿದರು.
ಅನರ್ಹಗೊಂಡ ಶಾಸಕರು ಇವರೇ ನೋಡಿ: ಸಮ್ಮಿಶ್ರ ಸರ್ಕಾರ ಉರುಳಿಸಲು ಕಾಂಗ್ರೆಸ್ ಮತ್ತು ಜೆ ಡಿ ಎಸ್ ಪಕ್ಷದ ಒಟ್ಟು 17 ಶಾಸಕರು ರಾಜೀನಾಮೆ ನೀಡಿದ್ದರು. ಕಾರಣವೆಂದರೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಸಲಗಳು ಆಗುತ್ತಿಲ್ಲ ಎಂದು ತಿಳಿಸಿದ್ದರು.

ಅಷ್ಟಕ್ಕೂ ಅವರ್ಯಾರು ಗೊತ್ತಾ. ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ, ಮುನಿರತ್ನ, ಸೋಮಶೇಖರ್, ಭೈರತಿ  ಬಸವರಾಜ್, ಮಹೇಶ್ ಕುಮಟಳ್ಳಿ, ಡಿ. ಸಿ ಪಾಟೀಲ್, ಸುಧಾಕರ್, ಎಂಟಿಬಿ  ನಾಗರಾಜ್, ಆನಂದ್ ಸಿಂಗ್, ರೋಷನ್ ಬೇಗ್, ಶಿವರಾಂ ಹೆಬ್ಬಾರ್, ಪ್ರತಾಪ್ ಗೌಡ ಪಾಟೀಲ್, ಸೇರಿದಂತೆ ಇನ್ನಿತರ ನಾಲ್ವರು. ಇದರ ಜೊತೆಗೆ ಪಕ್ಷೇತರರಾದ  ಆರ್. ಶಂಕರ್ ಮತ್ತು ನಾಗೇಶ್ ಅವರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿದ್ದರು. ಪ್ರಸ್ತುತ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲವಾದ್ದರಿಂದ ಮುಂದೇನು ಮಾಡುತ್ತಾರೆ ಎಂಬುದು ಕುತೂಹಲ ಕಾರಿಯಾದ ವಿಷಯವಾಗಿದೆ. ಇವರ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. 


Find Out More:

Related Articles: