ಪಾಕಿಸ್ತಾನ ಭಾರತದ ವಿರುದ್ಧ ಮತ್ತೊಂದು ಕುತಂತ್ರಕ್ಕೆ ಮುಂದಾಗಿದೆ. ಹೌದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಿತ್ತು ಹಾಕಿದ ಕ್ರಮದ ವಿರುದ್ಧ ಪಾಕಿಸ್ತಾನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಇದೇ ಕಾರಣಕ್ಕೆ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಸಮರ ಇದೀಗ ಸೈಬರ್ ಜಗತ್ತನ್ನೂ ವ್ಯಾಪಿಸಿದೆ. ಹಾಗಾದರೆ ಏನಿದು ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್..
ಇದನ್ನು ನೀವು ನಂಬಲೇಬೇಕು. ಹೌದು ಭಾರತೀಯ ಸೇನಾಧಿಕಾರಿಗಳ ನಕಲಿ ಸಾಮಾಜಿಕ ಜಾಲತಾಣಗಳನ್ನು ಸೃಷ್ಟಿಸಿ ಅಪಪ್ರಚಾರಕ್ಕೆ ಪಾಕಿಸ್ತಾನ ಕೈಹಾಕಿದೆ. ನೋಡಿ ಕುಂತ್ರದ ಬುದ್ದಿಯ ಪಾಕಿಸ್ತಾನದ ಏನೆಲ್ಲ ಪ್ಲಾನ್ ಮಾಡಿದೆ ಅನ್ನೋದನ್ನು. ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸೇರಿದಂತೆ ಕನಿಷ್ಠ 50ಕ್ಕೂ ಹೆಚ್ಚು ಉನ್ನತ ಸೇನಾಧಿಕಾರಿಗಳ ನಕಲಿ ವೈಯಕ್ತಿಕ ಟ್ವಿಟ್ಟರ್ ಹ್ಯಾಂಡಲ್ಗಳು ಸೃಷ್ಟಿಯಾಗಿವೆ.
ಇದನು ತಿಳಿದು ಬಂದ ತಕ್ಷಣವೇ, ಭದ್ರತಾ ಏಜೆನ್ಸಿಗಳ ಕೋರಿಕೆ ಮೇರೆಗೆ ಇವುಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗೆ ಬಾರತೀಯ ಸೇನೆಯ ಅಧಿಕಾರಿಗಳ ಟ್ವೀಟ್ ಅಕೌಂಟ್ಗಳನ್ನ ಇಟ್ಟುಕೊಂಡು ದಾರಿ ತಪ್ಪಿಸುವ ಕೆಲಸವನ್ನು ಮಾಡೋಕೆ ಪಾಕಿಸ್ತಾನ ಮುಂದಾಗಿದೆ. ಇತ್ತೀಚೆಗೆ ಕಳೆದ ಆರು ದಿನಗಳಲ್ಲಿ ನಮ್ಮ 69 ಭಾರತೀಯ ಸೈನಿಕರು ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಸೇವೆಯಲ್ಲಿರುವ ಕರ್ನಲ್ ಒಬ್ಬರ ನಕಲಿ ಟ್ವಿಟ್ಟರ್ ಹ್ಯಾಂಡಲ್ನಿಂದ ಟ್ವೀಟ್ ಆಗಿದೆ.
ಇದಷ್ಟೇ ಅಲ್ಲ, ಇನ್ನೂ ಹಲವರ ಖಾತೆಯಿಂದ ಕೆಲವೊಂದು ಟ್ವೀಟ್ ಮಾಡಲಾಗಿದೆ. "ನಮ್ಮ ಗುಪ್ತಚರ ವರದಿಯ ಪ್ರಕಾರ, 700ಕ್ಕೂ ಹೆಚ್ಚು ಕಾಶ್ಮೀರಿಗಳ ಹತ್ಯೆಯಾಗಿದ್ದು, ಸಾವಿರಕ್ಕೂ ಅಧಿಕ ಮಹಿಳೆಯರ ಅತ್ಯಾಚಾರ ನಡೆದಿದೆ. ಶಾಲಾ ಕಾಲೇಜುಗಳು ಮುಚ್ಚಿವೆ. ನಮಗೆ ನಾಚಿಕೆಯಾಗುತ್ತಿದೆ" ಎಂದು ಮಿಲಿಟರಿ ಕಾರ್ಯಾಚರಣೆಗಳ ನಿವೃತ್ತ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಅವರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಆದರೆ ಇದೀಗ ಭದ್ರತಾ ದೃಷ್ಟಿಯಿಂದ ಇಂತಹ ಟ್ವೀಟ್ ಅಕೌಂಟ್ ಗಳನ್ನು ತೆಗೆದುಹಾಕಲಾಗಿದೆ. ಒಟ್ಟಿನಲ್ಲಿ ಪಾಕಿಸ್ತಾನದ ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ.