ಸಿಎಂ ಯಡಿಯೂರಪ್ಪ ಕೈಗೊಂಡ ಮಹತ್ವದ ನಿರ್ಧಾರಗಳು

somashekhar
ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ, ಸಂಪ್ರದಾಯದಂತೆ ಮೊದಲ ಬಾರಿಗೆ ಕ್ಯಾಬಿನೆಟ್ ಸಭೆ ನಡೆಸಲಾಯ್ತು. ಈ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಎರಡು ಮಹತ್ವದ ನಿರ್ದಾರಗಳನ್ನು ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ ಆ ಘೋಷಣೆಗಳು ಏನು ಅನ್ನೋದು ಇಲ್ಲಿದೆ ನೋಡಿ.


ಒಂದು, ಕೇಂದ್ರದ ಮೋದಿ ಸರ್ಕಾರ ಮೊದಲನೇ ಅವಧಿ ಅಂತ್ಯದಲ್ಲಿ ಘೋಷಣೆ ಮಾಡಿದ್ದ ಕಿಸಾನ್ ಸಮ್ಮಾನ್ ಯೋಜನೆಯ ಅಡಿ ಕೇಂದ್ರ ಸರ್ಕಾರ 6 ಸಾವಿರ ರೂಪಾಯಿ ಕೊಟ್ಟಿತ್ತು. ಇದೀಗ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಎರಡು ಕಂತುಗಳಲ್ಲಿ 2 ಸಾವಿರದಂತೆ 4 ಸಾವಿರ ರೂಪಾಯಿ ಕೊಡಲು ನಿರ್ಧಾರ ಮಾಡಲಾಗಿದೆ.


ಎರಡು, ನೇಕಾರರ 100 ಕೋಟಿ ಸಾಲ ಮನ್ನಾ ಯೋಜನೆ ಮಾಡ್ತೇನೆ ಎಂದು ಘೋಷಣೆ ಮಾಡಲಾಗಿದೆ. ಆದ್ರೆ ಎಷ್ಟು ಸಾವಿರ ಸಾಲ ಮನ್ನಾ ಆಗುತ್ತೆ. ಎಲ್ಲಿ ಮಾಡಿರುವ ಸಾಲ ಮನ್ನಾ ಆಗುತ್ತೆ ಅನ್ನೋ ಡೀಟೈಲ್ಸ್ ಅಧಿಕೃತ ಆದೇಶ ಹೊರಬಿದ್ದ ಬಳಿಕ ಗೊತ್ತಾಗಬೇಕಿದೆ. ಒಟ್ಟಾರೆ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಎರಡು ಪ್ರಮುಖ ಶ್ರಮಿಕ ವರ್ಗವನ್ನು ಗುರಿಯಾಗಿಟ್ಟುಕೊಂಡು ಆದೇಶ ಹೊರಡಿಸಲಾಗಿದೆ.


Find Out More:

Related Articles: