ಆಗಸ್ಟ್ 20 ರಿಂದ ಜೆಡಿಎಸ್ ಪಾದಯಾತ್ರೆ

somashekhar
ಜೆಡಿಎಸ್ ಪಕ್ಷದ ಸಂಘಟನೆಗಾಗಿ ಹಾಗೂ ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸುವುದಕ್ಕಾಗಿ ಜಂಜನಗೂಡಿನಿಂದ ಮೊದಲ ಹಂತದ ಪಾದಯಾತ್ರೆ ಆರಂಭವಾಗಲಿದೆ. ಅದು ದೇವರಾಜ್ ಅರಸು ಅವರ ಜನ್ಮದಿನ ಆಗಸ್ಟ್ 20 ರಂದು ಆರಂಭವಾಗಲಿದೆ ಎಂದು ಎಂದು ಪಕ್ಷದ ಹಿರಿಯ ನಾಯಕ ವೈ.ಎಸ್.ವಿ ದತ್ತಾ ಅವರು ಹೇಳಿದ್ದಾರೆ.


ಮೊದಲ ಹಂತದಲ್ಲಿ ಅಂದರೆ ಕಾವೇರಿಯಿಂದ ತುಂಗಭದ್ರಾವರೆಗೆ ಹಾಗೂ ಎರಡನೇ ಹಂತದಲ್ಲಿ ಅಂದರೆ ತುಂಗಭದ್ರದಿಂದ ಮಲಪ್ರಭಾದವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪಾದಯಾತ್ರೆ ವಿಚಾರ, ವಿಕಾಸ ಮತ್ತು ವಿಶ್ವಾಸ ಈ ಮೂರು ಪರಿಕಲ್ಪನೆಗಳೊಂದಿಗೆ ನಡೆಯಲಿದೆ.


ಈ ಪಾದಯಾತ್ರೆ ಬಗ್ಗೆ ಸಮಾಲೋಚನೆ ನಡೆಸಲು ಜೂನ್ 29 ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಮ್ಯಾರಿಯಟ್ ಹೋಟೆಲ್ ನಲ್ಲಿ ಸಭೆ ಆಯೋಜಿಸಲಾಗಿದೆ. ಜೂನ್ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ವೈ.ಎಸ್‌.ವಿ.ದತ್ತಾ ಅವರು ಪಕ್ಷದ ವತಿಯಿಂದ ಪಾದಯಾತ್ರೆ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಈಗ ದಿನಾಂಕ ಫೈನಲ್ ಆಗಿದೆ. 


Find Out More:

jds

Related Articles: