ಸ್ವದೇಶಿ ನಿರ್ಮಿತ ಸೂಪರ್ ಸಾನಿಕ್ “ಬ್ರಹ್ಮೋಸ್” ಕ್ಷಿಪಣಿಯಲ್ಲಿರುವ ವೈಶಿಷ್ಟತೆಗಳೇನು..?

Soma shekhar
ಹಲವು ಸ್ವದೇಶಿ ತಂತ್ರಜ್ಞಾನಗಳನ್ನು ಒಳಗೊಂಡ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿ 'ಬ್ರಹ್ಮೋಸ್‌' ಪರೀಕ್ಷೆಯು ಯಶಸ್ವಿಯಾಗಿ ಒಡಿಶಾದ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆಯಿತು.


'ಆತ್ಮನಿರ್ಭರ ಭಾರತ' ಗುರಿ ತಲುಪುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. 'ಸ್ವದೇಶಿಯಾಗಿ ನಿರ್ಮಿಸಿದ ಬೂಸ್ಟರ್‌, ಏರ್‌ಫ್ರೇಮ್‌ ಸೇರಿದಂತೆ ಹಲವು ದೇಶೀಯ ತಂತ್ರಜ್ಞಾನಗಳನ್ನು ಹೊಂದಿರುವ ಕ್ಷಿಪಣಿಯನ್ನು ಬೆಳಗ್ಗೆ 10.30ಕ್ಕೆ ಪರೀಕ್ಷಿಸಲಾಯಿತು. 400 ಕಿ.ಮೀ. ದೂರದವರೆಗೂ ಕ್ರಮಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ' ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಕಟಣೆಯಲ್ಲಿ ತಿಳಿಸಿದೆ.


ಕ್ಷಿಪಣಿಯು ಪ್ರತಿ ಗಂಟೆಗೆ ಅಂದಾಜು 3,457 ಕಿ.ಮೀ ವೇಗದಲ್ಲಿ ಗುರಿಯತ್ತ ಚಿಮ್ಮಿದೆ. 'ಈ ಯಶಸ್ವಿ ಪರೀಕ್ಷೆಯ ಬಳಿಕ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಬೂಸ್ಟರ್‌ ಹಾಗೂ ಇತರೆ ಉಪಕರಣಗಳನ್ನು ಸರಣಿಯಾಗಿ ಉತ್ಪಾದನೆಗೊಳಿಸಲು ಹಸಿರುನಿಶಾನೆ ಸಿಕ್ಕಂತಾಗಿದೆ. ಜಲಾಂತರ್ಗಾಮಿ, ಯುದ್ಧ ಹಡಗುಗಳು ಮತ್ತು ಯುದ್ಧ ವಿಮಾನಗಳು ಅಥವಾ ನೆಲದಿಂದಲೂ ದಾಳಿ ನಡೆಸಲು ಈ ಕ್ಷಿಪಣಿಗಳನ್ನು ಉಪಯೋಗಿಸಬಹುದಾಗಿದೆ. ' ಎಂದು ಡಿಆರ್‌ಡಿಒ ತಿಳಿಸಿದೆ.


450 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ದಾಳಿ ನಡೆಸುವ ಬ್ರಹ್ಮೋಸ್‌ ಕ್ಷಿಪಣಿಯ ಸಾಮರ್ಥ್ಯದ ಪರೀಕ್ಷೆಯನ್ನು 2017ರ ಮಾರ್ಚ್‌ 11ರಂದು ಕೈಗೊಳ್ಳಲಾಗಿತ್ತು. ಬಳಿಕ, ನೆಲದಿಂದ ಕಡಿಮೆ ದೂರದಲ್ಲಿ ದಾಳಿ ನಡೆಸುವ ಸಾಮರ್ಥ್ಯದ ಬಗ್ಗೆ 2019ರ ಸೆಪ್ಟೆಂಬರ್‌ 30ರಂದು ನಡೆಸಲಾಗಿತ್ತು. ಡಿಆರ್‌ಡಿಒ ಹಾಗೂ ರಷ್ಯಾದ ಎನ್‌ಪಿಒಎಂ ಸಂಸ್ಥೆಗಳು ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿವೆ. ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಬಳಿ ಈಗಾಗಲೇ ಕಾರ್ಯಾಚರಣೆಯಲ್ಲಿ ಇರುವ 'ಬ್ರಹ್ಮೋಸ್‌' ಅನ್ನು ಜಗತ್ತಿನಲ್ಲೇ ಅತ್ಯಂತ ವೇಗದ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿ ಎಂದು ಪರಿಗಣಿಸಲಾಗಿದೆ.

ಸೇವೆಯಲ್ಲಿರುವ ಮೊದಲ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್. ಭಾರತೀಯ ನೌಕಾಪಡೆಯ ಬ್ರಹ್ಮೋಸ್ ಶಸ್ತ್ರಾಸ್ತ್ರ ಸಂಕೀರ್ಣದ ಮೊದಲ ಆವೃತ್ತಿಯ ಇಂಡಕ್ಷನ್ 2005 ರಿಂದ ಪ್ರಾರಂಭಿಸಿದ ಐಎನ್‌ಎಸ್ ರಜಪೂತ್ ಮೊದಲ ಹಡಗು ಇದಾಗಿದೆ. ಭವಿಷ್ಯದ ಎಲ್ಲಾ ಹಡಗುಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಮಿಡ್-ಲೈಫ್ ಅಪ್-ಗ್ರೇಡೇಶನ್ಗಾಗಿ ಬರುವ ಹಡಗುಗಳನ್ನು ಕ್ಷಿಪಣಿಯೊಂದಿಗೆ ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಭಾರತೀಯ ಸೇನೆಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮೂರು ರೆಜಿಮೆಂಟ್‌ಗಳನ್ನು ಕೂಡ ಸೇರಿಸಿದೆ.

Find Out More:

Related Articles: