ಕಾಶ್ಮೀರದ ವಿಚಾರವಾಗಿ ಮಾತಾಡಿದ ಟರ್ಕಿಗೆ ಭಾರತದ ನೀಡಿದ ಉತ್ತರ ಏನು ಗೊತ್ತಾ..?

Soma shekhar
ವಿಶ್ವಸಂಸ್ಥೆ 75ನೇ ಸಾಮಾನ್ಯ ಸಭೆ (UNGA)ಯಲ್ಲಿ ಭಾರತದ ಕೇಂದ್ರಾಡಳಿತ ಪ್ರದೇಶ ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಪಾಕ್ ಬೆನ್ನಿಗೆ ನಿಂತು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ ಟರ್ಕಿಗೆ ಭಾರತ ಬೆವರಿಳಿಸಿದೆ.




ಕಾಶ್ಮೀರದ ಜನರ ಆಕಾಂಕ್ಷೆಗೆ ಅನುಗುಣವಾಗಿ ವಿಶ್ವಸಂಸ್ಥೆ ಚೌಕಟ್ಟಿನೊಳಗಿನ ಸಮಸ್ಯೆ ಪರಿಹರಿಸುವುದರ ಪರವಾಗಿ ನಾವಿರುತ್ತೇವೆ ಎಂದಿದ್ದರು ಎರ್ಡೋಗನ್. ಈ ಹೇಳಿಕೆ ಬೆನ್ನಲ್ಲೆ ಟರ್ಕಿ ಅಧ್ಯಕ್ಷರ ನಡೆ ಟೀಕಿಸಿ ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರೂಮೂರ್ತಿ, ಟರ್ಕಿ ಇತರ ರಾಷ್ಟ್ರಗಳ ಸಾರ್ವಭೌಮತ್ವ ಗೌರವಿಸುವುದನ್ನು ಕಲಿಯಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.






ಅಲ್ಲದೆ ಟರ್ಕಿ ಅಧ್ಯಕ್ಷರು ಭಾಷಣದಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪ ಮಾಡಿದ್ದನ್ನು ಗಮನಿಸಿದ್ದೇವೆ. ಎರ್ಡೋಗನ್ ಭಾಷಣದಲ್ಲಿ ಪ್ರಸ್ತಾಪಿಸಿದ ಅಂಶಗಳು ಭಾರತದ ಆಂತರಿಕ ವಿಷಯದಲ್ಲಿ ಮಾಡಿರುವ ಹಸ್ತಕ್ಷೇಪವಾಗಿದೆ. ಇಂತಹ ನಡೆಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಟಿ.ಎಸ್. ತಿರೂಮೂರ್ತಿ ತೀಕ್ಷ್ಣವಾದ ಪ್ರತ್ಯುತ್ತರ ರವಾನಿಸಿದ್ದಾರೆ. ತನ್ನ ಗಡಿಯಲ್ಲೇ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಟರ್ಕಿ, ಭಾರತದ ವಿರುದ್ಧ ತನ್ನ ಕುತಂತ್ರ ನಡೆ ಮುಂದುವರಿಸಿದೆ.







ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಭಾರತದ ಕಣ್ಣು ಕೆಂಪಾಗುವಂತಹ ಹೇಳಿಕೆ ನೀಡಿದ್ದರು. ಕಾಶ್ಮೀರದಲ್ಲಿ ಮೊದಲ ಮಹಾಯುದ್ಧದ ಬಳಿಕ ಉಂಟಾಗಿದ್ದ ಸ್ಥಿತಿ ಉದ್ಭವಿಸಿದೆ. ಒಟ್ಟೊಮನ್ ಚಕ್ರಾಧಿಪತ್ಯದ ವಿರುದ್ಧ ಟರ್ಕಿ ಹೋರಾಟಗಾರರು ನಡೆಸಿದ ಯುದ್ಧದಲ್ಲಿ ಟರ್ಕಿ ಜನರು ಅನುಭವಿಸಿದ ನೋವಿಗೂ ಕಾಶ್ಮೀರದ ಜನತೆ ಅನುಭವಿಸುತ್ತಿರುವ ನೋವಿಗೂ ವ್ಯತ್ಯಾಸವಿಲ್ಲ. ಎಂದು ಕಾಶ್ಮೀರದ ವಿಚಾರದಲ್ಲಿ ಪಾಕ್‌ಗೆ ಬೆಂಬಲ ನೀಡಿದ್ದರು. ಈ ಹೇಳಿಕೆ ಬಳಿಕ ಟರ್ಕಿ ಭಾರತದ ವಿರುದ್ಧ ತನ್ನ ನಡೆ ಮುಂದುವರಿಸಿದೆ. ಭಾರತ ಕೂಡ ಟರ್ಕಿಗೆ ಸರಿಯಾಗೇ ತಿರುಗೇಟು ನೀಡುತ್ತಾ ಬಂದಿದೆ.






ಇಷ್ಟೆಲ್ಲಾ ನಡೆದಿರುವಾಗಲೇ ಕಳೆದ ತಿಂಗಳು ಬಾಲಿವುಡ್ ನಟ ಅಮೀರ್ ಖಾನ್ ಟರ್ಕಿಯ ಅಧ್ಯಕ್ಷರ ಪತ್ನಿಯನ್ನು ಭೇಟಿ ಮಾಡಿದ್ದರು. ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೋಗನ್‌ರನ್ನು ಅಮೀರ್ ಭೇಟಿ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಅಮೀರ್ ಖಾನ್ ವಿರುದ್ಧ ಕಿಚ್ಚು ಹೊತ್ತಿಸಿತ್ತು. ಭಾರತದಲ್ಲಿ ಬಾಲಿವುಡ್ ನಟನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಮೀರ್ ಖಾನ್ ತಮ್ಮ 'ಲಾಲ್ ಸಿಂಗ್ ಛಡ್ಡಾ' ಚಿತ್ರದ ಚಿತ್ರೀಕರಣಕ್ಕಾಗಿ ಟರ್ಕಿಗೆ ತೆರಳಿದ್ದಾಗ ಎಮೈನ್‌ರನ್ನು ಭೇಟಿ ಮಾಡಿದ್ದರು.


 

Find Out More:

Related Articles: