ಪ್ರಧಾನಿ ಮೋದಿಯ ತಿಳಿಸಿದ ವಿಶ್ವ ಎದುರಿಸುತ್ತಿರುವ ವಿವಿಧ ಸಮಸ್ಯೆಗಳೇನು..?

Soma shekhar
ವಿಶ್ವ ಸಂಸ್ಥೆಯಲ 75 ನೇ ವಾರ್ಷಿಕೋತ್ಸವ ಸಮಾಂಭ ಇಂದಿನಿಂದ ಆರಂಭವಾಗುತ್ತಿದ್ದು ಈ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶ್ವ ಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಭಾಗವಹಿಸುತ್ತಿವೆ, ಈ ಒಂದು ಸಮಾರಂಭದ ಪ್ರಯುಕ್ತ ಹಲವು ವಿಷಯವಾಗಿ ಪ್ರಧಾನಿ ಮೋದಿ ಭಾಷಣವನ್ನು  ಮಾಡಿದ್ದಾರೆ.
ಜಗತ್ತಿನ ಮನುಕುಲದ ಒಳಿತಿಗಾಗಿ ಬಹು ಆಯಾಮದ ಸಮಗ್ರ ಸುಧಾರಣೆಗಳ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ವಿಶ್ವಸಂಸ್ಥೆಯ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಇಂದಿನಿಂದ ಆರಂಭವಾಗಿರುವ ಮಹಾಧಿವೇಶನದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ  ಭಾಷಣ ಮಾಡಿದರು.

ವಿಶ್ವ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಸಮಗ್ರ ಸುಧಾರಣೆಗಳು ಇಲ್ಲದೆ ವಿಶ್ವಸಂಸ್ಥೆಯು ವಿಶ್ವಾಸದ ಕೊರತೆಯನ್ನು ಎದುರಿಸುವಂತಾಗಿದೆ ಎಂದು ಅವರು ವಿಷಾದಿಸಿದರು. ಇಂದಿನ ಅಂತರ್ ಸಂಪರ್ಕಿತ ವಿಶ್ವಕ್ಕೆ ಬಹು ಆಯಾಮಗಳ ಸಮಗ್ರ ಸುಧಾರಣೆಗಳ ಅಗತ್ಯವಿದೆ. ಇದು ಎಲ್ಲ ದೇಶಗಳಿಗೂ ಅಭಿಪ್ರಾಯ ವ್ಯಕ್ತಪಡಿಸಲು ಧ್ವನಿಯಾಗುತ್ತದೆ. ಸಮಕಾಲೀನ ಸಮಸ್ಯೆಗಳು ಮತ್ತು ಸವಾಲುಗಳನ್ನು ನಿಭಾಯಿಸಲು ಸಹಕಾರಿಯಾಗುತ್ತದೆ ಹಾಗೂ ಮನುಕುಲ ಕಲ್ಯಾಣಕ್ಕೆ ಗಮನ ಹರಿಸಲು ನೆರವಾಗುತ್ತದೆ ಎಂದು ಮೋದಿ ವಿಶ್ಲೇಷಿಸಿದರು.


ವಿಶ್ವಸಂಸ್ಥೆಯಅತ್ಯಂತ ಪ್ರಬಲ ಅಂಗಸಂಸ್ಥೆಯಾದ ಭದ್ರತಾ ಮಂಡಳಿಗೆ (ಯುಎನ್‍ಎಸ್‍ಸಿ) ಭಾರತ ಮುಂದಿನ ವರ್ಷಜನವರಿ 1ರಿಂದ ಎರಡು ವರ್ಷಗಳ ಅವಧಿಗೆ ಶಾಶ್ವತವಲ್ಲದ ಚುನಾಯಿತ ರಾಷ್ಟ್ರವಾಗಿ ಸೇರ್ಪಡೆಯಾಗಿರುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಅವರ ಬಹು ಆಯಾಮಗಳ ಸಮಗ್ರ ಸುಧಾರಣೆ ಸಲಹೆ ಭಾರೀ ಮಹತ್ವ ಪಡೆದುಕೊಂಡಿದೆ.


ನಾವು ಹಳೆಯದಾದ ವಿಧಾನಗಳನ್ನು ಮುಂದಿಟ್ಟುಕೊಂಡು ಇಂದಿನ ಪ್ರಬಲ ಸವಾಲುಗಳನ್ನು ಎದುರಿಸಿ ಹೋರಾಡಲು ಸಾಧ್ಯವಾಗುವುದಿಲ್ಲ. 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯಲ್ಲಿ ಬಹು ಆಯಾಮಗಳ ಸಮಗ್ರ ಸುಧಾರಣೆಗಳ ಕೊರತೆ ಇದೆ. ಹೀಗಾಗಿ ಸಂಯುಕ್ತ ರಾಷ್ಟ್ರಗಳ ವೇದಿಕೆಯು ವಿಶ್ವಾಸದ ಕೊರತೆಯಿಂದ ಬಳಲುತ್ತಿದೆ ಎಂದು ಅವರು ವಿಷಾದಿಸಿದರು.

ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆ (ಯುಎನ್‍ಜಿಎ) ನಿಮಿತ್ತ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಬಲವರ್ಧಿತ ವ್ಯವಸ್ಥೆಯ ಹೋರಾಟ, ಅಭಿವೃದ್ಧಿ ದೃಷ್ಟಿಕೋನದ ಬಹು ಆಯಾಮಗಳ ಸಮಗ್ರ ಸುಧಾರಣೆ ಹಾಗೂ ಡೆಡ್ಲಿ ಕೊರೊನಾ ವೈರಸ್ ದಾಳಿಯಂಥ ಪಿಡುಗನ್ನು ನಿಭಾಯಿಸಲು ಉತ್ತಮ ರೀತಿಯಲ್ಲಿ ಸಜ್ಜಾಗುವ ಘೋಷಣೆಗಳ ನಿರ್ಣಯವನ್ನು ಅಂಗೀಕರಿಸಿದ್ದು, ಪ್ರಧಾನಿ ಮೋದಿ ಈ ಗೊತ್ತುವಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

Find Out More:

Related Articles: