ಮಾತೃ ಭಾಷೆಯಲ್ಲಿನ ಅಧ್ಯಯನದ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು..?

Soma shekhar
ಒಂದು ಮಗು ತನ್ನ ತನ್ನ ವಿದ್ಯಾಭ್ಯಾಸವನ್ನು ತನ್ನ ಮಾತೃಭಾಷೆಯಲ್ಲಿ ಕಲಿತಾಗ ಮಗುವಿಗೆ ತನ್ನಲ್ಲೇ ಒಂದು ಆತ್ಮ ಶಕ್ತಿ ವೃದ್ಧಿಯಾಗುತ್ತದೆ. ಆದರೆ ಪೋಷಕರು ಮಕ್ಕಳ ಮೇಲೆ ಈ ಭಾಷೆಯನ್ನು ಕಲಿಯಲೇ ಬೇಕು ಎಂದು ಒತ್ತಡವನ್ನು ಏರುತ್ತಾರೆ ಇದರಿಂದ ಮಕ್ಕಳೂ ಪೋಷಕರ ಬಲವಂತಕ್ಕೆ ಕಲಿಯುತ್ತಾರೆಯೇ ಹೊರತು ಸ್ವಯಂ ನಿಷ್ಟೆಯಿಂದ  ಕಲಿಯದೆ ವಂಚಿತರಾಗಬಹುದು. ಹಾಗಾಗಿ ಎಲ್ಲಾ ಮಕ್ಕಳು ಮೊದಲು ಮಾತೃ ಭಾಷೆಯಲ್ಲೇ ಅಧ್ಯಯನವನ್ನು ಮಾಡಬೇಕು .ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ಹೌದು  ಶಾಲೆಗಳಲ್ಲಿ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಬಳಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಒತ್ತಿ ಹೇಳಿದ್ದಾರೆ.

ಭಾಷೆ ಎಂಬುದು ಜ್ಞಾನವನ್ನು ಅಭಿವ್ಯಕ್ತಿಸುವ ಒಂದು ಮಾರ್ಗವಾಗಿದೆ. ಭಾಷೆ ಎಂದಿಗೂ ವಿಜ್ಞಾನವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯ ಆಯೋಜಿಸಿದ್ದ 'ಶಿಕ್ಷಾ ಪರ್ವ'ದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯಲ್ಲಿ ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲಾಗಿದ್ದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಸಬಹುದಾದ ಇತರ ಭಾಷೆಗಳನ್ನು ಕಲಿಸಲು ಯಾವುದೇ ನಿಷೇಧವಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು.
ಭಾರತ ತನ್ನ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿರುವ 2022 ವೇಳೆಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಸಿದ್ಧಗೊಳ್ಳಲಿದೆ ಎಂದರು. ಎನ್‌ಇಪಿ ಘೋಷಿಸಿದ ನಂತರ ಬೋಧನಾ ಮಾಧ್ಯಮ ಯಾವುದು? ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಭಾಷೆ ಶಿಕ್ಷಣದ ಮಾಧ್ಯಮವಾಗಿದೆ, ಭಾಷೆಯೇ ಶಿಕ್ಷಣವಲ್ಲ ಎಂಬ ವೈಜ್ಞಾನಿಕ ಸತ್ಯವನ್ನು ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕು. ಮಕ್ಕಳು ಸುಲಭವಾಗಿ ಕಲಿಯಬಹುದಾದ ಯಾವುದೇ ಭಾಷೆಯಾಗಿರಲಿ ಅದು ಬೋಧನಾ ಮಾಧ್ಯಮವಾಗಿರಬೇಕು ಎಂದರು.
ತರಗತಿಗಳಲ್ಲಿ ಹೇಳುವ ವಿಷಯ ಮಕ್ಕಳು ಅರ್ಥಮಾಡಿಕೊಳ್ಳಬಲ್ಲರೆ? ಎಂಬುದನ್ನು ಪರೀಕ್ಷಿಸಲು ನಾನು ಬಯಸುತ್ತೇನೆ. ಅವರು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಈ ಪ್ರಕ್ರಿಯೆ ಹೆಚ್ಚು ಸುಲಭವಾಗಲಿದೆ ಎಂದರು. ಕಲಿಕೆಯ ವಿಷಯಕ್ಕಿಂತ ಮಕ್ಕಳು ಭಾಷೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಶ್ರಮಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಶಿಕ್ಷಣದಲ್ಲಿ ಉನ್ನತ ಶ್ರೇಣಿ ಹೊಂದಿರುವ ಎಸ್ಟೋನಿಯಾ, ಐರ್ಲೆಂಡ್, ಫಿನ್ಲ್ಯಾಂಡ್, ಜಪಾನ್, ಪೋಲೆಂಡ್ ಮತ್ತು ದಕ್ಷಿಣ ಕೊರಿಯಾದಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಮಕ್ಕಳು ಮನೆಯಲ್ಲಿ ಬಳಸುವ ಭಾಷೆಯಲ್ಲಿ ತ್ವರಿತವಾಗಿ ಕಲಿಯಬಲ್ಲರು. ಅನ್ಯ ಭಾಷೆಯಲ್ಲಿ ಕಲಿಕೆ ಮಕ್ಕಳಲ್ಲಿ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ ಎಂದು ಪ್ರಧಾನಿ ನುಡಿದರು.

Find Out More:

Related Articles: