ಕಳೆದ 24ಗಂಟೆಯಲ್ಲಿ ದಾಖಲಾದ ಕೊರೋನಾ ಸೋಂಕು ಎಷ್ಟು..?

Soma shekhar
ಭಾರತದಲ್ಲಿ ಕೊರೊನಾ ಪೆಡಂಭೂತದ ಎರಡನೆ ದಾಳಿಯ ಆತಂಕದ ನಡುವೆಯೇ ಸೆಪ್ಟೆಂಬರ್ ಮಾಸ ದೇಶಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಿದೆ. ಸೋಂಕು ಮತ್ತು ಸಾವಿನಲ್ಲಿ ನಿರಂತರ ಹೆಚ್ಚಳ ಕಂಡುಬರುತ್ತಿರುವುದು ಭಾರತೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ. 




ಜಗತ್ತಿನ ಕೋವಿಡ್ ಹಾವಳಿ ಪೀಡಿತ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಹೆಮ್ಮಾರಿಯ ಆರ್ಭಟ ಮತ್ತಷ್ಟು ಜೋರಾಗಿದ್ದು, ಸೋಂಕಿನಲ್ಲಿ ಮತ್ತೆ ಹೊಸ ದಾಖಲೆ ನಿರ್ಮಾಣವಾಗಿದೆ. ಒಂದೇ ದಿನ 97,579 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ ದೇಶದಲ್ಲಿ ಗುರುವಾರ 96,559 ಮತ್ತು ಬುಧವಾರ 95,745 ಹೊಸ ಕೇಸ್‍ಗಳು ದಾಖಲಾಗಿತ್ತು.



ಇದರೊಂದಿಗೆ ದೇಶದಲ್ಲಿ ಸತತ ಮೂರನೇ ದಿನ 95,000+ ಸೋಂಕು ಪ್ರಕರಣಗಳು ವರದಿಯಾಗಿದೆ. 24 ತಾಸುಗಳ ಅವಧಿಯಲ್ಲಿ 1,201 ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಮೊನ್ನೆ 1,209 ಜನರು ಸಾವಿಗೀಡಾಗಿದ್ದರು. ಕೂಡ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಸಾವಿನ ಪ್ರಕರಣವಾಗಿದೆ. ಸತತ ಆರನೇ ದಿನ 1,110ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 77,000 ದಾಟಿದೆ.



ಈ ತಿಂಗಳ ಆರಂಭದಿಂದಲೂ ಅಬ್ಬರಿಸಿ ಬೊಬ್ಬರಿಯುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ನಿಂದ ದೇಶದಲ್ಲಿ ಗಂಡಾಂತರಕಾರಿ ಪರಿಸ್ಥಿತಿ ತಲೆದೋರಿದೆ. ಭಾರತದಲ್ಲಿ 12 ದಿನಗಳಿಂದಲೂ ಸರಾಸರಿ 90,000 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ನಿನ್ನೆ 97,579 ಸೋಂಕು ಪ್ರಕರಣಗಳೊಂದಿಗೆ. ಒಟ್ಟು ರೋಗಿಗಳ ಸಂಖ್ಯೆ 46,59,985ಕ್ಕೇರಿದ್ದು, ಇಂದು ರಾತ್ರಿ ವೇಳೆಗೆ ಹೊತ್ತಿಗೆ 47 ಲಕ್ಷ ಮೀರುವ ಸಾಧ್ಯತೆ ಇದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು.



ಈ ತಿಂಗಳಲ್ಲಿ ಸತತ 12ನೇ ದಿನ 1,000ಕ್ಕೂ ಅಧಿಕ ಸಾವು ಪ್ರಕರಣಗಳು ವರದಿಯಾಗಿರುವುದು ದೇಶದಲ್ಲಿನ ಆತಂಕಕಾರಿ ಸ್ಥಿತಿಗೆ ಸಾಕ್ಷಿಯಾಗಿದೆ. ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.77.77ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ ಸುಮಾರು 5.41 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.


ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ 9.58 ಲಕ್ಷ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ ಸುಮಾರು 36.24 ಲಕ್ಷ ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ.



Find Out More:

Related Articles: