ಜೂನ್ 23 ರಂದು ರಾಜ್ಯದಲ್ಲಿ ದಾಖಲಾದ ಕೊರೋನಾ ಸೊಂಕಿನ ಸಂಖ್ಯೆ ಎಷ್ಟು ಗೊತ್ತಾ..?

Soma shekhar

ಕೊರೋನಾ ವೈರಸ್ ರಾಜ್ಯದಲ್ಲಿ ತನ್ನ ಪ್ರತಾಪವನ್ನು ಹೆಚ್ಚಿಸಿ ದಿನದಿಂದ ದಿನಕ್ಕೆ ಅತೀ ಹೆಚ್ಚು ಜನರನ್ನು ತನ್ನ ಮಡಿಲಿಗೆ ಆಕಿಕೊಳ್ಳುತ್ತಿದೆ ಇದರಿಂದ ಕೊರೋನಾ ಸೋಂಖಿತರ ಸಂಖ್ಯೆ 9 ಸಾವಿರ ಗಡಿಯನ್ನು ಮೀರಿ ನುಗ್ಗುತ್ತಿದೆ. ಅದರಲ್ಲೂ ಕೊರೋನಾ ವೈರಸ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕೂಡ ಪ್ರತಿನಿತ್ಯ ಕೊವಿಡ್ ನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ರಾಜಧಾನಿಯ ಜನರಲ್ಲಿ ಕೊರೋನಾದ ಆತಂಕದ ಛಾಯೆ ಕಾಡುತ್ತಿದೆ...

 

ಹೌದು ರಾಜ್ಯದಲ್ಲಿ ಮಂಗಳವಾರವೂ 322 ಹೊಸ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕು ಸಂಬಂಧಿತ ಕಾರಣಗಳಿಂದ 8 ಜನರು ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆಯಾಗಿದ್ದು, 3,563 ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 274 ಮಂದಿ ಬಿಡುಗಡೆಯಾಗಿದ್ದು, ಒಟ್ಟು ಇಲ್ಲಿಯವರೆಗೆ 6,004 ಮಂದಿ ಬಿಡುಗಡೆಯಾಗಿದ್ದಾರೆ.

 

ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಕಾಟ ಮಿತಿ ಮೀರಿದ್ದು ರಾಜ್ಯದಲ್ಲಿ ಇಂದು ಪತ್ತೆಯಾಗಿರುವ ಒಟ್ಟು 322 ಪ್ರಕರಣಗಳ ಪೈಕಿ 107 ಪ್ರಕರಣಗಳು ಇಲ್ಲಿಯೇ ವರದಿಯಾಗಿದೆ ಮತ್ತು ನಗರದಲ್ಲಿ ಇನ್ನೂ 996 ಕೋವಿಡ್ 19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು (107) ಹೊರತುಪಡಿಸಿದಂತೆ ಇಂದು , ಬಳ್ಳಾರಿ 53, ಬೀದರ್‌ 22, ಮೈಸೂರು 21, ವಿಜಯಪುರ 16, ಯಾದಗಿರಿ 13, ಉಡುಪಿ 11, ಗದಗ 9, ದಕ್ಷಿಣ ಕನ್ನಡ 8, ಕೋಲಾರ 8, ಹಾಸನ 7, ಕಲಬುರಗಿ 6, ಚಿಕ್ಕಬಳ್ಳಾಪುರ 5, ಶಿವಮೊಗ್ಗ5, ಧಾರವಾಡ 4, ತುಮಕೂರು 4, ಕೊಪ್ಪಳ 4, ಚಾಮರಾಜನಗರ 4, ರಾಯಚೂರು 3, ಉತ್ತರ ಕನ್ನಡ 3, ಮಂಡ್ಯ 2, ಬೆಳಗಾವಿ 2, ದಾವಣಗೆರೆ 2, ಹಾವೇರಿ 2, ಕೊಡಗಿನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

 

ಕಲಬುರಗಿ 48, ಬೀದರ್‌ 42, ರಾಯಚೂರು 36, ಬಳ್ಳಾರಿ 33, ಯಾದಗಿರಿ 30, ಬೆಂಗಳೂರು ನಗರ 24, ಮಂಡ್ಯ 13, ಧಾರವಾಡ 8, ಉತ್ತರ ಕನ್ನಡ 6, ಹಾಸನ 6, ದಾವಣಗೆರೆ 6, ಶಿವಮೊಗ್ಗ 3, ದಕ್ಷಿಣ ಕನ್ನಡ 2, ವಿಜಯಪುರ 2, ಹಾವೇರಿಯಲ್ಲಿ ಒಬ್ಬರು ಬಿಡುಗಡೆಯಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ ಇಂದು 274 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ 6004 ಕೋವಿಡ್ 19 ಸೋಂಕಿತರು ಗುಣಮುಖರಾದಂತಾಗಿದೆ.

ಬೆಂಗಳೂರು ನಗರದಲ್ಲಿ ಇಂದು 6 ಮಂದಿ ಸಾವನ್ನಪ್ಪಿದ್ದು, ದಕ್ಷಿಣ ಕನ್ನಡ, ಬಳ್ಳಾರಿಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಇತ್ತ ರಾಜ್ಯದಲ್ಲಿ 120 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಸಂಖ್ಯೆ ಒಂದೇ ದಿನ 40 ಪ್ರಕರಣಗಳು ಹೆಚ್ಚಾಗಿದೆ.

 

274 ಸೋಂಕಿತರ ಪೈಕಿ 64 ಮಂದಿ ಅಂತರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದರೆ 5 ಮಂದಿ ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಸೋಮವಾರ ಐಸಿಯುನಲ್ಲಿ 80 ಮಂದಿ ಇದ್ದರೆ ಇಂದಿನ ವರದಿಯಲ್ಲಿ ಈ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.

ಇದೀಗ ರಾಜ್ಯದಲ್ಲಿ ಒಟ್ಟು 3563 ಸಕ್ರಿಯ ಕೋವಿಡ್ 19 ಸೋಂಕಿನ ಪ್ರಕರಣಗಳಿದ್ದು ಇವರಲ್ಲಿ 120 ಜನ ಐ.ಸಿ.ಯು.ನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೋವಿಡ್ 19 ಸೋಂಕು ಸಂಬಂಧಿತ 150 ಸಾವು ಸಂಭವಿಸಿದ್ದು ಚೇತರಿಕೆ ಪ್ರಮಾಣವೇ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

 

ಇದುವರೆಗೆ ಕೋವಿಡ್ ಸಂಬಂಧಿತ ಅತೀ ಹೆಚ್ಚು ಸಾವು ಸಂಭವಿಸಿರುವ ಜಿಲ್ಲೆಯು ಬೆಂಗಳೂರು ನಗರವಾಗಿದೆ. ಇಲ್ಲಿ ಕೋವಿಡ್ ಸೋಂಕಿಗೆ ಈಗಾಗಲೇ 73 ಜನರು ಬಲಿಯಾಗಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಬೀದರ್ (15), ಕಲಬುರಗಿ (11), ದಾವಣಗೆರೆ (07) ಹಾಗೂ ವಿಜಯಪುರ (07) ಜಿಲ್ಲೆಗಳಿವೆ.

 

Find Out More:

Related Articles: