ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಬಾಕ್ಸಿಂಗ್ ಸಿನಿಮಾ

somashekhar
ಬಾಕ್ಸಿಂಗ್ ಆಟವನ್ನೇ ಇಟ್ಟುಕೊಂಡು ಬಂದಿರೋ ಸಿನಿಮಾಗಳು ಸಾಕಷ್ಟು. ಸ್ಯಾಂಡಲ್ ವುಡ್‌ನಿಂದ ಹಿಡಿದು ಬಾಲಿವುಡ್ ಲೋಕದ ತನಕ ಅನೇಕಾನೇಕ ಸಿನಿಮಾಗಳು ಬಂದು ಹೋಗಿವೆ. ತೀರ ಇತ್ತೀಚೆಗೆ ಹೇಳಬೇಕು ಎಂದರೆ ಕನ್ನಡದಲ್ಲಿಯೇ ಪೈಲ್ವಾನ ಸಿನಿಮಾ ಬಂದಿದೆ. ಇದು ಕುಸ್ತಿ ಅಷ್ಟೇ ಅಲ್ಲ, ಬಾಕ್ಸಿಂಗ್ ಕತೆಯ ಎಳೆಯನ್ನೂ ಹೊಂದಿದೆ. ಸುದೀಪ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸನಲ್ಲಿ ಕೊಳ್ಳೆ ಹೊಡೆಯುತ್ತಿದೆ.


ಇದೀಗ ಸ್ಯಾಂಡಲ್ ವುಡ್‌ ಲೋಕಕ್ಕೆ ಮತ್ತಷ್ಟು ಬಾಕ್ಸಿಂಗ್ ಸಿನಿಮಾ ಬರುವ ಲಕ್ಷಣ ಗೋಚರಿಸುತ್ತಿದೆ. ಹೌದು, ಸ್ಯಾಂಡಲ್​ವುಡ್​ನಲ್ಲಿ ಕ್ರೀಡಾ ಪ್ರಧಾನ ಚಿತ್ರಗಳ ಹೊಸ ಪರ್ವವೊಂದು ಆರಂಭವಾಗುತ್ತಿದೆ. ಒಂದೆಡೆ ಅಖಾಡಕ್ಕಿಳಿದ 'ಪೈಲ್ವಾನ್'​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮತ್ತೊಂದೆಡೆ ದುನಿಯಾ ವಿಜಿ ಅಭಿನಯದ 'ಕುಸ್ತಿ' ಕಮಾಲ್ ಮಾಡಲು ಅಣಿಯಾಗುತ್ತಿದೆ. ಇದರ ನಡುವೆ ಮತ್ತೊಂದು ಚಿತ್ರ ಕೂಡ ಸೆಟ್ಟೇರಿದೆ. ಹಾಗಾದರೆ ಆ ಚಿತ್ರ ಯಾವುದು ಗೊತ್ತಾ?


ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಅವರು ಹೀರೋ ಆಗಿ ಅಭಿನಯ ಮಾಡಲಿದ್ದಾರೆ. 'ಕಿರಿಕ್ ಪಾರ್ಟಿ' ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಇದೀಗ ಈ  ಚಿತ್ರದ ಮುಹೂರ್ತವೂ ಕೂಡ ಮುಗಿದಿದೆ. ಇನ್ನೊಂದು ವಿಚಾರ ಏನಪ್ಪ ಅಂದರೆ, ಕರಮ್ ಚಾವ್ಲಾ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 


ಈ ಚಿತ್ರಕ್ಕೆ ಇನ್ನೂ ಹೆಸರನ್ನೇ ಇಟ್ಟಿಲ್ಲ. ಆದರೆ ಇದನ್ನು ಟೆನ್ ಎಂದು ಶೀರ್ಷಿಕೆ ಫೈನಲ್ ಮಾಡಬಹುದು ಎಂದು ಹೇಳಾಗುತ್ತಿದೆ. ಚಿತ್ರದ ಶೂಟಿಂಗ್ ಈಗಷ್ಟೇ ಆರಂಭವಾಗಿದೆ. ಶೇ. 70 ರಿಂದ 80 ಸನ್ನಿವೇಶಗಳು ಬಾಕ್ಸಿಂಗ್​ಗೆ ಸಂಬಂಧಿಸಿರಲಿದೆ ಎಂದು ತಿಳಿದು ಬಂದಿದೆ. ಬಾಕ್ಸಿಂಗ್ ರಿಂಗ್​ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ ರೆಫ್ರಿ 10 ರವರೆಗೂ ಕೌಂಟ್ ಮಾಡುತ್ತಾರೆ. ಇದನ್ನೇ ಆಧಾರ ಆಗಿ ಇಟ್ಟುಕೊಂಡು, ಇದೇ ಚಿತ್ರದ ರೋಚಕ ದೃಶ್ಯ ಆಗಿರುವುದುರಿಂದ  ಚಿತ್ರಕ್ಕೆ 'ಟೆನ್' ಎನ್ನುವ ಶೀರ್ಷಿಕೆ ಸೂಕ್ತ ಎನ್ನಲಾಗುತ್ತಿದೆ.


ಈ ಚಿತ್ರಕ್ಕಾಗಿ ವಿನಯ್ ರಾಜ್​ಕುಮಾರ್ ಸಿದ್ಧತೆ ನಡೆಸುತ್ತಿದ್ದಾರೆ. ಬಾಕ್ಸಿಂಗ್ ಚಿತ್ರದ ನಾಯಕನ ಪಾತ್ರದಲ್ಲಿ ಅಭಿನಯಿಸುವುದೇನು ಸುಲಭದ ಮಾತಾ? ಹೀಗಾಗಿ ಕಳೆದ ಐದು ತಿಂಗಳಿಂದ ವಿನಯ್ ರಾಜಕುಮಾರ್ ದೇಹ ದಂಡಿಸುತ್ತಿದ್ದು, ಸಂಪೂರ್ಣ ಹೊಸ ಗೆಟಪ್​ ಮೂಲಕ ತೆರೆ ಮೇಲೆ ಕಾಣಿಸಲಿದ್ದಾರೆ. ನಾಯಕಿಯಾಗಿ ಅನುಷಾ ರಂಗನಾಥ್ ಕಾಣಿಸಿಕೊಳ್ಳಲಿದ್ದಾರೆ.


Find Out More:

Related Articles: