'ಮನೆ ಮಾರಿ ಸುಮಾರು ಒಂದೂವರೆ ಕೋಟಿ ರೂ. ಹಣ ಕೊಟ್ಟಿದೀನಿ'

frame 'ಮನೆ ಮಾರಿ ಸುಮಾರು ಒಂದೂವರೆ ಕೋಟಿ ರೂ. ಹಣ ಕೊಟ್ಟಿದೀನಿ'

Soma shekhar
ಬೆಂಗಳೂರು: ನನ್ನ ಬಳಿ ಹಣವಿದ್ದಿಲ್ಲ ಆದರೂ ನನ್ನ ಮನೆ ಮಾರಿ ಒಂದೂವರೆ ಕೋಟಿ ನೀಡಿದ್ದೇನೆ ಎಂದು ಆಯುಷ್ಮಾನ್​ ಭವ ಚಿತ್ರದ ಹಣಕಾಸು ವಿಚಾರಕ್ಕೆ ಉಂಟಾಗಿರುವ ಗಲಾಟೆ ಸಂಬಂಧ ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್​ ಅವರು ಭಾವುಕರಾಗಿ ಮಾತನಾಡಿದ್ದಾರೆ. 
 
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶನಿವಾರ ರಾತ್ರಿ ನಮ್ಮ ಮನೆಯ ಬಾಗಿಲನ್ನು ದಬ ದಬ ಅಂತ ತಟ್ಟಿದರು. ನನ್ನ ಮಗ ಮನೆಯಲ್ಲಿರಲಿಲ್ಲ. ನಾನು ಮತ್ತು ನನ್ನ ಹೆಂಡತಿ ಮಾತ್ರ ಮನೆಯಲ್ಲಿದ್ದೆವು. ನೋಡಿದಾಗ ಜಯಣ್ಣ, ರಮೇಶ್ ಹಾಗೂ ನಾಲ್ಕು ಮಂದಿ ಬಂದಿದ್ದರು. ತುಂಬಾ ಮಾತನಾಡಿದರು. ಉಡಾಯಿಸಿ ಬಿಡ್ತೀವಿ ಎಂದು ಕೂಗಾಡಿದರು. ಸಿನಿಮಾ ಅನ್ನೋದು ವ್ಯಾಪರ. ನಮಗೂ ಲಾಸ್ ಆಗಿದೆ. ಹಾಗಂತ ನಾವು ಯಾರ ಮನೆಗಾದರೂ ಹೋಗಿ ಬಾಗಿಲು ತಟ್ಟಿದ್ದೀವಾ? ಕಾನೂನಿಗೋಸ್ಕರನೇ ಪೊಲೀಸ್ ಠಾಣೆಗೆ ಹೋಗಿದ್ದು, ಮನೆ ಮಾರಿ ಸುಮಾರು ಒಂದೂವರೆ ಕೋಟಿ ರೂ. ಹಣ ಕೊಟ್ಟಿದೀನಿ ಎಂದು ಕಣ್ಣೀರು ಹಾಕಿದರು.
 
ದ್ವಾರಕೀಶ್​ ಪುತ್ರ ಯೋಗೀಶ್​ ದ್ವಾರಕೀಶ್​ ಮಾತನಾಡಿ, ಸಿನಿಮಾ ಪ್ಲಾಫ್​ ಆಯ್ತು. ನಾನು ಯಾವತ್ತು ಯಾರಿಗೂ ಕೊಡೋದಿಲ್ಲ ಎಂದು ಹೇಳಿಲ್ಲ. ಕೇಳೊದಕ್ಕೊಂದು ಲೆಕ್ಕಚಾರ ಇರುತ್ತದೆ. ಒಂದು ವರ್ಷ ಸಮಯ ಕೊಡಿ, ಬೇರೆ ಸಿನಿಮಾಗಳನ್ನು ಮಾಡಿ ಕೋಡ್ತಿವಿ ಎಂದು ಹೇಳಿದೆವು. ಬಂದು ಗಲಾಟೆ ಮಾಡುವಂತಹ ಅವಶ್ಯಕತೆ ಏನಿತ್ತು? ರೌಡಿಸಂ ಏಕೆ ಎಂದಿದ್ದಾರೆ. 
 
ಘಟನೆ ಹಿನ್ನೆಲೆ ಇದೇ ನೋಡಿ:
 
ನಿರ್ಮಾಪಕ ದ್ವಾರಕೀಶ್, ಪುತ್ರ ಯೋಗೀಶ್ ಹಾಗೂ ವಿತರಕ ಜಯಣ್ಣ ನಡುವೆ ಆಯುಷ್ಮಾನ್​ ಭವ ಚಿತ್ರದ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿದೆ. ಆಯುಷ್ಮಾನ್ ಭವ ಸಿನಿಮಾ ವಿತರಣೆಯ ಹಕ್ಕನ್ನು ಜಯಣ್ಣ ಪಡೆದಿದ್ದರು. ದ್ವಾರಕೀಶ್ ಅವರಿಗೆ 4.5 ಕೋಟಿ ಫೈನಾನ್ಸ್ ಕೊಡಿಸಿದ್ದರಂತೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋತ ನಂತರ, ಫೈನಾನ್ಸ್ ಹಣ ವಾಪಸ್ ನೀಡಿಲ್ಲ. ಜನವರಿ 30ರವರೆಗೂ ಸಮಯ ಕೇಳಿದ್ದರು. ಹಣ ನೀಡದೇ ಫೋನ್ ಬ್ಲಾಕ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Find Out More:

Related Articles:

Unable to Load More