ಬೆಂಗಳೂರು: ಹ್ಯಾಟ್ರಿಕ್ ಹೀರೋ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಡಬಲ್ ಧಮಾಕ. ಹೌದು, ಒಂದು ಕಡೆ ಶಿವಣ್ಣ ಆನಂದ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಣ್ಣ ಹಚ್ಚಿ 34 ವರ್ಷಗಳಾದ್ರೆ, ಜೊತೆಗೆ ಅವರ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಈ ಎರಡು ಖುಷಿಯನ್ನು ಅಭಿಮಾನಿಗಳು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಹೌದು, ಆ ಸ್ಟೋರಿ ಇಲ್ಲಿದೆ ನೋಡಿ.
ಅಣ್ಣಾವ್ರ ಮಗ, ಹ್ಯಾಟ್ರಿಕ್ ಹೀರೋ, ಸೆಂಚೂರಿ ಸ್ಟಾರ್, ಕರುನಾಡ ಚಕ್ರವರ್ತಿ ಅಂತೆಲ್ಲಾ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಶಿವಣ್ಣ, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 34 ವರ್ಷ. 1986ರಲ್ಲಿ ಮೊದಲ ಸಿನಿಮಾ ಆನಂದ್, ಸತತ 38 ವಾರಗಳ ಯಶಸ್ವಿ ಪ್ರದರ್ಶನ ಕಂಡು ಚಿತ್ರರಂಗಕ್ಕೆ ಒಬ್ಬ ಅದ್ಭುತ ನಟನನ್ನ ಕೊಟ್ಟಿತ್ತು.ಇದೀಗ ಆ ನಟ ಸೂಪರ್ ಸ್ಟಾರ್ ಆಗಿ 122 ಸಿನಿಮಾಗಳನ್ನು ಪೂರೈಸಿದ್ದಾರೆ.
ಆನಂದ್ ಸಿನಿಮಾ 24 ವರ್ಷ ಪೂರೈಸಿದ ಬೆನ್ನಲ್ಲೇ ಅಭಿಮಾನಿಗಳು ಕೇಕ್ ಕತ್ತರಿಸಿ, ಹೂಮಾಲೆ ಹಾಕಿ, ಪುಟ್ಟದೊಂದು ಗೌರವ ಸಮರ್ಪಿಸಿದರು. ಇನ್ನು ಇದೇ ದಿನ ಶಿವಣ್ಣನ 123ನೇ ಸಿನಿಮಾ ಆರ್.ಡಿ.ಎಕ್ಸ್ ಸೆಟ್ಟೆರಿದ್ದು ಕೂಡ ವಿಶೇಷವಾಗಿತ್ತು. ಅಂದ್ಹಾಗೇ ಆರ್.ಡಿ.ಎಕ್ಸ್ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಬೆಂಗಳೂರಿನ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಆಗಮಿಸಿ, ಚಿತ್ರಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ಇನ್ನು ಈಗಾಗಲೇ ತಮಿಳಿನಲ್ಲಿ ಈಟಿ ಎಂಬ ಸೂಪರ್ ಹಿಟ್ ಚಿತ್ರವೊಂದನ್ನ ನಿರ್ದೇಶನ ಮಾಡಿರೋ ರವಿ ಅರಸು ಕನ್ನಡದಲ್ಲಿ ಫಸ್ಟ್ ಟೈಮ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಹಾಗೂ ಸೂಪರ್ಸ್ಟಾರ್ ರಜಿನಿಕಾಂತ್, ಕಮಲ ಹಾಸನ್, ಡಾ.ವಿಷ್ಣುವರ್ದನ್ ರ ಸಿನಿಮಾಗಳನ್ನ ನಿರ್ಮಾಣ ಮತ್ತು ಡಿಸ್ಟ್ರಿಬ್ಯೂಟ್ ಮಾಡಿರೋ ತಮಿಳಿನ ಸತ್ಯಜ್ಯೋತಿ ಫಿಲ್ಮ್ ನ ತ್ಯಾಗರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ.
ಪ್ರಸ್ತುತ ಆರ್.ಡಿ.ಎಕ್ಸ್ ಚಿತ್ರೀಕರಣ ಹಿಮಾಚಲ ಪ್ರದೇಶ, ಬಾಂಬೆ, ಭೂಪಾಲ್, ಹುಬ್ಬಳ್ಳಿ ಸೇರಿದಂತೆ ಹಲವೆಡೆ ನಡೆಯಲಿದ್ದು, ಏಪ್ರಿಲ್ನಿಂದ ಶೂಟಿಂಗ್ ಶುರುವಾಗಲಿದ್ಯಂತೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇದೇ ವರ್ಷ ನವೆಂಬರ್ ಅಥವಾ ಅಕ್ಟೋಬರ್ ಗೆ ಸಿನಿಮಾ ಬಿಡುಗಡೆಯಾಗಲಿದೆ.