ಪೂಜಾ ಹೆಗ್ಡೆಗಾಗಿ ಐದು ದಿನ ಫುಟ್‍ ಪಾತ್‍ ನಲ್ಲೇ ವಾಸಿಸಿದ ಅಭಿಮಾನಿ

Soma shekhar
ಟಾಲಿವುಡ್ ಟಾಪ್ ನಟಿ ಪೂಜಾ ಹೆಗ್ಡೆ ಗಾಗಿ ಅಭಿಮಾನಿಯೊಬ್ಬ  ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ದಿನಗಳ ಕಾಲ ಮುಂಬೈ ರಸ್ತೆಯಲ್ಲೇ ಕಳೆದಿದ್ದಾನೆ. ಹೇಗಾದರೂ ಮಾಡಿ ಪೂಜಾ ಹೆಗ್ಡೆಯನ್ನು ಭೇಟಿಯಾಗಬೇಕು ಎಂಬ ಉದ್ದೇಶದಿಂದ ಚಳಿ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಫುಟ್‍ ಪಾತ್ ಮೇಲೆ ಕಾದು ಕುಳಿತಿದ್ದಾನೆ. ಆ ಅಭಿಮಾನಿಯಾಗಿ ಪೂಜಾ ಹೆಗ್ಡೆ ಮಾಡಿದ್ದೇನು, ಹೇಳಿದ್ದೇನು ಗೊತ್ತಾ!
 
ಅಭಿಮಾನಿಗಳ ಸೆಲ್ಫಿ, ಅತಿರೇಕ ಒಮ್ಮೊಮ್ಮೆ ಸಿನಿಮಾ ತಾರೆಗಳ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದುಂಟು. ಅಂತಹದ್ದೇ ಒಂದು ಕಿರಿಕಿರಿ ಘಟನೆ ಕನ್ನಡ ಮೂಲದ ನಟಿ ಪೂಜಾ ಹೆಗ್ಡೆ  ಅವರಿಗೂ ಎದುರಾಗಿದೆ. ಅಭಿಮಾನಿಯೊಬ್ಬ ಪೂಜಾ ಹೆಗ್ಡೆಯನ್ನು ಭೇಟಿಯಾಗುವ ಸಲುವಾಗಿ ಮುಂಬೈನ ಅವರ ಮನೆ ಮುಂದೆ ಐದು ದಿನಗಳ ಕಾದ ಘಟನೆ ನಡೆದಿದೆ. ತೆಲುಗು ಯುವಕನೊಬ್ಬ ಒಂದಲ್ಲ, ಎರಡಲ್ಲ ಐದು ದಿನಗಳ ಕಾಲ ಮುಂಬೈ ರಸ್ತೆಯಲ್ಲೇ ಕಳೆದಿದ್ದಾನೆ. ಹೇಗಾದರೂ ಮಾಡಿ ಪೂಜಾ ಹೆಗ್ಡೆಯನ್ನು ಭೇಟಿಯಾಗಲೇಬೇಕೆಂದು ಮಳೆ, ಚಳಿ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಫುಟ್‍ಪಾತ್ ಮೇಲೆ ಕಾದು ಕುಳಿತಿದ್ದಾನೆ. ಈಸಂಗತಿಯನ್ನು ಸ್ವತಃ ಪೂಜಾ ಹೆಗ್ಡೆ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಯುವಕನ ಜೊತೆಗೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
 
"ನನಗಾಗಿ ಮುಂಬಯಿಗೆ ಆಗಮಿಸಿ, ಐದು ದಿನಗಳ ಕಾಲ ನಿರೀಕ್ಷಿಸಿದ್ದಕ್ಕೆ ಧನ್ಯವಾದಗಳು ಭಾಸ್ಕರ್ ರಾವ್. ನಿನ್ನ ಅಭಿಮಾನ ನನ್ನ ಹೃದಯವನ್ನು ಸ್ಪರ್ಶಿಸಿದೆ. ಆದರೆ ನನ್ನ ಅಭಿಮಾನಿ ಇಷ್ಟೆಲ್ಲಾ ಕಷ್ಟಪಟ್ಟಿದ್ದು ತುಂಬಾ ನೋವಿನ ಸಂಗತಿ. ನನಗಾಗಿ ಬಂದ ಅಭಿಮಾನಿ ಈ ರೀತಿ ಫುಟ್‍ಪಾತ್ ಮೇಲೆ ನಿದ್ದೆ ಮಾಡಿದ್ದು ಸರಿಯಲ್ಲ. ಇದನ್ನು ನಾನು ಎಂದಿಗೂ ಬಯಸಲ್ಲ. 
 
ನೀನು ಎಲ್ಲೇ ಇದ್ದರೂ ನಿನ್ನ ಪ್ರೀತಿಯನ್ನು ನಾನು ಫೀಲ್ ಆಗುತ್ತೇನೆ, ಪ್ರಾಮಿಸ್ ಮಾಡುತ್ತಿದ್ದೇನೆ. ಅಭಿಮಾನಿಗಳೇ ನನ್ನ ಬಲ. ಲವ್ ಯೂ" ಎಂದು ಶೇರ್ ಮಾಡಿದ್ದಾರೆ.  ಹೌಸ್‌ಫುಲ್ 4 ಸಿನಿಮಾದಲ್ಲಿ ಪೂಜಾ ಹೆಗ್ಡೆ ಕಾಣಿಸಿದ್ದರು. ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ತೆಲುಗಿನಲ್ಲಿ ಸಾಲುಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇದೀಗ ತೆರೆಕಂಡಿರುವ 'ಅಲಾ ವೈಕುಂಠಪುರಮುಲೋ' ಸಿನಿಮಾ ಭಾರೀ ಸದ್ದು ಮಾಡುತ್ತಿದೆ.
 

Find Out More:

Related Articles: