ಸ್ಕ್ರಿಪ್ಟ್ ಕೇಳದೆ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ!?

frame ಸ್ಕ್ರಿಪ್ಟ್ ಕೇಳದೆ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ!?

Soma shekhar
ಡೆಮೋ ಪೀಸ್, ಸದ್ಯ ಒಂಥರಾ ವಿಚಿತ್ರ ಕಥೆಯ ಸರಳತೆಯನ್ನು ಪ್ರತಿನಿಧಿಸುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಸೋನಾಲ್‌ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನವ ನಟ ಭರತ್‌ ಭೂಪಣ್ಣಗೆ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.ಈ ಹಿಂದೆ ಕೊಂಚ ರೊಮ್ಯಾಂಟಿಕ್‌ ಆಗಿ ಕಾಣಿಸಿಕೊಂಡಿದ್ದ ಸೋನಾಲ್‌ “ಡೆಮೋ ಪೀಸ್‌’ನಲ್ಲಿ ಪಕ್ಕಾ ಫ್ಯಾಮಿಲಿ ಗರ್ಲ್ ಲುಕ್‌ನಲ್ಲಿ ಆಡಿಯನ್ಸ್‌ ಮುಂದೆ ಬರಲಿದ್ದಾರಂತೆ. “ಡೆಮೋ ಪೀಸ್‌’ ಪಾತ್ರದ ಬಗ್ಗೆ ಮಾತನಾಡುವ ಸೋನಾಲ್‌. “ಈ ಚಿತ್ರದಲ್ಲಿ ನನ್ನು ಆದ್ಯ ಎಂಬ ಕಾಲೇಜು ಹುಡುಗಿಯ ಪಾತ್ರ. ಲವ್‌ ಬಗ್ಗೆ ನಂಬಿಕೆಯಿರದ, ಲವ್‌ ಅಂದ್ರೆ ಆಗೋದೇ ಇಲ್ಲ ಅಂತಿರುವ ಹುಡುಗಿಯೊಬ್ಬಳು ಹೇಗೆ ಲವ್‌ನಲ್ಲಿ ಬೀಳ್ತಾಳೆ ಎನ್ನುವುದೇ ನನ್ನ ಪಾತ್ರ.
 
ನಿಜ ಹೇಳಬೇಕೆಂದರೆ ಪಾತ್ರ ಚಿಕ್ಕದಾದರೂ ನನಗಂತೂ ಬಹಳ ಹತ್ತಿರವಾಗಿದೆ. ಈ ಪಾತ್ರವನ್ನು ನಾನಂತೂ ತುಂಬ ಎಂಜಾಯ್‌ ಮಾಡಿದ್ದೇನೆ. ಪಾತ್ರ ಕೂಡ ಆಡಿಯನ್ಸ್‌ ಮೇಲೆ ಇಂಪ್ಯಾಕ್ಟ್ ಮಾಡಿ ಅವರ ಮನಸ್ಸಿನಲ್ಲಿ ಉಳಿಯುತ್ತದೆ. ಚಿತ್ರದಲ್ಲಿ ಲವ್‌, ರೋಮ್ಯಾನ್ಸ್‌, ಆ್ಯಕ್ಷನ್‌ ಎಲ್ಲಾ ಇದೆ. ಆಡಿಯನ್ಸ್‌ಗೆ ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಪ್ಯಾಕೇಜ್‌ ಇರುವ ಚಿತ್ರ’ ಎಂದು ವಿವರಣೆ ಕೊಡುತ್ತಾರೆ. ಇನ್ನು ಈ ಚಿತ್ರವನ್ನು ನಟಿ ಸ್ಪರ್ಶ ರೇಖಾ ನಿರ್ಮಿಸುತ್ತಿದ್ದು, ಈ ಹಿಂದೆ ಸೋನಾಲ್‌ “ಎಂಎಲ್‌ಎ’ ಚಿತ್ರ ಮಾಡುವಾಗ ರೇಖಾ ಅವರ ಪರಿಚಯವಾಗಿ ನಂತರ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಇಲ್ಲಿಯವರೆಗೆ ಹಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ವಿವೇಕ್‌ “ಡೆಮೋ ಪೀಸ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. 
 
“ಮೊದಲು ಚಿತ್ರವನ್ನು ಒಪ್ಪಿಕೊಂಡು ಆ ನಂತರ ಈ ಚಿತ್ರದ ಸ್ಕ್ರಿಪ್ಟ್ ಕೇಳಿದೆ. ಸ್ಕ್ರಿಪ್ಟ್ ತುಂಬ ಇಷ್ಟವಾಯ್ತು. ನಿರ್ದೇಶಕ ವಿವೇಕ್‌ ಮತ್ತು ತಂಡ ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಚಿತ್ರ ಕಥೆಯೇ ಸ್ಕ್ರಿಪ್ಟ್ ಕೇಳದೆ ಒಪ್ಪಿಕೊಂಡಿದ್ದು ಇದಕ್ಕೆ ಎನ್ನುತ್ತಾರೆ ಸೋನಾಲಿ. ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು ಹಿಟ್ ಆಗುವುದರಲ್ಲಿ ಎರಡು ಮಾತು ಇಲ್ಲ ಎನ್ನುತ್ತಾರೆ.

Find Out More:

Related Articles:

Unable to Load More