'ಚಪಾಕ್ ಚಿತ್ರತಂಡದ ನೂತನ ಪ್ರಯೋಗವೇನು ಗೊತ್ತಾ!!

Soma shekhar
ಚಪಾಕ್, ಬಾಲಿವುಡ್ ನ ವಾಸ್ತವ ಕಥೆಯಾಧಾರಿತ ಚಿತ್ರ, ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದ. ಆದರೆ ಇಷ್ಟರಲ್ಲೇ ದೀಪಿಕಾ ಜನರ ಮದ್ಯೆ ಬೆರೆತಿದ್ದಾರೆ. ಇದೀಗ ದೀಪಿಕಾ ಸೇರಿದಂತೆ ಚಿತ್ರತಂಡ ನೂತನ ಪ್ರಯೋಗ ಮಾಡಿದ್ದು, ಅದೇನು ಎಂಬ ಎಲ್ಲಾ ಡೀಟೆಲ್ಸ್ ಇಲ್ಲಿದೆ ನೋಡಿ. 
 
ಆ್ಯಸಿಡ್ ದಾಳಿಗೆ ಒಳಗಾಗಿರುವ ಸಂತ್ರಸ್ತರನ್ನು ಸಮಾಜ ಹೇಗೆಲ್ಲಾ ನೋಡುತ್ತದೆ ಎಂಬುದನ್ನು ತಿಳಿದುಕೊಳ್ಳಲು 'ಛಪಾಕ್' ಚಿತ್ರತಂಡ ಹೊಸ ಪ್ರಯೋಗವನ್ನು ಮಾಡಿದೆ. ಬಾಲಿವುಡ್ ಡಿಂಪಲ್ ತಾರೆ ದೀಪಿಕಾ ಪಡುಕೋಣೆ ಈ ಚಿತ್ರದ ಟೈಟಲ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಮೇಘನಾ ಗುಲ್ಜಾರ್ ಚಿತ್ರದ ನಿರ್ದೇಶಕಿ. ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಜೀವನ ಕಥೆ ಆಧಾರವಾಗಿ ತೆರೆಗೆ ತಂದಿರುವ ಈ ಸಿನಿಮಾ ಜನವರಿ 10ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾಗಾಗಿ ದೀಪಿಕಾ ಆ್ಯಸಿಡ್ ಸಂತ್ರಸ್ತೆ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
 
ಅಷ್ಟೇ ಅಲ್ಲ ಈ ಚಿತ್ರದ ಶೂಟಿಂಗ್ ದೆಹಲಿ ಬೀದಿಗಳಲ್ಲಿ ನಡೆಯುತ್ತಿದ್ದರೂ ಯಾರೂ ದೀಪಿಕಾರನ್ನು ಗುರುತಿಸಲೇ ಇಲ್ಲ.ಶಾಕ್ ಆದರೂ ಸಹ ನಂಬಲೇಬೇಕಾದ ವಿಷಯವಾದ.  ಆ್ಯಸಿಡ್ ದಾಳಿ ಸಂತ್ರಸ್ತರ ಬಗ್ಗೆ ಸಮಾಜ ಹೇಗೆಲ್ಲಾ ವರ್ತಿಸುತ್ತದೆ ಎಂಬುದನ್ನು ತೋರಿಸಲು ಛಪಾಕ್ ತಂಡ ದೆಹಲಿಯ ಸೂಪರ್ ಮಾರ್ಕೆಟ್, ಬಟ್ಟೆ ಅಂಗಡಿ, ಫ್ಯಾನ್ಸಿ ಮಳಿಗೆಗಳಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಇಟ್ಟು ಚಿತ್ರೀಕರಿಸಿದೆ. ಈ ಚಿತ್ರದಲ್ಲಿ ದೀಪಿಕಾ ಅವರು ಮಾಲತಿ ಗೆಟಪ್‌ನಲ್ಲಿ ಮೇಕಪ್ ಮಾಡಿಕೊಂಡು ಕೆಲವು ಮಂದಿ ಆ್ಯಸಿಡ್ ದಾಳಿ ಸಂತ್ರಸ್ತೆಯರ ಜೊತೆಗೆ ಶಾಪಿಂಗ್ ಹೋಗಿದ್ದು ನಡೆಯಿತು. 
 
ಅಂಗಡಿ, ಮಳಿಗೆಗಳಲ್ಲಿ ಇವರ ಮುಖ ನೋಡಿದ ಕೆಲವರು ಅಸಹ್ಯ ಪಟ್ಟರು. ಇನ್ನೂ ಕೆಲವರು ಅವರ ಮುಖ ನೋಡಿ ಬೇಸರಿಸಿಕೊಂಡರು. ಸಂತ್ರಸ್ತರ ಬಗ್ಗೆ ಸಮಾಜದ ಧೋರಣೆ ಬದಲಾಗಬೇಕು ಎಂಬ ಉದ್ದೇಶದಿಂದ ಈ ವಿಡಿಯೋವನ್ನು ರೂಪಿಸಲಾಗಿದೆ. ಸಾಮಾನ್ಯವಾಗಿ ದೀಪಿಕಾ ಪಡುಕೋಣೆ ಇದ್ದಾರೆ ಎಂದರೆ ಸಾವಿರಾರು ಮಂದಿ ಅಭಿಮಾನಿಗಳು ಅವರನ್ನು ಸುತ್ತುವರಿಯುತ್ತಾರೆ. ಈ ಗೆಟಪ್ ನಿಂದ ಯಾರೂ ಹತ್ತಿರ ಬರಲಿಲ್ಲ.ಅಷ್ಟೇ ಅಲ್ಲ ಅದು ದೀಪಿಕಾ ಎಂಬುದೂ ಅವರ ಗಮನಕ್ಕೆ ಬರಲಿಲ್ಲ. ಇದೀಗ ಈ ಸುದ್ದಿ ಫುಲ್ ವೈರಲ್ ಆಗಿದೆ.

Find Out More:

Related Articles: