ವಿರಾಟ್ ಶ್ರೀಲಿಲಾ ಕಿಸ್ ಬಾರಿಸಿದ ಸೆಂಚುರಿ

Soma shekhar
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ನಟ ವಿರಾಟ್ ಹಾಗೂ ಶ್ರೀಲೀಲಾ ಅಭಿನಯದ ಕಿಸ್ ಚಿತ್ರ ಇದೀಗ ಯಶಸ್ವಿಯಾಗಿ ನೂರು ದಿನ ಗಟಿದಾಟಿದೆ. ಚಿತ್ರ ಕಿಸ್ ಕೊಡುತ್ತಲೇ ನೂರು ದಿನ ಗಡಿ ದಾಟಿರುವ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
 
ಬಹುದಿನಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಸೆಂಚುರಿ ಬಾರಿಸಿದ ಚಿತ್ರವಿದು. ಎಪಿ ಅರ್ಜುನ್‌ ನಿರ್ದೇಶನದ ವಿರಾಟ್‌ ಮತ್ತು ಶ್ರೀಲೀಲಾ ನಟನೆಯ ಕಿಸ್‌ ಚಿತ್ರ ನೂರು ದಿನ ಪ್ರದರ್ಶನ ಕಾಣುತ್ತಾ ಭರ್ಜರಿ ಯಶಸ್ಸು ಗಳಿಸಿದೆ. ಇದೀಗ ನಿರ್ದೇಶಕ ಮತ್ತು ಹೀರೊ ವಿರಾಟ್‌ 'ಕಿಸ್‌' ಚಿತ್ರತಂಡದೊಂದಿಗೆ ಶಬರಿಮಲೆಗೆ ದರ್ಶನಕ್ಕೆ ಹೋಗಿದ್ದಾರೆ.
 
ಇದರ ಜತೆ ನೂರು ದಿನದ ಯಶಸ್ಸನ್ನು ಅದ್ದೂರಿಯಾಗಿ ಆಚರಿಸಲಿರುವ ನಿರ್ದೇಶಕ ಅರ್ಜುನ್‌, ಅಂದು ತಮ್ಮ ಮುಂದಿನ ಚಿತ್ರವನ್ನು ಪ್ರಕಟಿಸಲಿದ್ದಾರೆ. 'ಚಿತ್ರದ ಯಶಸ್ಸು ಖುಷಿ ಕೊಟ್ಟಿದೆ. ಸದ್ಯದಲ್ಲೇ ನನ್ನ ಹೊಸ ಸಿನಿಮಾ ಬಗ್ಗೆ ಪ್ರಕಟಿಸಲಿದ್ದೇನೆ' ಎಂದಿದ್ದಾರೆ ಅರ್ಜುನ್‌. ಈಗಾಗಲೇ ಅರ್ಜುನ್ ಹೊಸ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿವೆ.ಕಳೆದ ವರ್ಷ ತೆರೆಕಂಡ ಚಿತ್ರಗಳಲ್ಲಿ ನೂರು ದಿನ ಕಂಡ ಕನ್ನಡ ಸಿನಿಮಾಗಳು ಬೆರಳೆಣಿಕೆಯಷ್ಟು ಮಾತ್ರ. ಸೆಪ್ಟೆಂಬರ್‌ನಲ್ಲಿ ತೆರೆಕಂಡ ಚಿತ್ರ ಕಿಸ್‌, ಹೀರೊ ಹಿರೋಯಿನ್‌ ಆಗಿ ವಿರಾಟ್‌ ಮತ್ತು ಶ್ರೀಲೀಲಾಗೆ ಮೊದಲ ಚಿತ್ರ. ರೊಮ್ಯಾಂಟಿಕ್‌ ಲವ್‌ ಸ್ಟೋರಿ ಇರುವ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರದ ಮೂಲಕ ಈಗ ಇವರಿಬ್ಬರಿಗೂ ಅನೇಕ ಆಫರ್‌ಗಳು ಸಾಲುಗಟ್ಟಿವೆ.
 
'ಕಿಸ್‌ ಚಿತ್ರ ನನಗೆ ಬಹಳ ವಿಶೇಷ. ತೆರೆಕಂಡ ಮೊದಲ ಚಿತ್ರ ನೂರು ದಿನ ಪ್ರದರ್ಶನ ಕಾಣುತ್ತೆ ಎಂದರೆ ಯಾರಿಗೆ ಖುಷಿ ಆಗಲ್ಲ ಹೇಳಿ. ನಾವೆಲ್ಲರೂ ಈ ಚಿತ್ರದ ಯಶಸ್ಸಿಗೆ ಕಾದಿದ್ದೆವು' ಎಂದಿದ್ದಾರೆ ನಟಿ ಶ್ರೀಲೀಲಾ. ಚಿತ್ರದ ಯಶಸ್ಸಿನಿಂದ ವಿರಾಟ್‌ ಕೂಡಾ ಫುಲ್‌ ಥ್ರಿಲ್‌ ಆಗಿದ್ದಾರೆ. 'ತುಂಬಾ ಖುಷಿಯಾಗ್ತಿದೆ.. ಕಿಸ್‌ ಬಗ್ಗೆ ನಮಗಿದ್ದ ನಿರೀಕ್ಷೆ ನಿಜವಾಗಿದೆ. ಮೊದಲ ಚಿತ್ರ 100 ಡೇಸ್‌ ಓಡೋದು ಅಂದ್ರೆ ಸಣ್ಣ ಮಾತಲ್ಲ. ಮೈಸೂರಿನಲ್ಲಿ ಇಂದಿಗೆ ನೂರನೇ ದಿನ ಪ್ರದರ್ಶನ ಕಂಡು ತುಂಬಾ ಖುಷಿಯಾಗಿದೆ ಎಂದು ನಟ ವಿರಾಟ್ ತಿಳಿಸಿದ್ದಾರೆ.

Find Out More:

Related Articles: