ಹೊಸಬರ ಪ್ರಯತ್ನಕ್ಕೆ ಕಿಚ್ಚ ಸುದೀಪ್ ಮಾಡಿದ್ದೇನು ಗೊತ್ತಾ

Soma shekhar
   
ಫೈಲ್ವಾನ್ ಖ್ಯಾತಿಯ ನಟ ಸುದೀಪ್ ಇದೀಗ ಚಂದನವನದಲ್ಲಿ ಬಿಗ್ ಬಾಸ್ ಮತ್ತು ಕೋಟಿಕೊಬ್ಬ 3 ಚಿತ್ರದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಆದರೂ ಸಹ ಹೊಸಬರ ಪ್ರಯತ್ನಕ್ಕೆ ಪ್ರತಿಕ್ರಿಯಿಸಿರುವ ನಟ ಸುದೀಪ್ ಈಗೂ ಮಾಡ್ತಾರಾ ಎಂದು ಇದೀಗ ಅಶ್ಚರ್ಯವಾಗುವಂತೆ ಮಾಡಿದೆ. 
 
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ.  ಇದೀಗ ಹೊಸತಂಡದ ವಿಭಿನ್ನ ಪ್ರಯತ್ನ ‘ಐ1’ ಚಿತ್ರಕ್ಕೆ ಕಿಚ್ಚ ಸುದೀಪ್​ ಸಾಥ್​ ಸಿಕ್ಕಿದೆ. ಹೊಸ ತಂಡದ ಬೆನ್ನು ತಟ್ಟಿದ ಸ್ಯಾಂಡಲ್​​ವುಡ್​ ಮಾಣಿಕ್ಯ.  ಐ1’.. ಆರ್. ಎಸ್​. ರಾಜ್​ಕುಮಾರ್​ ನಿರ್ದೇಶನದ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ. ಟೀಸರ್​ ಮತ್ತು ಟೈಟಲ್​ ಟ್ರ್ಯಾಕ್​ನಿಂದ ಭರವಸೆ ಮೂಡಿಸಿದ ಚಿತ್ರತಂಡ ಇದೀಗ ಅಫಿಷಿಯಲ್​ ಟ್ರೈಲರ್ ಲಾಂಚ್​ ಮಾಡಿದೆ. ಕಿಶೋರ್​, ರಂಜನ್​ ಮತ್ತು ಧೀರಜ್​ ಪ್ರಸಾದ್​​ ‘ಐ1’ ಚಿತ್ರದ ಲೀಡ್​ ರೋಲ್​​ಗಳಲ್ಲಿ ನಟಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​, ‘ಐ1’ ಸಿನಿಮಾ ಟ್ರೈಲರ್​ ಲಾಂಚ್​ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ರು. ತಮ್ಮ ಬ್ಯುಸಿ ಶೆಡ್ಯೂಲ್​​ ನಡುವೆಯೂ ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿದ್ರು.
 
ಮೂರು ಜನ ಒಂದು ಟಿಟಿಯಲ್ಲಿ ಸಿಕ್ಕಿ ಹಾಕಿಕೊಂಡಾಗ ಏನೆಲ್ಲಾ ಆಗುತ್ತೆ ಅನ್ನೋದನ್ನ ‘ಐ1’ ಸಿನಿಮಾದಲ್ಲಿ ಹೇಳಲಾಗ್ತಿದೆ. ವಿಭಿನ್ನ ಮನಸ್ಥಿತಿ ಇರುವವರು ಒಂದೆಡೆ ಸೇರಿದರೆ ಏನೆಲ್ಲಾ ಆಗಬಹುದು ಅನ್ನೋದನ್ನ ತೋರಿಸೋ ಪ್ರಯತ್ನ ಮಾಡಲಾಗ್ತಿದೆ. ವಿಬಿನ್​ ಸಂಗೀತ, ಶಿನೋಬ್​ ಛಾಯಾಗ್ರಹಣ ಚಿತ್ರಕ್ಕಿದೆ. ಕುತೂಹಲಭರಿತವಾಗಿರುವ ಟ್ರೈಲರ್​​ ಭರವಸೆ ಮೂಡಿಸಿದೆ. ಐ1 ಸಿನಿಮಾ ತೆರೆಗೆ ಬರೋಕ್ಕು ಮೊದ್ಲೆ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ. ಇನ್ನು ನಿರ್ಮಾಪಕಿ ಶೈಲಜಾ ಪ್ರಕಾಶ್​​ ಸಿನಿಮಾ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದಾರೆ.
 
ಡಿಸೆಂಬರ್​ 6ಕ್ಕೆ ‘ಐ1’ ಸಿನಿಮಾ ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ. ವಿಭಿನ್ನ ಟೈಟಲ್​​ ಮತ್ತು ಅಷ್ಟೆ ವಿಭಿನ್ನ ಕಾನ್ಸೆಪ್ಟ್​ನಿಂದ ನಿರೀಕ್ಷೆ ಹುಟ್ಟಾಕಿರೋ ಸಿನಿಮಾ ಯಾವ ರೀತಿ ಸೌಂಡ್​ ಮಾಡುತ್ತೋ ಕಾದು ನೋಡ್ಬೇಕು. ಚಿತ್ರ ಅದ್ಧೂರಿಯಾಗಿ ಮೂಡಿಬಂದಿದ್ದು ಪ್ರೇಕ್ಷಕರ ಮಹಾಶಯ ಹೇಗೆ ಸ್ವೀಕರಿಸುತ್ತಾರೆ ಎಂಬುದು ಕಾದುನೋಡಬೇಕಾಗಿದೆ. 

Find Out More:

Related Articles: