ರಚಿತ ರಮೇಶ್ ರ ಅದ್ಭುತ ಕ್ರೈಂ ಸ್ಟೋರಿ ಇಲ್ಲಿದೆ ನೋಡಿ

Soma shekhar
ಸ್ಯಾಂಡಲ್ ವುಡ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ತಂದೆ ಖ್ಯಾತ ನಟ ಅರವಿಂದ್ ರಮೇಶ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಲ್ವಾ ಇತ್ತೀಚೆಗಷ್ಟೇ ರಮೇಶ್ ರ ದೊಡ್ಡ ಮಗಳ ಮದುವೆ ವಿಜೃಂಭಣೆಯಿಂದ ನಡೆಸಲಾಯಿತು. ಇದೀಗ ತಂದೆ ಮಗಳು ಕ್ರೈಂ ಸ್ಟೋರಿ ಯಲ್ಲಿ ಬಂಧಿಯಾಗಿದ್ದಾರೆ. ಏನಿದು, ಯಾಕಿದು ಸ್ಟೋರಿ ಅಂತ ನಾವ್ ಹೇಳ್ತೀವಿ ನೋಡಿ. 
 
ಹೀಗೆ ‘100’ ಚಿತ್ರದ ಶೂಟಿಂಗ್‌ಸೆಟ್ ಫುಲ್ ಕ್ರೌಡೆಡ್ ಆಗಿತ್ತು. ಚಿತ್ರೀಕರಣದ ನಡುವೆಯೇ ಚಿತ್ರತಂಡ ಮಾತಿಗೆ ಹಾಜರಾಯಿತು. ಮೊದಲಿಗೆ ರಮೇಶ್ ಅರವಿಂದ್ ಅವರ ಮಾತು. ‘ಬೆಂಕಿ, ಅಧಿಕಾರ, ಚಾಕು ಮತ್ತು ಸೋಷಿಯಲ್ ಮೀಡಿಯಾ ಯಾರ ಕೈಯಲ್ಲಿರಬೇಕು, ಹೇಗೆ ಬಳಸಬೇಕು, ಅದರಲ್ಲೂ ಸೋಷಿಯಲ್ ಮಾಧ್ಯಮವನ್ನು ದುರುಪಯೋಗ ಮಾಡಿಕೊಂಡರೆ ಏನಾಗುತ್ತದೆ, ಹಾಗೆ ಮಿಸ್ ಯೂಸ್ ಮಾಡಿಕೊಳ್ಳುವವನನ್ನು ಸಂಹಾರ ಮಾಡುವುದಕ್ಕೆ ಹೊರಟರೆ ಒಂದು ಕತೆ ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳಬಹುದು ಎಂಬುದೇ ಈ ಚಿತ್ರದ ಕತೆ’ ಎನ್ನುತ್ತಾ ತಮ್ಮ ಇಡೀ ಚಿತ್ರತಂಡವನ್ನು ಪರಿಚಯಿಸಿದರು.
 
ರಮೇಶ್ ಅರವಿಂದ್ ಅವರ ಪರಿಚಯಿಸಿದಂತೆ ರಚಿತಾ ರಾಮ್ ಲವಲವಿಕೆಯ ನಟಿ. ತೆಲುಗಿನ ಪೂರ್ಣ ಪರ್ಫೆಕ್ಟ್ ತಾರೆ. ರವಿ ಬಸ್ರೂರು ಅವರು ಅಮೇಜಿಂಗ್ ಟ್ಯಾಲೆಂಟ್ ಇರೋ ಸಂಗೀತ ನಿರ್ದೇಶಕ, ರಮೇಶ್ ರೆಡ್ಡಿ ಅವರು ಪ್ಯಾಷನೇಟ್ ನಿರ್ಮಾಪಕ. ಗೌರವ್, ಶಿಲ್ಪಾ ಶೆಟ್ಟಿ, ಮಾಲತಿ ಸುಧೀರ್, ವಿಶ್ವ ಉಳಿದ ಮುಖ್ಯ ಪಾತ್ರಧಾರಿಗಳು. ಜಂಬೆ ಅಸೋಸಿಯೇಟ್, ಮೋಹನ್ ಕಲಾ ನಿರ್ದೇಶನ. ಇವಿಷ್ಟು ವಿವರಣೆಗಳ ಜತೆಯಲ್ಲಿ ಉಳಿದವರು ಮಾತಿಗೆ ನಿಂತರು. ‘ಒಳ್ಳೆಯ ಸಿನಿಮಾ.
 
ಒಳ್ಳೆಯ ಪಾತ್ರ. ರಮೇಶ್ ಅವರು ಸಿನಿಮಾಗಳಲ್ಲಿ ಕೆಲಸ ಮಾಡಬೇಕು ಎನ್ನುವ ಕನಸು ಈ ಚಿತ್ರದ ಮೂಲಕ ಈಡೇರಿದೆ. ಅವರ ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದವರು ನಾವು. ಈಗ ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ತುಂಬಾ ಪಾಸಿಟಿವ್ ಚಿಂತನೆಯ ನಿರ್ದೇಶಕರು. ನಿರ್ಮಾಪಕರು ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಚಿತ್ರವು ಅತ್ಯದ್ಭುತವಾಗಿ ಮೂಡಿ ಬಂದಿದ್ದು 100 ದಿನ ಓಡೋದರಲ್ಲಿ ಸಂಶಯವೇ ಇಲ್ಲದಂತೆ.

Find Out More:

Related Articles: