ಅಕ್ಷಯ್ ಕುಮಾರ್ ಮತ್ತೊಂದು ಮದುವೆ

frame ಅಕ್ಷಯ್ ಕುಮಾರ್ ಮತ್ತೊಂದು ಮದುವೆ

Soma shekhar

ಬಾಲಿವುಡ್ ನ ಸ್ಟಾರ್ ನಟ, ಬಾಕ್ಸ್ ಆಫೀಸ್‌ನ ಸುಲ್ತಾನ್ ಅಕ್ಷಯ್ ಕುಮಾರ್ ಇದೀಗ ಮದುವೆಯಾಗಲು ಹೊರಟಿದ್ದಾರೆ. ಹೌದು, ಶಾಕ್ ಆದರೂ ಸಹ ನಂಬಲೇ ಬೇಕಾದ ವಿಷಯವಿದು. ಯಾರನ್ನು ಮದುವೆ ಆಗಲಿದ್ದಾರೆ, ಏನಿದರ ಅಸಲೀ ಕಥೆ ಎಂಬುದನ್ನು ನಾವ್ ಹೇಳ್ತೀವಿ ನೋಡಿ.

 ಕಳೆದ ಎರಡು ವರ್ಷಗಳ ಹಿಂದೆ ಭಾರತದ ವಿಶ್ವ ಸುಂದರಿ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ಮಾನುಷಿ ಚಿಲ್ಲರ್ ಇದೀಗ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಪತ್ನಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಅಕ್ಷಯ್ ಹೊರ ಮದುವೆ ಆಗುತ್ತಿರುವುದು ಸಹ ಅವರ ಮುಂದಿನ ಚಿತ್ರದಲ್ಲಿ. ನಿಜ ಜೀವನದಲ್ಲಿ ಅಲ್ಲ.

ಬ್ಯೂಟಿ ಕ್ವೀನ್ ವಿಶ್ವಸುಂದರಿ ಮಾನುಷಿ ಬಾಲಿವುಡ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಮೊದಲ ಸಿನಿಮಾವನ್ನು ನಟ ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದಾರೆ. ಮಾನುಷಿ ಐತಿಹಾಸಿಕ ಚಿತ್ರದಲ್ಲಿ ನಟಿಸಿದ್ದು, ರಜಪೂತ ರಾಜ ಪೃಥ್ವಿರಾಜ್ ಚೌಹಾಣ್ ಪತ್ನಿ ಸಂಯುಕ್ತ ಪಾತ್ರದಲ್ಲಿ ಮಾನುಷಿ ನಟಿಸಲಿದ್ದಾರೆ. ಅಕ್ಷಯ್ ಕುಮಾರ್ ಅವರು ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚೌಹಣ್ ವಂಶಕ್ಕೆ ಸೇರಿದ ಪೃಥ್ವಿರಾಜ್, 20ನೇ ವಯಸ್ಸಿನಲ್ಲಿಯೇ ರಾಜನಾಗಿ ಪಟ್ಟಾಭಿಷಕ್ತನಾಗಿ ರಾಜ್ಯಭಾರ ಮಾಡುವ ಜವಾಬ್ದಾರಿಯನ್ನು ಪಡೆದುಕೊಂಡಿದ್ದ. ಅಲ್ಲದೆ ದೆಹಲಿ ರಾಜ್ಯವನ್ನು ಪರಿಪಾಲಿಸಿದ ಕೊನೆಯ ಹಿಂದೂ ರಾಜ ಎನ್ನುವ ಖ್ಯಾತಿಗಳಿಸಿದ್ದ.

ಪೃಥ್ವಿರಾಜ್ ಚೌಹಾಣ್, ಕನೌಜ್ ರಾಜ್ಯಕ್ಕೆ ಸೇರಿದ ಜೈ ಚಂದ್ರ ರಾಥೋಡ್ ಮಗಳು ಸಂಯುಕ್ತಾಳ ಜೊತೆ ಮದುವೆಯಾಗಿದ್ದ. ಅಂದಿನ ಕಾಲದಲ್ಲಿ ಇವರಿಬ್ಬರ ಪ್ರೇಮಕತೆ ಕುತೂಹಲಕಾರಿಯಾಗಿತ್ತು ಎನ್ನಲಾಗಿದೆ. ಹೀಗಾಗಿ ಆ ಕತೆಯನ್ನು ಸಿನಿಮಾವನ್ನಾಗಿ ಮಾಡುತ್ತಿದ್ದಾರೆ ಎಂಬುದು ಇದೀಗ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಈ ಸಿನಿಮಾವನ್ನು ಖ್ಯಾತ ಟಿವಿ ಸೀರಿಯಲ್ ನಿರ್ದೇಶಕ ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡುತ್ತಿದ್ದು, ಯಶ್ ರಾಜ್ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿದೆ. ಮಾನುಷಿ ಈಗಾಗಲೇ ಸಂಯುಕ್ತ ಪಾತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.ಇತ್ತ ಮಾನುಷಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ನಂತರ ಮತ್ತೊಮ್ಮೆ ವಿಶ್ವಕ್ಕೆ ತನ ಬ್ಯೂಟಿ ತೋರಿಸಲು ಹೊರಟಿದ್ದಾರೆ.

Find Out More:

Related Articles:

Unable to Load More