25 ದಿನಗಳು ಪೂರೈಸಿ, ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಭರಾಟೆ

somashekhar

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರ ಇದೀಗ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್  ಆದ ಭರಾಟೆ ಇಂದಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆದ್ದರಿಂದ ಚಿತ್ರತಂಡ ಫುಲ್ ಖುಷ್ ಆಗಿದೆ. ಹೌದು, ನಿರ್ದೇಶಕ ಚೇತನ್‌ ಕುಮಾರ್‌ “ಭರಾಟೆ ಮೂಲಕ ಹ್ಯಾಟ್ರಿಕ್‌ ಗೆಲವು ಸಾಧಿಸಿದ್ದಾರೆ. “ಬಹದ್ದೂರ್‌’ ಮತ್ತು “ಭರ್ಜರಿ’ ಚಿತ್ರಗಳ ನಂತರ ಅವರು “ಭರಾಟೆ’ ನಿರ್ದೇಶಿಸಿದ್ದು, ಆ ಚಿತ್ರ ಈಗ ಗೆಲುವು ಕಂಡಿದೆ. ಈ ವಾರಕ್ಕೆ “ಭರಾಟೆ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವುದರಿಂದ ಸಿನಿಮಾ ತಂಡಕ್ಕೆ ಸಹಜವಾಗಿಯೇ ಖುಷಿಯನ್ನು ಹೆಚ್ಚಿಸಿದೆ.

ಈ ಸಂಭ್ರಮದ ಹಿನ್ನೆಲೆಯಲ್ಲಿ ಚಿತ್ರತಂಡ ಕಳೆದ ವಾರವಷ್ಟೇ ಕರ್ನಾಟಕ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿ, ಅಭಿಮಾನಿಗಳು ಹಾಗು ಪ್ರೇಕ್ಷಕರ ಜೊತೆಗೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಶ್ರೀಮುರಳಿ ಅವರ ಅಪಾರ ಅಭಿಮಾನಿಗಳು ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ್ದಾರೆ. ಹಲವು ಕೈ ಕುಲಕಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದು ಚಿತ್ರತಂಡಕ್ಕೆ ಮತ್ತಷ್ಟು ಸಂತೋಷವನ್ನು ಹೆಚ್ಚಿಸಿದೆ. ನಿರ್ಮಾಪಕ ಸುಪ್ರೀತ್‌ ಅವರು, ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಕ್ಕೂ “ಭರಾಟೆ’ ಗೆಲುವು ಕೊಟ್ಟಿದ್ದರಿಂದ ಖುಷಿಯಲ್ಲಿದ್ದಾರೆ.

ಇನ್ನು 25ನೇ ದಿನಗಳ ಸಂಭ್ರಮದ ಮೆರುಗು ಹೆಚ್ಚಿಸಲು ಚಿತ್ರದ ಟೈಟಲ್‌ ವೀಡಿಯೋ ಸಾಂಗ್‌ ರಿಲೀಸ್‌ ಮಾಡಿದ್ದು, ಶ್ರೀಮುರಳಿ ಹಾಗೂ ರಚಿತಾ ರಾಮ್‌ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಶ್ರೀಮುರಳಿ ಈವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ಪೋಷಿಸಿದ್ದರಿಂದ ಸಿನಿಮಾ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರಲ್ಲೂ ಶ್ರೀಮುರಳಿ ದ್ವಿಪಾತ್ರದಲ್ಲಿ ಇದೇ ಮೊದಲು ನಟಿಸಿರುವುದರಿಂದ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿಯಾಗಿದೆ. ಸಿನಿಮಾ ನೋಡಿ, ಪ್ರೋತ್ಸಾಹಿಸಿದ ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ಹೇಳಿದೆ. 
ಶ್ರೀಮುರಳಿ ಗೆ ಈ ಚಿತ್ರವು ಭಾರೀ ಹಿಟ್ ತಂದುಕೊಟ್ಟಿದೆ. ಅಭಿಮಾನಿಗಳು ಭರಾಟೆ ಯನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಪ್ರಸ್ತುತ ಯಶಸ್ವಿ 25ದಿನ ಪೂರೈಸಿ ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೆ ಹಣ ಬಾಚುತ್ತಾ ಮುನ್ನುಗ್ಗುತ್ತಿದೆ. 

Find Out More:

Related Articles: