ಬ್ಲ್ಯಾಂಕ್ ನಲ್ಲಿ ಡ್ರಗ್ಸ್ ಕೃಷಿ ಪ್ರಾರಂಭ, ಏನಿದರ ಅಸಲೀ ಕಥೆ

somashekhar

ಬೆಂಗಳೂರು: ಡ್ರಗ್ಸ್ ಎಂಬ ಹೆಸರು ಕೇಳಿದ ತಕ್ಷಣವೇ ಮೈಯೆಲ್ಲಾ ಝಂ ಎನ್ನುವುದು. ಯಾವುದೋ ಕಲ್ಪನಾ ಲೋಕದ ಕಿಕ್ ಒಮ್ಮೆಲೆ ನೆನಪಾಗುವುದು. ಬ್ಲ್ಯಾಂಕ್ ನಲ್ಲಿ ಡ್ರಗ್ಸ್ ಕೃಷಿಯನ್ನು ಇದೀಗ ಕೃಷಿಯವರೇ ಆರಂಭಿಸಿದ್ದಾರೆ. ಅರೇ ಏನಪ್ಪಾ ಇದು, ಡ್ರಗ್ಸ್ ಕೃಷಿಗಿಳಿದ ಆ ನಟಿಯಾರು, ಅಸಲೀ ಕತೆಯನ್ನು ನಾವ್ ಹೇಳ್ತೀವಿ ಕೇಳಿ. 

 ನಟಿ ಕೃಷಿ ತಾಪಂಡ ಈಗ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾದಲ್ಲಿ ನಟಿಸಲು ಶುರುಮಾಡಿದ್ದಾರೆ. ಎಸ್. ಜೈ ನಿರ್ದೇಶನದ ‘ಬ್ಲ್ಯಾಂಕ್​’ ಸಿನಿಮಾದಲ್ಲಿ ಡ್ರಗ್ಸ್ ಗೀಳಿನ ಬಗ್ಗೆ ಹೇಳಲಾಗಿದೆ. ಆದರೆ, ಡ್ರಗ್ಸ್ ಕುರಿತ ಸಿನಿಮಾಗಳಲ್ಲಿ ಈ ಹಿಂದೆ ಹೇಳಿರದ ಮತ್ತೊಂದುಮುಖವನ್ನು ‘ಬ್ಲ್ಯಾಂಕ್​’ ಚಿತ್ರದಲ್ಲಿ ತೋರಿಸುವ ಹೊಸ ಪ್ರಯತ್ನ ನಡೆಯುತ್ತಿದೆಯಂತೆ. ಒಟ್ಟು ಮೂರು ಬಗೆಯ ಪಾತ್ರಗಳಲ್ಲಿ ಕೃಷಿ ಕಾಣಿಸಿಕೊಂಡಿದ್ದು, ಡ್ರಗ್ಸ್ ನಶೆಯಲ್ಲಿಯೂ ತೇಲಿದ್ದಾರಂತೆ. ‘ಡ್ರಗ್ಸ್ ತೆಗೆದುಕೊಂಡ ಬಳಿಕ ಏನೆಲ್ಲ ಆಗುತ್ತದೆ ಎಂಬುದನ್ನು ಬ್ಲ್ಯಾಂಕ್​’ನಲ್ಲಿ ಹೇಳಿದ್ದೇವೆ. ಒಟ್ಟು 3ಬಗೆಯ ಪಾತ್ರಗಳಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಒಂದರಲ್ಲಿ ನಾರ್ಮಲ್ ಹುಡುಗಿಯಾದರೆ, ಮತ್ತೊಂದರಲ್ಲಿ ಮಾದಕ ವ್ಯಸನಿಯಾಗಿ,ಆಕೆ ನಶೆಯಲ್ಲಿ ಹೇಗೆಲ್ಲ ವರ್ತಿಸುತ್ತಾಳೆ ಎಂಬುದನ್ನು ತೋರಿಸುವ ಪಾತ್ರಧಾರಿಯೂ ನಾನಾಗಿದ್ದೇನೆ’ ಎಂದು ನಟಿ ಕೃಷಿಯೇ ತಿಳಿಸಿದ್ದಾರೆ. 

ನಿಜಕ್ಕೂ, ಮಾದಕ ವಸ್ತು ಮನುಷ್ಯನ ದೇಹ ಪ್ರವೇಶಿಸಿದಾಗ ಆಗುವ ಅನಾಹುತಗಳನ್ನು ತೋರಿಸುವ ಪ್ರಯತ್ನ ಇಲ್ಲಾಗಿದೆಯಂತೆ. ‘ಡ್ರಗ್ಸ್ ಸೇವಿಸಿದ ಬಳಿಕ ದೇಹದಲ್ಲಾಗುವ ಬದಲಾವಣೆಗಳನ್ನು ಇಲ್ಲಿ ತೋರಿಸಲಾಗಿದೆ. ಕಥಾನಾಯಕಿ ಕನಸಲ್ಲಿ ತೇಲುತ್ತಿರುತ್ತಾಳೋ ಅಥವಾ ವಾಸ್ತವದಲ್ಲಿ ಇರುತ್ತಾಳೋ.. ಆ ನಶೆ ಇನ್ನುಳಿದ ಪಾತ್ರಗಳ ಮಿದುಳಿಗೂ ಏರಿದಾಗ ಏನೆಲ್ಲ ಆಗುತ್ತದೆ? ಒಟ್ಟಿನಲ್ಲಿ ಡ್ರಗ್ ಸೇವಿಸಿದ ಬಳಿಕ ನಡೆಯುವ ಘಟನೆಗಳನ್ನು ಬ್ಲ್ಯಾಂಕ್​’ನಲ್ಲಿ ಜೋಡಿಸಿದ್ದೇವೆ’ ಎನ್ನುವ ಕೃಷಿ, ಸಿನಿಮಾ ಬಗ್ಗೆ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಉತ್ಸಾಹದಲ್ಲಿದೆ. ಪೂರ್ಣಚಂದ್ರ ಮೈಸೂರು, ಭರತ್ ಹಾಸನ್, ಪ್ರಶಾಂತ್ ಸಿದ್ದಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮಂಜುನಾಥ್ ಪ್ರಸನ್ನ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪುರುಷೋತ್ತಮ್ ಛಾಯಾಗ್ರಹಣ, ಶ್ರೀ ಸಸ್ತಾ ಸಂಗೀತ ನೀಡಿದ್ದಾರೆ. ಚಿತ್ರ ನೋಡಿದವರಿಗೆ ಡ್ರಗ್ಸ್ ನ ಅಸಲೀ ಮರ್ಮವನ್ನು ತೋರಿಸಲಿದ್ದಾರೆ ಕೃಷಿ.


Find Out More:

Related Articles: