ತೆಲುಗಿ​ಗೆ ಅತಿಲೋಕ ಸುಂದರಿಯ ಮಗಳು ಎಂಟ್ರಿ!

somashekhar
ಟಾಲಿವುಡ್, ಸೌತ್ ಸಿನಿ ಪ್ರಪಂಚದಲ್ಲಿ ತನ್ನದೇ ಆದ ಖ್ಯಾತಿ ಪಡೆದುಕೊಂಡಿದೆ. ಯುವ ಪ್ರತಿಭೆ ಗಳಿಂದ ಶಿಖರದ ಉತ್ತುಂಗಕ್ಕೆ ಏರುತ್ತಿದೆ. ಇಂತಹ ಟಾಲಿವುಡ್ ಗೆ ಇದೀಗ ಅತಿಲೋಕ ಸುಂದರಿಯ ಮಗಳು ಎಂಟ್ರಿ ಕೊಡುತಿದ್ದಾರೆ. ಇಶಾನ್ ಜತೆ ತೆರೆ ಹಂಚಿಕೊಂಡ ಈ ಚೆಲುವೆಯ ಮತ್ತಾವ ಸಿನಿಮಾಗಳೂ ಇನ್ನೂ ತೆರೆ ಕಾಣಲಿಲ್ಲ. ಹೀಗಿರುವಾಗಲೇ ಅತಿಲೋಕ ಸುಂದರಿಯ ಮಗಳು ಟಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ. 

ನಟಿ ಶ್ರೀದೇವಿ ಟಾಲಿವುಡ್​ ಹಾಗೂ ಕಾಲಿವುಡ್​ ಸಿನಿಮಾಗಳ ಮೂಲಕವೇ ಸಿನಿ ರಂಗದಲ್ಲಿ ತನ್ನದೇ ಆದ ಗುರುತು ಕಂಡುಕೊಂಡವರು. ನಂತರ ಬಾಲಿವುಡ್​ಗೆ ಎಂಟ್ರಿ ಕೊಟ್ಟವರು. ಇದೀಗ ಶ್ರೀ ದೇವಿಯ ಮಗಳು ಜಾಹ್ನವಿ ಕಪೂರ್​ ಸಹ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಈ ಹಿಂದೆ ಮಾರಾಠಿಯ ಸೂಪರ್​ ಹಿಟ್​ ಸಿನಿಮಾ 'ಸೈರಾಟ್​'ನ ಹಿಂದಿ ರಿಮೇಕ್​ 'ಧಡಕ್​'ನಲ್ಲಿ ಜಾಹ್ನವಿ ನಟಿಸಿದ್ದರು. ಇಶಾನ್ ಜತೆ ತೆರೆ ಹಂಚಿಕೊಂಡ ಈ ಚೆಲುವೆಯ ಮತ್ತಾವ ಸಿನಿಮಾಗಳೂ ಇನ್ನೂ ತೆರೆ ಕಾಣಲಿಲ್ಲ. ಹೀಗಿರುವಾಗಲೇ ಅತಿಲೋಕ ಸುಂದರಿಯ ಮಗಳು ಟಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. 

ನಿಜ, ಜಾಹ್ನವಿ ಟಾಲಿವುಡ್​ ರೌಡಿ ಆಕ್ಟರ್ ವಿಜಯ್​ ದೇವರಕೊಂಡ ಜತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅದರಲ್ಲೂ ಪೂರಿ ಜಗನ್ನಾಥ್​ ಅವರ ನಿರ್ದೇಶನದ ಸಿನಿಮಾದಲ್ಲಿ ಈ ಅಪರೂಪದ ಜೋಡಿ ಒಂದಾಗಲಿದೆಯಂತೆ. ಪೂರಿ ಜಗನ್ನಾಥ್​ ಅವರ 'ಫೈಟರ್​' ಚಿತ್ರಕ್ಕೆ ಜಾಹ್ನವಿ ಕಪೂರ್​ ನಾಯಕಿಯಂತೆ. 'ಇಸ್ಮಾಟ್ ಶಂಕರ್​' ಸಿನಿಮಾದಿಂದ ಯಶಸ್ಸಿನ ನಗೆ ಬೀರುತ್ತಿರುವ ಪೂರಿ ವಿಜಯ್​ ದೇವರಕೊಂಡ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಜಾಹ್ನವಿ ಅಭಿನಯಿಸುತ್ತಿರುವುದು ಕೇವಲ ಸುದ್ದಿಯಷ್ಟೆ. ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದರ ಹಿಂದೆ ಜಾಹ್ನವಿ ತೆಲುಗಿನಲ್ಲಿ ಅಭಿನಯಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆದರೆ ಅದು ಕೇವಲ ಗಾಳಿ ಸುದ್ದಿಯಾಗಿತ್ತು. ಆದರೆ ಒಮ್ಮೆ ಜಾಹ್ನವಿ ತನಗೆ ದಕ್ಷಿಣ ಭಾರತದ ಸಿನಿ ರಂಗದಲ್ಲಿ ವಿಜಯ್​ ದೇವರಕೊಂಡ ಎಂದರೆ ಇಷ್ಟ ಎಂದು ಹೇಳಿದ್ದರು. ಈಗ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೆ ಈ ಚೆಲುವೆ ನಿರಾಕರಿಸುವುದಿಲ್ಲ ಎನಿಸುತ್ತದೆ. 

Find Out More:

Related Articles: