ಗೋದ್ರಾದಲ್ಲಿದೆ ಭರ್ಜರಿ ಸಸ್ಪೆನ್ಸ್

somashekhar
ಗೋದ್ರಾ ಹತ್ಯಾ ಕಾಂಡ ಎಂದರೆ ಬಹುತೇಕರ ಕಣ್ಣು ಕೆಂಪಾಗುತ್ತದೆ. ಆದರೀಗ ಸ್ಯಾಂಡಲ್ ವುಡ್ ನಲ್ಲಿ ನೀನಾಸಂ ಅಭಿನಯ ಗೋದ್ರಾ ಚಿತ್ರ ತೆರೆಮೇಲೆ ಬರಲು ಶುರುಮಾಡಿದೆ.  ಗೋದ್ರಾ ಎಂದಾಕ್ಷಣ ಎಲ್ಲರಿಗೂ ಗುಜರಾತ್ ಹತ್ಯಾಕಾಂಡ ನೆನಪಾಗಬಹುದು. ಆದರೆ ಆ ದುರಂತಕ್ಕೂ ಈ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲವೆಂದು ಚಿತ್ರತಂಡ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಪ್ರಸ್ತುತವಿದು ಸದ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ನೊಂದು ಬೆಂದವರ ಕಥೆ ಸಾಮಾನ್ಯ ವ್ಯಕ್ತಿ ಯೊಬ್ಬ ಶೋಷಣೆ ವಿರುದ್ಧ ಬಂಡೆದ್ದು ಹೋರಾಟಗಾರ ರಾದ ಕಥೆಯನ್ನು ಹೇಳಲು ಇದೆಯಂತೆ.

ನಾಯಕನಟ ನಿನಾಸಂ ಸತೀಶ್ ಅವರದ್ದು ಚಿತ್ರದಲ್ಲಿ ಕ್ರಾಂತಿಕಾರಿ ಸುಭಾಷ್ ಪಾತ್ರ ಚಿತ್ರರಸಿಕರ ಕುತೂಹಲ ಕೆರಳಿಸಿದೆ.  ಅಂದು ಕೊಂಡಂತೆ ನಡೆದರೆ ಗೋತ್ರವನ್ನು ಡಿಸೆಂಬರ್ ನಲ್ಲಿ ತೆರೆಗೆ ತರಲು ಚಿತ್ರತಂಡ ನಿರ್ದೇಶಿಸಿ ನಿರ್ಧರಿಸಿದೆ. ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರಬೇಕಿತ್ತು ಚಿತ್ರಬಿಡುಗಡೆ ಸ್ವಲ್ಪ ವಿಳಂಬವಾಗಬಹುದು ಎನ್ನುವುದನ್ನು ನೀನಾಸಂ ಸತೀಶ್ ಟ್ವಿಟರ್ನಲ್ಲಿ ಹಾಕಿರುವ ಬರಹವು ಪುಷ್ಠಿಕರಿಸಿದೆ. 

ಬೇರೆ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಬೇಕಾದ್ದರಿಂದ ಚಿತ್ರದ ಚಿತ್ರೀಕರಣ ಮುಗಿಯಲು ಸ್ವಲ್ಪ ತಡವಾಗಿದೆ ತಡವಾದರೂ ನೀವೆಲ್ಲರೂ ಅಚ್ಚರಿಪಡುವ ಪಾತ್ರ ಇದಾಗಲಿದೆ ಎಂದು ಸತೀಶ್ ಟ್ವೀಟ್ ಮಾಡಿದ್ದು ಅಭಿಮಾನಿಗಳು ಮತ್ತು ಸಿನಿರಸಿಕರು ಇನ್ನಷ್ಟು ದಿನಗಳು ಗೋತ್ರ ಗಾಗಿ ಕಾಯುವ ಕೋರಿಕೆ ರವಾನಿಸಿದ್ದಾರೆ.  ಚಿತ್ರೀಕರಣದ ಸ್ಥಳಗಳಿಗೂ ಹಾಗೂ ಆ ಭಾಗದಲ್ಲಿರುವ ಸಾಮಾಜಿಕ ಸಮಸ್ಯೆಗಳಿಗೂ ನೇರ ಸಂಬಂಧವಿಲ್ಲ ಶೋಷಣೆಗೆ ತುತ್ತಾದ ಯಾವುದೇ ವ್ಯಕ್ತಿ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದು ಹೋರಾಟಗಾರ ನಗಬಹುದು ಆ ಪಾತ್ರದ ಮುಖದಲ್ಲಿ ಯಾವುದೇ ಹೋರಾಟಗಾರನ ಪ್ರತಿಬಿಂಬ ಕಾಣಿಸಬಹುದು ಎನ್ನುವ ಮಾತು ಸೇರಿಸುತ್ತಾರೆ.

ಚಿತ್ರದಲ್ಲಿರುವ ಪ್ರಮುಖ ನಾಲ್ಕು ಪಾತ್ರಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ಸತೀಶ್ ಮತ್ತು ಶ್ರದ್ಧಾ ಶ್ರೀನಾಥ್ ರಾಜಕಾರಣ ಪಾತ್ರದಲ್ಲಿ ಅಚ್ಚುತ್ ಕುಮಾರ್ ಹಾಗೂ ಫೈಲೆಟ್ ಪಾತ್ರದಲ್ಲಿ ವಸಿಷ್ಟ ಸಿಂಹ ಕಾಣಿಸಿಕೊಂಡಿದ್ದಾರೆ ಚಿತ್ರದ ಕಥೆ ಚಿತ್ರಕಥೆ ಹಾಗೂ ನಿರ್ದೇಶನ ನಂದೀಶ್ ಅವರದು ಜಬೇಜ್ ಕೆ ಗಣೇಶ್ ಛಾಯಾಗ್ರಹಣ ಮಾಡಿದ್ದಾರೆ


Find Out More:

Related Articles: