ಮೋಡಿ ಮಾಡಲು ರೆಡಿಯಾದ ಬಾಲಿವುಡ್ ನ ಬ್ರಹ್ಮಾಸ್ತ್ರ

frame ಮೋಡಿ ಮಾಡಲು ರೆಡಿಯಾದ ಬಾಲಿವುಡ್ ನ ಬ್ರಹ್ಮಾಸ್ತ್ರ

somashekhar
ಬಾಲಿವುಡ್ ನಲ್ಲಿ ಬ್ರಹ್ಮಾಸ್ತ್ರ ಚಿತ್ರದಲ್ಲಿ ಹೀರೋ ಆಗಿ ಮಿಂಚಿರುವ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಪ್ರಸ್ತುತ ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಕಾಯುತ್ತಿರುವ ಸುದ್ದಿ ಭಾರೀ ವೈರಲ್ ಆಗಿದೆ.  ಸದ್ಯ ಬಾಲಿವುಡ್ ನಲ್ಲಿ ಪ್ರೇಮ ಪಕ್ಷಿಗಳ ಎಂದು ಗುರುತಿಸಿಕೊಳ್ಳುತ್ತಿರುವ ಅಲಿಯಾ ಭಟ್, ರಣಬೀರ್ ಕಪೂರ್ ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರ ಬ್ರಹ್ಮಾಸ್ತ್ರ ಆಗಿದೆ. ಚಿತ್ರ ಬಿಡುಗಡೆಗಾಗಿ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದ ನಂತರ ಮತ್ತೊಂದು ಚಿತ್ರದಲ್ಲಿ ನಟಿಸುವುದಾಗಿ ಈ ಜೋಡಿ ನಿರ್ಧರಿಸಿದ್ದಾರಂತೆ ಎಂಬ ಸುದ್ದಿ ಕೇಳಿ ಬಂದಿದೆ. ರಣಬೀರ್ ಕಪೂರ್ ಅಲಿಯಾ ಭಟ್ ಬಗ್ಗೆ ಆಗಾಗ ಗಾಳಿಸುದ್ದಿಗಳು ಕೇಳಿಬರುತ್ತಲೇ ಇವೆ. 

ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಈ ಜೋಡಿ ಎಲ್ಲಿಯೂ ಮಾತನಾಡಿಲ್ಲ ಆದರೆ ಈ ಜೋಡಿಯನ್ನು ಸಿನಿಮಾದಲ್ಲಿ ಪ್ರೇಕ್ಷಕರು ಇಷ್ಟಪಡುತ್ತಾರೆ ಎಂಬುದಕ್ಕೆ ಬ್ರಹ್ಮಾಸ್ತ್ರ ಬಿಡುಗಡೆಯಾಗುವ ತನಕ ಕಾಯಲೇಬೇಕು. ಈಗಾಗಲೇ ಈ ಜೋಡಿಗೆ ಒಟ್ಟಿಗೆ ನಟಿಸಲು ಅನೇಕ ಸಿನಿಮಾದ ಅವಕಾಶಗಳು ಬಂದಿವೆ, ಆದರೆ ಈ ಜೋಡಿ ಎಲ್ಲವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಿಜ ಜೀವನದಲ್ಲಿ ಜೋಡಿಗಳಾಗಿ ಕಾಣಿಸಿಕೊಂಡವರ ಸಿನಿಮಾಗಳು ಬಿಡುಗಡೆಯಾದಾಗ ಅವರನ್ನು ಸಿನಿಮಾದಲ್ಲಿ ಪ್ರೇಕ್ಷಕರು ಒಪ್ಪಿಕೊಳ್ಳದೆ ಇರುವ ಅನೇಕ ನಿದರ್ಶನಗಳ ಬಾಲಿವುಡ್ ನಲ್ಲಿ ಕಾಣುತ್ತೇವೆ. ಸೈಫ್ ಅಲಿ ಖಾನ್ ಕರೀನಾ ಕಪೂರ್ ಇದಕ್ಕೊಂದು ಉತ್ತಮ ಉದಾಹರಣೆ. ಹಾಗಾಗಿ ಬ್ರಹ್ಮಾಸ್ತ್ರ ಬಿಡುಗಡೆಯಾಗುವ ತನಕ ಈ ಜೋಡಿ ಕಾಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಈ ಚಿತ್ರದಲ್ಲಿ ಬಾಲಿವುಡ್ ಖ್ಯಾತ ಹಾಗೂ ಹಿರಿಯ ನಟ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದು ಇದೇ ಡಿಸೆಂಬರ್ ತಿಂಗಳಲ್ಲಿ ಬ್ರಹ್ಮಾಸ್ತ್ರ ಚಿತ್ರ ತೆರೆ ಮೇಲೆ ಮೋಡಿ ಮಾಡಲು ಪ್ರಾರಂಭಿಸಿಲಿದೆ.ಎಲ್ಲಾ ಚಿತ್ರದ ಪ್ರೇಮ ಕಥೆ ಗಳಿಗಿಂತ ಕೊಂಚ ವಿಭಿನ್ನವಾಗಿ ಚಿತ್ರ ಮೂಡಿಬಂದಿದೆ ಖಂಡಿತವಾಗಿ ಪ್ರೇಕ್ಷಕರ ಮನ ಗೆಲ್ಲಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ರಣಬೀರ್, ಆಲಿಯಾ, ಬಿಗ್ ಬಿ ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಚಿತ್ರವು ನಿರೀಕ್ಷೆಯನ್ನು ಹುಟ್ಟಿ ಹಾಕಿದೆ.


Find Out More:

Related Articles:

Unable to Load More