ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂಧ್ರ

frame ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂಧ್ರ

somashekhar
ರಿಯಲ್ ಸ್ಟಾರ್ ಉಪೇಂದ್ರ ಇದೀಗ ಕಬ್ಜ. ಅರೇ ಏನ್ ಇದು, ಉಪೇಂದ್ರ ಯಾಕಪ್ಪ ಕಬ್ಜ ಆದ್ರೂ ಅಂತ ತಲೇಲಿ ಹುಳಬಿಟ್ಕೋಬೇಡಿ.  ಯಾಕಂದ್ರೆ ಅವರು ಯಾಕೆ ಈಗಾದ್ರೂ ಅಂತ ನಾವ್ ಹೇಳ್ತೀವಿ. ಉಪೇಂದ್ರ, ಎ, ಸೂಪರ್, ಬುದ್ದಿವಂತ, ಐ ಲವ್ ಯು ಈಗೆ ಸಾಲು ಸಾಲು ಚಿತ್ರಗಳಲ್ಲಿ ಚಿತ್ರ ವಿಚಿತ್ರವಾಗಿ ನಟಿಸಿ, ನಿರ್ದೇಶಿಸಿ, ನಿರೂಪಿಸಿ ರಿಯಲ್ ಸ್ಟಾರ್ ಎಂದೇ ಖ್ಯಾತಿ ಪಡೆದ ಕನ್ನಡದ ದಿ ಬೆಸ್ಟ್ ಡೈರೆಕ್ಟರ್ ಇದೀಗ ಕಬ್ಜ ಸೀನಿಮಾದಲ್ಲಿ ನಟನಾಗಿದ್ದಾರೆ. 


ಕಬ್ಜ ಸಿನೇಮಾ ಸಂಪೂರ್ಣವಾಗಿ ಅಂಡರ್ ವಲ್ಡ್ ಗೆ ಸಂಬಂಧಿಸಿದ್ದು, ಆರ್. ಚಂದ್ರು ನಿರ್ದೇಶಿಸಲಿದ್ದಾರೆ. ಈ ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಮರಾಠಿ, ಹಿಂದಿ ಸೇರಿ 7 ಭಾಷೆಗಳಲ್ಲಿ ತೆರೆಕಾಣಲಿದೆ. ಚಿತ್ರದ ನಾಯಕಿ ಸೇರಿ ಬಹುತೇಕರು ಬಹುಭಾಷಾ ತಾರಾಗಣವಿರಲಿದೆ. ಕಬ್ಜ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಮಾಡುವ ಪ್ಲಾನ್ ನಿರ್ದೇಶಕ ರದ್ದು.  ಇಲ್ಲಿಯವರೆಗೂ ಪ್ರೇಮ ಚಿತ್ರಗಳನ್ನೆ ನಿರ್ದೇಶಿಸುತ್ತಿದ್ದ ಚಂದ್ರು ಇದೀಗ ಅಂಡರ್ ವಲ್ಡ್ ನತ್ತ ಮುಖ ಮಾಡಿರುವುದು ಸಿನಿ ರಸಿಕರಲ್ಲಿ  ಕುತೂಹಲ ಕೆರಳಿಸಿದೆ. 


ಉಪ್ಪಿಗೆ ವಿಲನ್ ಆಗಿ ಮತ್ತೊಬ್ಬ ಡಾನ್ ಕಾಣಿಸಿಕೊಳ್ಳಲಿದ್ದು, ಅವರು ಯಾರೆಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇರಿಸಲಾಗಿದೆ. ಚಿತ್ರ ದೊಡ್ಡಮಟ್ಟದಲ್ಲಿ ತೆರೆ ಕಾಣುವಂತೆ ಮಾಡುವುದು ನಿರ್ದೇಶಕ ಆರ್. ಚಂದ್ರು ಅವರ ಕನಸಾಗಿದೆಯಂತೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಚಿತ್ರವು ಭಾರೀ ಸದ್ದು ಮಾಡುತ್ತಿದೆ. ಪ್ರಪಂಚದ ವಾಸ್ತವತೆ ಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಈ ಚಿತ್ರ ಸಂಪೂರ್ಣವಾಗಿ ಅಂಡರ್ ವಲ್ಡ್ ಡಾನ್ ಗಳ ಚಿತ್ರವಾದ್ದರಿಂದ ಲಾಂಗ್, ಮಚ್ಚುಗಳ ಸಂವಡ್ ಜೋರಾಗಿಯೇ ಇರಲಿದೆ. 


ಚಿತ್ರದಲ್ಲಿ ಉಪ್ಪಿ ಪಾತ್ರಕ್ಕೂ ಭಾರತದ ಭೂಗತ ದೊರೆಯೊಬ್ಬನಿಗೂ ತುಂಬಾ  ಹೋಲಿಕೆಯಿದೆಯಂತೆ. ಚಿತ್ರದ ಕೆಲವು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದು, ಉಪ್ಪಿ ರೆಟ್ರೋ ಸ್ಟೈಲ್ ನಲ್ಲಿ ಲಾಂಗ್ ಹಿಡಿದು ಕೂಲಿಂಗ್ ಗ್ಲಾಸ್ ಹಾಕಿ ಬರುತ್ತಿರುವ ಪೋಟೋ ಸಖತ್ ವೈರಲ್ ಆಗಿದೆ. ಉಪ್ಪಿ ಅಭಿಮಾನಿಗಳು ಉಪೇಂದ್ರ ಅವರನ್ನು ಮತ್ತದೇ ಅಳೇ ಸ್ಟೈಲ್ ನಲ್ಲಿ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. 


Find Out More:

Related Articles:

Unable to Load More