ಹೈದರಾಬಾದ್‌ಗೆ ಹಾರಿದ 'ಡಿ ಬಾಸ್' ರಾಬರ್ಟ್

somashekhar
ದರ್ಶನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಇತ್ತೀಚೆಗೆ ಯಾವುದೇ ಸಿನಿಮಾ ಮಾಡಿದರೂ ಜನರು ಅದನ್ನು ಮುಗಿ ಬಿದ್ದು ನೋಡುತ್ತಿದ್ದಾರೆ. ಈ ಹಿಂದೆ ಹಾಗಿರಲಿಲ್ಲ. ಆದರೆ ಇದೀಗ ದರ್ಶನ್ ಎಲ್ಲರ ಮನೆ ಮಾತಾಗಿದ್ದಾರೆ. ಹೀಗಾಗಿಯೇ ದರ್ಶನ್ ಅವರ ಇತ್ತೀಚಿನ ಚಲನಚಿತ್ರಗಳು ಉತ್ತರ ರೀತಿಯಲ್ಲಿ ಪ್ರದರ್ಶನ ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ.


ಇದೀಗ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ಆಶಾ ಭಟ್ ಅವರು ಅಭಿನಯ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಕಂಠೀರವ ಸ್ಟುಡಿಯೋದಲ್ಲಿ ನಾನ್ ಸ್ಟಾಪ್ ಶೂಟಿಂಗ್ ಮಾಡಲಾಗಿತ್ತು. ಇದೀಗ ಹೈದರಾಬಾದ್ ಗೆ ರಾಬರ್ಟ್ ಟೀಂ ಹಾರಿದೆ.


ಹೌದು ಹೈದರಾಬಾದ್ ನ ರಾಮೋಜಿ ರಾವ್ ಫಿಲ್ಮ ಸಿಟಿಯಲ್ಲಿ ರಾಬರ್ಟ್ ಚಿತ್ರತಂಡ ಬೀಡು ಬಿಟ್ಟಿದೆ. ಇಂದಿನಿಂದ ಪ್ರಮುಖ ಪೋರ್ಷನ್ ಚಿತ್ರೀಕರಣದಲ್ಲಿ ನಟ ದರ್ಶನ್ ಅವರು ಭಾಗಿಯಾಗಲಿದ್ದಾರೆ. ಅಲ್ಲದೇ ಈ ಚಿತ್ರವನ್ನು ಉಮಾಪತಿ ಫಿಲಂ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ್ ಹಾಗೂ ತರುಣ್ ಸುದೀರ್ ನಿರ್ದೇಶನದಲ್ಲಿ ತಯಾರಾಗುತ್ತಿದೆ. ಅಲ್ಲದೇ ಈ ಚಿತ್ರಕ್ಕೆ ಹೀರೋಯಿನ್ ಆಗಿ ಭದ್ರಾವತಿ ಚೆಲುವೆ ಆಶಾ ಭಟ್ ಎಂಟ್ರಿ ಕೊಟ್ಟಿರುವು ಎಲ್ಲರಿಗೂ ಗೊತ್ತಿರೋದೇ.


ಇದೇ ಸೆಪ್ಟೆಂಬರ್ 20ರ ವರೆಗೆ ರಾಬರ್ಟ್ ಚಿತ್ರದ ಪ್ರಮುಖ ದೃಶ್ಯಗಳನ್ನ ಚಿತ್ರೀಕರಣ ಮಾಡಲಾಗುತ್ತಿದೆ.ಆವತ್ತೆ ಡಿ ಬಾಸ್ ದಚ್ಚುಗೆ ಕೊಂಚ ಬ್ರೇಕ್  ಸಿಗಲಿದೆ. ಇದಾದ  ಮೇಲೇ ದರ್ಶನ್ ಅವರು ತಮ್ಮ ಮಗ ವಿನೀಶ್ ಜೊತೆ ಕೀನ್ಯಾಗೆ ಪ್ರವಾಸ ಬೆಳೆಸಲಿದ್ದಾರೆ. ಅಲ್ಲಿ ಒಂದು ವಾರದ ಕಾಲ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಾರೆ ಎನ್ನಲಾಗಿದೆ. ಇನ್ನೊಂದು ವಿಶೇಷ ಏನಪ್ಪ ಅಂದರೆ, ದರ್ಶನ್ ಅವರು ಇದಕ್ಕಾಗಿಯೇ ಒಂದೂವರೆ ಕೋಟಿ ವೆಚ್ಚದ ಸ್ಪೆಷಲ್ ಕ್ಯಾಮೆರಾ ಹಾಗೂ ಲೆನ್ಸ್ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.


ಇದಾದ ಮೇಲೆ ಸೆಪ್ಟೆಂಬರ್ 27ರಂದು ದರ್ಶನ್ ಅವರು ಕೀನ್ಯಾದಿಂದ ವಾಪಾಸ್ ಬಂದು  ಮತ್ತೆ ಸೆಪ್ಟೆಂಬರ್ 29ಕ್ಕೆ ಉತ್ತರ ಪ್ರದೇಶದ ಫ್ಲೈಟ್ ಹತ್ತಲಿದ್ದಾರೆ. ಯಾಕೆಂದರೆ ರಾಬರ್ಟ್ ಚಿತ್ರದ ಚಿತ್ರೀಕರಣ ಅಲ್ಲಿನ ಲಕ್ನೋ ಮತ್ತು ವಾರಣಾಸಿಯಲ್ಲಿ ನಡೆಯಲಿದೆ.


Find Out More:

Related Articles: