ಸುದೀಪ್ ವಿರುದ್ಧ ದಚ್ಚು ಫ್ಯಾನ್ಸ್ ಸಮರ

frame ಸುದೀಪ್ ವಿರುದ್ಧ ದಚ್ಚು ಫ್ಯಾನ್ಸ್ ಸಮರ

somashekhar
ಪೈಲ್ವಾನ್ ಸಿನಿಮಾ ಈಗ ತೆರೆ ಮೇಲೆ ಬಂದಿದೆ. ಕೆಜಿಎಫ್ ಬಿಡುಗಡೆ ಆದ ಚಿತ್ರಮಂದಿರಗಳಿಗಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಇದು ರಿಲೀಸ್ ಆಗಿದೆ. ಅಂದರೆ 3000 ಕ್ಕೂ ಚಿತ್ರಮಂದಿರಗಳಲ್ಲಿ ಪೈಲ್ವಾನ್ ಬಿಡುಗಡೆ ಆಗಿದೆ. ಮೊದಲ ದಿನವೇ ಇದು ಜೋರಾಗಿ ಸದ್ದು ಮಾಡುತ್ತಿದೆ. ಅಲ್ಲದೇ ಬಹುತೇಕರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಆದರೆ ವಿಷಯ ಏನಪ್ಪ ಎಂದರೆ, ಡಿ ಬಾಸ್ ಹಾಗೂ ಕಿಚ್ಚ ಅಭಿಮಾನಿಗಳ ನಡುವೆ ಕಿತ್ತಾಟ ಆರಂಭ ಆಗಿದೆ.


ಹೌದು, ದರ್ಶನ್ ಅವರ ಅಭಿಮಾನಿಗಳು ಪ್ರೇಕ್ಷಕರ ಪೈಲ್ವಾನ್ ವಿಮರ್ಶೆ ಎಂದು ವಿಡಿಯೋ ಒಂದನ್ನು ಹಾಕಿಕೊಂಡಿದ್ದಾರೆ. ಅಚ್ಚರಿ ಎಂಬಂತೆ ಈ ವಿಮರ್ಶೆ ಯಲ್ಲಿ ದರ್ಶನ್ ಅಭಿಮಾನಿಗಳು ಚಿತ್ರದ ಬಗ್ಗೆ ತುಂಬ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೌದುಈ ಚಿತ್ರ ಬೋರಿಂಗ್ ಆಗಿದೆ. ಕೊಟ್ಟ ಹಣ ವ್ಯರ್ಥ, ಹಾಗೂ ಸುದೀಪ್ ಮಾಡಿರುವ ಈ ಸಿನಿಮಾ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. 


ಈ ವಿಡಿಯೋ ಪೋಸ್ಟ್ ಆದ ಕೆಲವೇ ನಿಮಿಷಗಳಲ್ಲಿ ಸುದೀಪ್ ಅಭಿಮಾನಿಗಳು ಇತ್ತ ಕಡೆ ಸಿಟ್ಟಾಗಿದ್ದಾರೆ. ಬೇರೆ ಸಿನಿಮಾದ ವಿಮರ್ಶೆಯನ್ನು ಪೈಲ್ವಾನ್ ಎಂದು ಬಣ್ಣಿಸುತ್ತಿದ್ದೀರಿ. ನಿಮಗೆ ನಿಜಕ್ಕೂ ನಾಚಿಕೆ ಆಗಬೇಕು ಎಂದು ಛೀಮಾರಿ ಹಾಕಿದ್ದಾರೆ. ಹೀಗಾಗಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಮಧ್ಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಾರ್ ಆರಂಭ ಆಗಿದೆ. ಇಬಬ್ಬರೂ ಪರಸ್ಪರ ಕಿತ್ತಾಟ ಆಡುತ್ತಿದ್ದಾರೆ. 


ದರ್ಶನ್ ಹಾಗೂ ಸುದೀಪ್ ಅವರ ಗೆಳೆತನ ಮುರಿದು ಕೆಲವು ವರ್ಷಗಳಾಗಿವೆ. ಇದರಿಂದ ಅಭಿಮಾನಿಗಳ ನಡುವೆಯೂ ವೈಮನಸ್ಸು ಮೂಡಿದೆ. ಒಂದು ಕಡೆ ದರ್ಶನ್ ಅವರು ಸಂಪೂರ್ಣವಾಗಿ ಗೆಳೆತನವನ್ನು ಕಳೆದುಕೊಂಡಿದ್ದರೂ ಮತ್ತೊಂದು ಕಡೆಯಲ್ಲಿ ಸುದೀಪ್ ಅವರು ಈ ವಿಚಾರದಲ್ಲಿ ತಟಸ್ಥರಾಗಿಯೇ ಇದ್ದರು. ಅಲ್ಲದೇ ಅನೇಕ ಬಾರಿ ಡಿ ಬಾಸ್ ಪರ ಬ್ಯಾಟ್ ಬೀಸಿದ್ದರು. ಆದರೆ ಇತ್ತೀಚೆಗೆ ಸುದೀಪ್ ಕೂಡ ಸ್ವಲ್ಪ ಗರಂ ಆಗಿದ್ದಾರೆ. ಅಪರೋಕ್ಷವಾಗಿ ಪೋಸ್ಟ್ ಹಾಕುತ್ತಿದ್ದಾರೆ.


ಇತ್ತೀಚೆಗೆ ದರ್ಶನ್ ಅವರ ವಿರುದ್ಧ ಸುದೀಪ್ ತಿರುಗಿ ಬಿದ್ದಿದ್ದರು.  ಹೌದು ದರ್ಶನ್ ಅವರು ತಮ್ಮ ಹೆಂಡತಿಗೆ ಹೊಡೆದಿದ್ದಾರೆ ಎನ್ನುತ್ತಲೇ ಸುದೀಪ್ ಅವರು ಖಾರವಾಗಿ ಟ್ವಿಟ್ ಮಾಡಿದ್ದರು. ನಂತರ ಡಿ ಬಾಸ್ ಅವರನ್ನು ಕಿಚ್ಚ ಅವರು ಅನ್ ಫಾಲೋ ಮಾಡಿದ್ದರು. ಹೀಗಾಗಿ ಇದು ಇವತ್ತಿನವರೆಗೂ ದ್ವೇಷ ಮುಂದುವರೆದಿದೆ.


Find Out More:

Related Articles:

Unable to Load More