'ಲುಂಗಿ' ಎನ್ನುವ ಕನ್ನಡದ ಮತ್ತೊಂದು ಸಿನಿಮಾ..

somashekhar
ಕನ್ನಡ ಚಿತ್ರರಂಗ ಅಂದರೆ, ಅದು ಯಾವಾಗಲೂ ಹೊಸ ಬರ ಅವಕಾಶದ ಒಂದು ವೇದಿಕೆ. ಹೌದು. ದಿನಗಳು ಕಳೆದಂತೆಯೇ ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಆಗುತ್ತಲೇ ಇದೆ. ಹೌದು ಇದೇ ರೀತಿ ಎಷ್ಟೋ ಹೊಸ ಪ್ರತಿಭೆಗಳು ಇಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಅದರಲ್ಲೂ ಗಾಂಧಿನಗರದಲ್ಲಿ  ಇದೀಗ ಕರಾವಳಿ ಕಡೆಯ ಪ್ರತಿಭೆಗಳದ್ದೆ ದೊಡ್ಡ ಸದ್ದು. ಹೌದು ಇವರು ತುಳು ಚಿತ್ರರಂಗದಲ್ಲಿ ಜೋರು ಸದ್ದು ಮಾಡುತ್ತಿದ್ದಾರೆ. ಇದು ಒಂದು ಹಂತಕ್ಕೆ ಒಳ್ಳೆಯ ಬೆಳವಣಿಗೆ ಎನ್ನಬಹುದು. 


ಮಂಗಳೂರಿನ ಹೊಸ ಪ್ರತಿಭೆಗಳು ಇದೀಗ ಸ್ಯಾಂಡಲ್ ವುಡ್ ಲೋಕಕ್ಕೆ ಕಾಲಿಡುತ್ತಿದ್ದಾರೆ. ಇವತ್ತಿಗೆ ಬಾಲಿವುಡ್ ಲೋಕದಲ್ಲಿ ಮಿಂಚಿತ್ತಿರುವ ಅನೇಕ ಪ್ರತಿಭಾನ್ವಿತ ನಟಿಯರೂ ಸಹ ಕರಾವಳಿ ಭಾಗದವರೇ ಆಗಿದ್ದಾರೆ. ಅದರಲ್ಲೂ ಶಿಲ್ಪಾ ಶೆಟ್ಡಿ, ಐಶ್ವರ್ಯ ರೈ ಹಾಗೂ ಇತ್ತೀಚೆಗೆ ಬಾಲಿವುಡ್ ನಲ್ಲಿ ಮಿಂಚುತ್ತಿರೋ ಪೂಜಾ ಹೆಗ್ಡೆ ಹೀಗೆ ಅನೇಕನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದೆ. ಇದೀಗ ಲುಂಗಿ ಚಿತ್ರದ ಮೂಲಕ ಹೊಸ ಪ್ರತಿಭಾನ್ವಿತರ ದಂಡೇ ಬರುತ್ತಿದೆ.


ಹೌದು ನಾವು ಇಲ್ಲಿ ಹೇಳಬೇಕಾಗಿರುವ ವಿಷಯ ಏನೆಂದರೆ ಅದು “ಲುಂಗಿ’ ಬಗ್ಗೆ. ಹೌದು ಇದು ಸ್ಯಾಂಡಲ್ ವುಡ್ ಲೋಕದ ಮತ್ತೊಂದು ಚಿತ್ರದ ಹೆಸರು.  ಈ ಚಿತ್ರದ ವಿಶೇಷತೆ ಏನೆಂದರೆ, ಇದನ್ನು ಮಂಗಳೂರು ಪ್ರತಿಭಾವಂತರೇ ಸೇರಿ ನಿರ್ದೇಶನ ಮಾಡಿ, ಪಾತ್ರಗಳಲ್ಲಿ ಅಭಿನಯಿಸಿ ನಿರ್ಮಾಣ ಮಾಡಿರುವ ಚಿತ್ರವಿದು. ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ ಅಷ್ಟೇ ಯಾಕೆ,ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಎಲ್ಲರೂ ತುಳು ಚಿತ್ರರಂಗ, ರಂಗಭೂಮಿ ಪ್ರತಿಭೆಗಳು ಎಂಬುದು ವಿಶೇಷ. 


ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಬಹುತೇಕರು ಹೊಸಬರೇ. ಈ ಚಿತ್ರಕ್ಕೆ ಮುಖೇಶ್‌ ಹೆಗ್ಡೆ ನಿರ್ಮಾಪಕರು, ಇನ್ನು ಪ್ರಣವ್‌ ಹೆಗ್ಡೆ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಅರ್ಜುನ್‌ ಲೂಯಿಸ್‌ ಮತ್ತು ಅಕ್ಷಿತ್‌ ಶೆಟ್ಟಿ ನಿರ್ದೇಶಕರಾಗಿ ಈ ಚಿತ್ರದ ಜವಾಬ್ದಾರಿ ಹೊತ್ತಿದ್ದಾರೆ. ಪ್ರಸಾದ್‌ ಶೆಟ್ಟಿ ಸಂಗೀತ ನಿರ್ದೇಶಕರು. ಹಾಗೂ ರಿಜೋ ಪಿ.ಜಾನ್‌ ಛಾಯಾಗ್ರಾಹಕರಾಗಿದ್ದಾರೆ.


ಇನ್ನುಳಿದಂಗತೆ ಈ ಚಿತ್ರದ ನಾಯಕಿ ರಾಧಿಕಾರಾವ್‌. ಇವರ ಜೊತೆಗೆ ಈ ಚಿತ್ರ ತಾರಾಗಣದ ಪರಿಚಯ ಇಲ್ಲಿದೆ ನೋಡಿ. ಪ್ರಕಾಶ್‌ ತುಮಿನಾಡು, ವಿಜೆ ವಿನೀತ್‌, ರೂಪ ವರ್ಕಾಡಿ, ದೀಪಕ್‌ ರೈ, ಕಾರ್ತಿಕ್‌ ವರದರಾಜು ಎಲ್ಲರೂ ಕುಡ್ಲದಿಂದ ಬಂದು ಕನ್ನಡದ “ಲುಂಗಿ’ ಸಿನಿಮಾ ಮಾಡಿದವರು. ಇನ್ನು ಈ ಚಿತ್ರದ ನಾಯಕನಿಗೆ ಇದು ಮೊದಲ ಚಿತ್ರ ಅನ್ನೋದು ವಿಶೇಷ.


Find Out More:

Related Articles: