ಫಿಟ್ ಇಂಡಿಯಾ ಸದಸ್ಯೆಯಾದ ಶಿಲ್ಪಾ ಶೆಟ್ಟಿ

somashekhar
ಭಾರತದ ಅಂದರೆ ಅದು ಯೋಗದ ನಾಡು. ಇಲ್ಲಿ ಯೋಗ ಕಲಿಯೋಕೆ ವಿದೇಶದಿಂದಲೂ ಬರುತ್ತಾರೆ. ಆದರೆ ಕೆಲವರಿಗೆ ಇಲ್ಲಿನ ಈ ಯೋಗ ಸಂಪತ್ತಿನ ಮಹತ್ವವೇ ಗೊತ್ತಿಲ್ಲ. ಹೀಗಾಗಿ ಯೋಗವನ್ನು ನಮ್ಮ ದೇಶದ ಜನರಿಗೆ ಅಷ್ಟೇ ಅಲ್ಲದೇ ಇಡೀ ಜಗತ್ತಿಗೆ ಮತ್ತೊಮ್ಮೆ ದೊಡ್ಡಮಟ್ಟದಲ್ಲಿ ಪರಿಚಯ ಮಾಡಬೇಕು ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನ ಪಟ್ಟಿದ್ದರು. ಅದೇ ಕಾರಣಕ್ಕೆ ಅಂತತರಾಷ್ಟ್ರೀಯ ಯೋಗ ದಿನಾಚರಣೆ ಜಾರಿಗೆ ಬಂದಿದೆ. 


ಹೌದು ಇದೀಗ ಭಾರತದಲ್ಲಿ ಯೋಗ ಸದ್ದು ಮಾಡುತ್ತಿದೆ. ಜನರು ಯೋಗದ ಕಡೆಗೆ ಆಕರ್ಷಣೆ ಆಗುತ್ತಿದ್ದಾರೆ. ಅದರಲ್ಲೂ ರಾಮದೇವ್ ಬಾಬಾ ಅವರು ಯೋಗದಲ್ಲಿ ದೊಡ್ಡ ಹೆಸರು ಮಾಡಿದವರು. ಪತಂಜಲಿ ಉತ್ಪನ್ನಗಳ ಮೂಲಕ ದೊಡ್ಡ ಉದ್ಯಮಿಯಾಗಿಯೂ ಅವರು ಹೊರ ಹೊಮ್ಮಿದ್ದಾರೆ. ಇದೆಲ್ಲ ಒಂದು ಕಡೆ ಇರಲಿ. 


ಇದೀಗ ವಿಷಯ ಏನಪ್ಪ ಅಂದರೆ, ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಅಭಿಯಾನ ಹಮ್ಮಿಕೊಂಡಿದೆ. ಈ ಕಮಿಟಿಗೆ ಸಮಸ್ಯರನ್ನೂ ಆಯ್ಕೆ ಮಾಡಿದೆ. ಅದರಲ್ಲಿ ಶಿಲ್ಪಾ ಶೆಟ್ಟಿಗೆ ಸ್ಥಾನ ದೊರಕಿದೆ. ಶಿಲ್ಪಾ ಶೆಟ್ಟಿ ಬಾಲಿವುಡ ಲೋಕದಲ್ಲಿ ದೊಡ್ಡ ಹೆಸರು ಮಾಡಿದವರು. ಡಾನ್ಸ್, ನಟನೆ ಜೊತೆ ಫಿಟ್ನೆಸ್ ವಿಚಾರಕ್ಕೆ ಹೆಚ್ಚು ಗಮನ ಸೆಳೆದಿದ್ದಾರೆ. 


ಹೀಗಾಗಿ ಶಿಲ್ಪಾ ಶೆಟ್ಟಿ ಅವರು ಫಿಟ್ ನಟಿಯರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದರೆ ತಪ್ಪಿಲ್ಲ. ಅಲ್ಲದೇ ಪ್ರತಿದಿನ ಯೋಗ ಮಾಡುವ ಶಿಲ್ಪಾ ಶೆಟ್ಟಿ, ಸಿಡಿ ಹಾಗೂ ಅಪ್ಲಿಕೇಶನ್ ಮೂಲಕ ಜನರಿಗೆ ಫಿಟ್ನೆಸ್ ಮಂತ್ರವನ್ನು ಹೇಳಿಕೊಡುತ್ತಿದ್ದಾರೆ. ಯೋಗ ದಿನಾಚರಣೆ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿಯನ್ನು ಸಹಜವಾಗಿ ರಾಜ್ಯ ಸರ್ಕಾರಗಳು ಆಮಂತ್ರಣ ಮಾಡುತ್ತವೆ. ಇದೀಗ ಕೇಂದ್ರ ಸರ್ಕಾರದ ಫಿಟ್‌ ನೆಸ್ ಅಭಿಯಾನಕ್ಕೆ ಶಿಲ್ಪಾ ಶೆಟ್ಟಿ ಆಯ್ಕೆ ಆಗಿರುವುದನ್ನು ಅವರು ಸಾಮಾಜಿಕ ಜಾಲಾಣದ ಮೂಲಕ ತಿಳಿಸಿದ್ದಾರೆ. 


ನನಗೆ ಈ ವಿಷ್ಯ ಹೇಳೋಕೆ ತುಂಬ ಖುಷಿ ಆಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶುರು ಆಗಿರುವುವ ಫಿಟ್ ಇಂಡಿಯಾ ಅಭಿಯಾನದ ಸಲಹಾ ಸಮಿತಿಯನ್ನು ನನ್ನನ್ನು ಸದಸ್ಯೆಯನ್ನಾಗಿ ಆಯ್ಕೆ ಮಾಡಲಾಗಿದೆ. ಇದರಿಂದ ನನಗೆ ಬಹಳ ಖುಷಿ ಆಗಿದೆ. ನರೇಂದ್ರ ಮೋದಿಯವರಿಗೆ ಧನ್ಯವಾದ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ. Find Out More:

Related Articles: