ಪ್ರಿಯಾಂಕಾ ಚೋಪ್ರಾಗೆ 37ನೇ ಹುಟ್ಟು ಹಬ್ಬದ ಸಂಭ್ರಮ

somashekhar
ನಟಿ ಪ್ರಿಯಾಂಕಾ ಚೋಪ್ರಾ ಅವರ ವಯಸ್ಸು ಕೇಳಿದ್ರೆ ನಿಮಗೆ ಆಶ್ಚರ್ಯ ಆಗಬಹುದು. ಅಷ್ಟೇ ಅಲ್ಲದೇ,  ಅವರು ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಅಲ್ಲದೇ, ಇದು ಪ್ರಿಯಾಂಕಾ ಚೋಪ್ರಾಗೆ 37ನೇ ಜನ್ಮದಿನಾಚರಣೆ. ಹೀಗಾಗಿ ಬಹಳ ಸಂಭ್ರಮದಿಂದಲೇ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಅವರ ಜೊತೆ ಸೇರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪರಿಣಿತಿ ಚೋಪ್ರಾ ಸಹ ಜೊತೆಯಲ್ಲಿಯೇ ಇದ್ದರು.


ಪ್ರಿಯಾಂಕಾ ಚೋಪ್ರಾ ಅವರು ತಮ್ಮ ವಿವಾಹವಾದ ನಂತರ ಇದೇ ಮೊದಲ ಬಾರಿಗೆ ತಮ್ಮ  ಗಂಡ ನಿಕ್​ ಹಾಗೂ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೀಗಾಗಿ ಇದು ವಿಶೇಷ ಹುಟ್ಟು ಹಬ್ಬವಾಗಿದೆ. ಅಷ್ಟಕ್ಕೂ ಪ್ರಿಯಾಂಕಾ ಅವರ ಹುಟ್ಟ ಹಬ್ಬ ಇದ್ದಿದ್ದು ಜುಲೈ 18ರಂದು.


ಜುಲೈ 18ರಂದು ಪ್ರಿಯಾಂಕಾ ಚೋಪ್ರಾ ಅವರು 37ನೇ ವಸಂತಕ್ಕೆ ಕಾಲಿಟ್ಟಿದ್ದು, ಆವತ್ತು ಪ್ರಿಯಾಂಕಾ ಚೋಪ್ರಾ ಅವರು ಕಡುಕೆಂಪು ಬಣ್ಣದ ಡ್ರೆಸ್​ ತೊಟ್ಟಿದ್ದು, ಅದಕ್ಕೆ ಮ್ಯಾಚಿಂಗ್​ ಎಂಬಂತೆ ಹುಟ್ಟುಹಬ್ಬದ ಕೇಕ್​ ಅನ್ನೂ ಗೋಲ್ಡ್​ ಹಾಗೂ ಕೆಂಪು ಬಣ್ಣದ ಕಾಂಬಿನೇಷನ್​ನಲ್ಲೇ ಮಾಡಿಸಲಾಗಿತ್ತು. ಇನ್ನು ಕೇಕ್ ನೋಡಿದ್ರೆ ನೀವು ಬೆಚ್ಚಿ ಬೀಳೋದೊಂದು ಬಾಕಿ.


ಹೌದು ಯಾಕೆಂದರೆ ಕೇಕ್ ಐದು ಅಂತಸ್ತಿನ ಕೇಕ್ ಆಗಿತ್ತು. ಅಲ್ಲದೇ ಇದರ ಬೆಲೆ ಬರೋಬ್ಬರಿ 3.45 ಲಕ್ಷವಂತೆ. ಹೌದು ಇನ್ನು ಪಿಂಕ್​ ವಿಲ್ಲಾ ವರದಿ ಪ್ರಕಾರ, ಮಿಯಾಮಿಯ ಡಿವೈನ್​ ಡೆಲಿಕೆಸೀಸ್​ ಈ ಕೇಕ್​ ಮಾಡಿದ್ದು, ಇದರ ಬೆಲೆ ಬರೋಬ್ಬರಿ 35 ಲಕ್ಷ ಎನ್ನಲಾಗಿದೆ.


ಇನ್ನು ಕೊನೆಯ ಕ್ಷಣದಲ್ಲಿ ನಿಕ್ ಅವರು ಈ ಕೇಕ್​ಗಾಗಿ ಆರ್ಡರ್​ ಮಾಡಿದ್ದು, ಅದನ್ನು ತಯಾರಿಸಲು 24 ಗಂಟೆಗಳು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ನಿಕ್​ ಕೇಕ್​ಗೆ ಆರ್ಡರ್​ ಮಾಡುವ ಮೊದಲೇ ಕೆಂಪು ಹಾಗೂ ಗೋಲ್ಡನ್​ ಕಲರ್​ ಇರುವಂತೆ ಹೇಳಿದ್ದರಂತೆ. ಏಕೆಂದರೆ ಅಂದು ಪ್ರಿಯಾಂಕಾ ಕೆಂಪು ಬಣ್ಣದ ಡ್ರೆಸ್​ ತೊಡಲಿದ್ದು, ಅವರಿಗೆ ಗೋಲ್ಡನ್​ ಕಲರ್​ ಡಿಟೇಲಿಂಗ್​ ಅಂದ್ರೆ ಇಷ್ಟವಂತೆ ಎಂದು ಹೇಳಲಾಗಿತ್ತು.


Find Out More:

Related Articles: