ಬಿಡುಗಡೆ ಆಯ್ತು ರಜನಿ 'ದರ್ಬಾರ್' ಲುಕ್!

somashekhar
ಸೂಪರ್ ಸ್ಟಾರ್ ರಜನಿಕಾಂತ್ ಅಂದರೆ ಕೇಳಬೇಕಾ? ಈ ಹಿಂದೆ ಕಬಾಲಿ ಡಾ ಎಂದು ಘರ್ಜನೆ ಮಾಡಿದ್ದ ರಜನಿಕಾಂತ್, ನಂತರ ಕಾಳ ಚಿತ್ರದ ಮೂಲಕ ಮೆರೆದಿದ್ದರು. ಇದಾದ ನಂತರದಲ್ಲಿ ಪೆಟ್ಟಾ ಮಾಡಿದ್ದರು. ನಂತರ ದರ್ಬಾರ್ ಚಿತ್ರಕ್ಕೆ ಒಪ್ಪಿಕೊಂಡಿದ್ದರು.


ನಿರ್ದೇಶಕ ಎ.ಆರ್.ಮುರುಗದಾಸ್ ಅವರ ಜೊತೆಗೆ ರಜನಿ ದರ್ಬಾರ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಅದಕ್ಕೂ ಮುನ್ನ ಚಿತ್ರದಲ್ಲಿ ರಜನಿ ಅವತಾರ ಹೇಗಿರಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದಕ್ಕೆ ನಿರ್ದೇಶಕರು ಇದೀಗ ತೆರೆ ಎಳೆದಿದ್ದಾರೆ.


ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಅವರ ಪಾತ್ರದ ಫೋಟೊ ಝಲಕ್ ಗಳನ್ನು ರಜನಿ ಬಹಿರಂಗ ಮಾಡಿದ್ದಾರೆ. ಇಲ್ಲಿ ರಜನಿ ಒಂದು ಪಾತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಮತ್ತೊಂದರಲ್ಲಿ ರಾಯಲ್ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.


Find Out More:

Related Articles: