
ರಾಜಕುಮಾರ್ ಸಿನಿಮಾ ಗೀತೆ ಇದೀಗ ಶೀರ್ಷಿಕೆ!
ಹಳೆಯ ಚಿತ್ರದ ಗೀತೆಗಳೆಲ್ಲವೂ ಒಂದೊಂದಾಗಿಯೇ ಇದೀಗ ಸಿನಿಮಾ ಶೀರ್ಷಿಕೆ ಆಗುತ್ತಿವೆ. ಈ ಸಾಲಿಗೆ ಇದೀಗ ಆಡಿಸಿ ನೋಡು ಬೀಳಿಸಿ ನೋಡು ಸೇರಿಕೊಂಡಿದೆ. ಹೌದು ರಾಜ್ ಕುಮಾರ್ ಅವಾರು ಅಭಿನಯಿಸಿದ ಕಸ್ತೂರಿ ನಿವಾಸ ಚಿತ್ರದ ಈ ಹಾಡನ್ನು ಹೊಸಬರ ತಂಡ ಸಿನಿಮಾದ ಶೀರ್ಷಿಕೆಯನ್ನಾಗಿ ಮಾಡಿಕೊಂಡಿದೆ.
ಮನೋಜ್ ಲಹರಿ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರೋ ಚಿತ್ರ ಇದು. ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡುಗಳನ್ನು ಗಾನಾ, ಹಂಗಾಮಾ ಹಾಗೂ ವಿಂಕ್ ಅಪ್ಲಿಕೇಶನ್ ಗಳಲ್ಲಿ ಕೇಳಬಹುದು.
ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ನಿರ್ದೇಶಕ ದೊರೈ ಭಗವಾನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಜೀವನದಲ್ಲಿ ನಡೆಯುವ ಸಂದರ್ಭಗಳು, ಸನ್ನಿವೇಶಗಳು, ಶೀರ್ಷಿಕೆಯಂತೆ ಆದಾಗ, ಯಾರು ಗೆಲ್ತಾರೆ ಮತ್ತು ಯಾರು ಸೋಲ್ತಾರೆ ಅನ್ನೋದೇ ಈ ಚಿತ್ರದ ಒನ್ ಲೈನ್ ಕಥೆಯಾಗಿದೆ.