ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ರಿಷಬ್ ಏನಂದ್ರು?

frame ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ರಿಷಬ್ ಏನಂದ್ರು?

somashekhar
ಕನ್ನಡದ ಜನಪ್ರಿಯ ನಟ ಅಂದರೆ ಅದು ರಿಷಬ್ ಶೆಟ್ಟಿ. ಹೌದು, ಪ್ರೇಕ್ಷಕರ ದೃಷ್ಟಿಯನ್ನೇ ಮುಕ್ಯವಾಗಿಟ್ಟುಕೊಂಡು ಅದಕ್ಕೆ ತಕ್ಕಂತೆ ಸಿನಿಮಾ ಮಾಡ್ತಾರೆ ರಿಷಬ್. ಆದರೆ ಇದೀಗ ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಟ್ವೀಟ್ ಯಾವುದಕ್ಕೆ ಸಂಬಂಧಿಸಿದ್ದು ಗೊತ್ತಾ?


ನಿನ್ನೆಯಷ್ಟೇ ನಿರ್ಮಲಾ ಸೀತಾರಾಮನ್ 2019ರ ಬಜೆಟ್ ಮಂಡನೆಯ ಸಮಯದಲ್ಲಿ ಕನ್ನಡಿಗರಿಗೆ ಖುಷಿ ನೀಡುವ ಸುದ್ದಿ ನೀಡಿದ್ದಾರೆ.  ಅದೇನಪ್ಪಾ ಅಂದರೆ, ಇಷ್ಟು ದಿನಗಳ ಕಾಲ ಬ್ಯಾಂಕಿಂಗ್ ಎಕ್ಸಾಂ ಬರೆಯುವ ಅಭ್ಯರ್ಥಿಗಳು ಕೇವಲ ಆಂಗ್ಲ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಿತ್ತು. ಆದರೆ ಇದೀಗ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು ಎನ್ನುವ ಆದೇಶ ಹೊರಬಿದ್ದಿದೆ.


ಹೀಗಾಗಿ ಇದರಿಂದ ಖುಷಿಯಾದ ರಿಷಬ್ ಶೆಟ್ರು, ಟ್ವೀಟ್ ಮಾಡಿದ್ದಾರೆ. "ಬ್ಯಾಂಕಿಗೆ ಹೋದಾಗ ಅಲ್ಲಿನ ಸಿಬ್ಬಂದಿಗೆ ಕನ್ನಡ ಬರದೇ ಏನೇನೋ ಎಡವಟ್ಟಾದ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗೂ ಆಗಿವೆ. ಆದರೆ ಇನ್ನು ಮುಂದೆ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಕೇಂದ್ರ ಸರ್ಕಾರದ ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Find Out More:

Related Articles:

Unable to Load More