ಕಾರ್ ಡ್ರೈವ್ ಮಾಡಿದ ಯಶ್ : ಸಹ ನಿರ್ದೇಶಕನಿಗೆ ಖುಷ್

frame ಕಾರ್ ಡ್ರೈವ್ ಮಾಡಿದ ಯಶ್ : ಸಹ ನಿರ್ದೇಶಕನಿಗೆ ಖುಷ್

somashekhar

 

ಕೆಜಿಎಫ್ ಚಿತ್ರದ ಮೂಲಕ ಉತ್ತುಂಗದ ಸ್ಥಿತಿ ತಲುಪಿರೋ ನಟ ಯಶ್ ಇದೀಗ ತನ್ನ ಸಹ ನಿರ್ದೇಶಕನ ಹೊಸ ಕಾರನ್ನು ಡ್ರೈವ್ ಮಾಡಿದ್ದಾರೆ. ಯಶ್ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ತಮ್ಮ ಹಳೆ ಚಿತ್ರದ ನಿರ್ದೇಶಕನ ಹೊಸ ಕಾರ್ ಡ್ರೈವ್ ಮಾಡಿದ್ದಾರೆ.

ಯಶ್ ಕೆರಿಯರ್ ನಲ್ಲಿ ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ದೊಡ್ಡ ಹಿಟ್ ಸಿನಿಮಾ. ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಸಹ ನಿರ್ದೇಶನ ಮಾಡಿದ್ದ ಅನಿಲ್ ಅವರು ಹೊಸ ಕಾರ್ ಖರೀದಿ ಮಾಡಿದ್ದಾರೆ. ಅವರಿಗೆ ತಮ್ಮ ಮೊದಲ‌ ಕಾರ್ ಅನ್ನು ಯಶ್ ಓಡಿಸಬೇಕು ಎನ್ನುವ ಆಶೆ ಇತ್ತಂತೆ.

ಹೀಗಾಗಿ ಅನಿಲ್ ಆಸೆಯನ್ನು ಯಶ್ ಪೂರೈಸಿದ್ದಾರೆ. ಮೈಸೂರಿನಲ್ಲಿ ಸಿನಿಮಾ‌ ಚಿತ್ರೀಕರಣದಲ್ಲಿ  ಬಿಡುವು ಮಾಡಿಕೊಂಡು ಅನಿಲ ಅವರ ಕಾರ್ ಓಡಿಸಿದ್ದಾರೆ. ಇದು ಅನಿಲ್ ಕುಟುಂಬಕ್ಕೆ ಖುಷಿ ನೀಡಿದೆ.

Find Out More:

Related Articles:

Unable to Load More