ವಿಜಯ್ ನಿರ್ದೇಶನದ ಮೊದಲ ಚಿತ್ರ ಸಲಗ

frame ವಿಜಯ್ ನಿರ್ದೇಶನದ ಮೊದಲ ಚಿತ್ರ ಸಲಗ

Ratna Kumar

ಇದೀಗ ದುನಿಯಾ ವಿಜಯ್ ಕೇವಲ ನಟನಲ್ಲ.. ನಿರ್ದೇಶಕನೂ ಹೌದು. ದುನಿಯಾ ಚಿತ್ರದ ಮೂಲಕ ಚಿತ್ರರಂಗದಲ್ಲಿ ನಾಯಕನಾಗಿ ಕಾಣಿಸಿಕೊಂಡ ವಿಜಯ್, ಇದೀಗ ಸಲಗ ಚಿತ್ರದ ಮೂಲಕ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.


ಈ ಚಿತ್ರವನ್ನು ಸ್ವತಃ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ ಕೂಡ. ಹೀಗೆ ನಿರ್ದೇಶನ ಮತ್ತು ಅಭಿನಯ ಎರಡನ್ನೂ ಈ ಸಿನಿಮಾದಲ್ಲಿ ದುನಿಯಾ ವಿಜಯ್ ನಿಭಾಯಿಸಲಿದ್ದಾರೆ. ಈ ಚಿತ್ರಕ್ಕಾಗಿ ತುಂಬಾ ತಯಾರಿ ಮಾಡ್ತಿದ್ದಾರೆ.


ಸಲಗ ಚಿತ್ರದಲ್ಲಿ ಪ್ರತಿಭಾವಂತರ ದಂಡನ್ನೇ ನೀವು ಕಾಣಬಹುದು. ಡಾಲಿ ಧನಂಜಯ್ ಮತ್ತು ಸುಧೀ ಮುಖ್ಯ ಪಾತ್ರಗಳಲ್ಲಿ ಅಭಿನಯಿಸ್ತಿದ್ದು, ಟಗರು ಸಿನಿಮಾಗೆ ಸಂಭಾಷಣೆ ಬರೆದಿದ್ದ ಮಾಸ್ತಿ, ಸಲಗ ಚಿತ್ರಕ್ಕೂ ಡೈಲಾಗ್ ಬರೆಯಲಿದ್ದಾರೆ. ಈ ಚಿತ್ರದ ಎಲ್ಲ ಪಾತ್ರಗಳೂ ಪ್ರಾಮುಖ್ಯತೆ ಪಡೆದಿವೆ ಎನ್ನಲಾಗುತ್ತಿದೆ.


ಇಬ್ಬರು ಸಂಗೀತ ನಿರ್ದೇಶಕರು ಈ ಚಿತ್ರಕ್ಕಿದ್ದಾರೆ. ಇನ್ನು ಚರಣ್ ರಾಜ್ ಮತ್ತು ನವೀನ್ ಸಜ್ಜು ಸಂಗೀತ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಚಿತ್ರಕ್ಕೆ ಟಗರು ಚಿತ್ರ ನಿರ್ಮಿಸಿದ್ದ ಕೆ.ಪಿ ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ. 


Find Out More:

Related Articles:

Unable to Load More