ಕೊರೋನಾ ವೈರಸ್ ತಡೆಗೆ ಲಂಡನ್ನಿನಲ್ಲಿ ತಯಾರಾಗಿದ್ಯಾ ಔಷಧಿ..? ಇಲ್ಲಿದೆ ಉತ್ತರ

Soma shekhar

ಇಡೀ ವಿಶ್ವದ ನಿದ್ದೆಯನ್ನು ಹಾಳುಮಾಡಿರುವ, ಸದಾ ಆತಂಕವನ್ನು ಹುಟ್ಟಿಸಿರುವ  ಅನೇಕರನ್ನು ನರಳ ನರಳಿ ಸಾಯುವಂತೆ ಮಾಡಿರುವ, ಹಲವರನ್ನು  ನಿರ್ಗತಿಕರನ್ನಾಗಿ ಮಾಡಿರುವ ಕೊರೋನಾ ವೈರಸ್ ನ ನಾಶ ಅಗತ್ಯವಾಗಿರುವುದರಿಂದ ವಿಶ್ವದ ಅನೇಕ ರಾಷ್ಟ್ರಗಳು ಕೊರೋನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸುತ್ತಲೇ ಇದೆ, ನೆನ್ನೆಯವರೆಗೂ ರಷ್ಯಾದಲ್ಲಿ ಸಂಶೋಧಿಸಿರುವ ಔಷಧಿಯ ಬಗ್ಗೆ ಮಾತುಗಳಾದರೆ ಇಂದು ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಸಂಶೋಧಿಸಿರುವ ಔಷಧಿಯ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತಿದೆ,

 

 ಹೌದು ಲಂಡನ್​ನ್ನಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯವು ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಸೇರಿ ಅಭಿವೃದ್ಧಿಪಡಿಸುತ್ತಿರುವ ಕರೊನಾ ಲಸಿಕೆ ಕೋವಿಡ್​ ವಿರುದ್ಧ ಭಾರಿ ಪರಿಣಾಮಕಾರಿಯಾಗಲಿದೆ ಕೋವಿಡ್​ ರೋಗಿಗಳಲ್ಲಿ ಪ್ರತಿರೋಧ ಶಕ್ತಿ ಉಂಟು ಮಾಡುವುದಲ್ಲದೇ, ವೈರಸ್​ಅನ್ನು ಕೊಲ್ಲುವ ಜೀವಕಣಗಳನ್ನು ಉತ್ಪಾದಿಸುತ್ತಿದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಹೀಗಾಗಿ ಇದು ಕೋವಿಡ್​ ವಿರುದ್ಧ ದುಪ್ಪಟ್ಟು ಸುರಕ್ಷತೆ ನೀಡಲಿದೆ ಎಂದು ತಜ್ಞರು ಹೇಳಿದ್ದಾರೆ.

 

ಆಕ್ಸ್​ಫರ್ಡ್​ ವಿವಿ ತಂಡ ಮಾನವರ ಮೇಲೆ ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ. ಲಸಿಕೆಯ ಮೊದಲ ಹಂತದ ಪರೀಕ್ಷೆ ವರದಿಗಳನ್ನು ಒಂದೆರಡು ದಿನಗಳಲ್ಲಿಯೇ ಪ್ರಕಟಿಸಲಿದೆ. ಇದರ ಪ್ರಕಾರ ಲಸಿಕೆ ಪಡೆದವರ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕಣಗಳು ಉತ್ಪಾದನೆಯಾಗುತ್ತಿವೆ. ಜತೆಗೆ, ವೈರಸ್​ಅನ್ನು ಕೊಲ್ಲುವ ಟಿ-ಸೆಲ್​​ಗಳು ಕೂಡ ಸೃಷ್ಟಿಯಾಗುತ್ತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

 

 

ಬ್ರೆಜಿಲ್​ನಲ್ಲಿ ಸಾವಿರಾರು ಜನರ ಮೇಲೆ ಲಸಿಕೆಯ ಮೂರನೇ ಹಂತದ ಪರೀಕ್ಷೆ ಕಳೆದ ತಿಂಗಳಿನಿಂದ ನಡೆಸಲಾಗುತ್ತಿದೆ. ಈ ಬಗ್ಗೆ ಶುಭಸುದ್ದಿ ಪ್ರಕಟವಾಗಲಿದೆ ಎಂದು ಐಟಿವಿ ಸುದ್ದಿ ಸಂಸ್ಥೆಯ ರಾಜಕೀಯ ವಿಶ್ಲೇಷಕ ರಾಬರ್ಟ್​ ಪೆಸ್ಟೋನ್​ ಮಾಹಿತಿ ನೀಡಿದ್ದಾರೆ. ಲಸಿಕೆಯಿಂದಾಗಿ ಮಾನವ ದೇಹದಲ್ಲಿ ಪ್ರತಿರೋಧಕ ಶಕ್ತು ಉಂಟಾಘುತ್ತಿದೆ. ಜತೆಗೆ, ವೈರಸ್​ಅನ್ನು ನಾಶಪಡಿಸುತ್ತಿರುವ ಅಂಶ (ಟಿ-ಸೆಲ್​) ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಅವರು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.ಒಂದು ವೇಳೆ ಈ ಪ್ರಯೋಗ ಯಶಸ್ವಿಯಾಗಿದ್ದೇ ಆದಲ್ಲಿ, ನಿರೀಕ್ಷೆಗಿಂತಲೂ ಮುನ್ನವೇ ಕರೊನಾ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

 

ಈಗಾಗಲೇ ಹತ್ತಕ್ಕೂ ಅಧಿಕ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿವೆ. ಇದು ಪೂರ್ಣಗೊಂಡಲ್ಲಿ ಸೆಪ್ಟಂಬರ್​ ಹೊತ್ತಿಗೆ ಲಸಿಕೆ ದೊರೆಯಲಿದೆ. ಆದರೆ, ಆಗಸ್ಟ್​ ಮಧ್ಯಭಾಗದಲ್ಲಿಯೇ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ಹೇಳಿಕೊಂಡಿವೆ. ಈ ನಡುವೆ ಭಾರತದ ಎರಡು ಲಸಿಕೆಗಳು ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ.


ಆಕ್ಸ್​​ಫರ್ಡ್​ ಲಸಿಕೆ ಯಶಸ್ವಿಯಾದರೆ ಅದು ಭಾರತದಲ್ಲಿಯೂ ಉತ್ಪಾದನೆಯಾಗಲಿದೆ ಎಂಬುದು ಆಶಾದಾಯಕ ಸಂಗತಿಯಾಗಿದೆ. ಪ್ರತಿರೋಧಕ ಶಕ್ತಿ ಬಹುಕಾಲದವರೆಗೆ ರಕ್ಷಣೆ ನೀಡುವುದಿಲ್ಲ. ಆದರೆ, ಟಿ-ಸೆಲ್​ಗಳು ವರ್ಷಗಳ ಕಾಲ ವೈರಸ್​ನಿಂದ ಕಾಪಾಡಬಲ್ಲವು. ಆದರೆ, ಇದು ಶಾಶ್ವತವಾಗಿ ಕೋವಿಡ್​ನಿಂದ ರಕ್ಷಣೆ ನೀಡಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

 

 

ಸೆಪ್ಟಂಬರ್​ ವೇಳೆಗೆ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಇಡೀ ತಂಡ ಶ್ರಮಿಸುತ್ತಿದೆ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ. ಇದಲ್ಲದೇ, ಮಾನವರ ಮೇಲಿನ ಮೊದಲ ಹಂತದ ಪ್ರಯೋಗ ಈಗಾಗಲೇ ಪೂರ್ಣಗೊಂಡಿದ್ದು, ಇದರ ಫಲಿತಾಂಶ ಪ್ರಕಟನೆಗೆ ವಿವಿ ಸಜ್ಜಾಗಿದೆ.

 

Find Out More:

Related Articles: