ಜುಲೈ 26ರಂದು ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕು ಎಷ್ಟು ಗೊತ್ತಾ..?

Soma shekhar

ಕೊರೋನಾ ಮಹಾ ಮಾರಿ ಇಡೀ ರಾಷ್ಟ್ರವನ್ನು ವ್ಯಾಪಿಸಿ ಸಾವಿರಾರು ಜನರ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಹಾಗೂ ಇನ್ನು ಲಕ್ಷಾಂತರ ಮಂದಿ ಕೊರೋನಾ ವೈರಸ್ ಸೋಂಕಿನಲ್ಲಿ ನರಳುತ್ತಿದ್ದಾರೆ  ಹಾಗೂ ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಸೋಂಕು  ಹೆಚ್ಚಾಗುತ್ತಿದ್ದರೂ ಕೂಡ ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡುವುದಿಲ್ಲ  ಎಂದು ಘೋಷಿಸಲಾಗಿದೆ. ಆದರೆ ಬೇರೆ ಬೇರೆ ರಾಜ್ಯಗಳು ತಮ್ಮ ರಾಜ್ಯಗಳನ್ನು ಲಾಕ್ ಡೌನ್ ಮಾಡಿ ಕೊಂಡಿದೆ. ಅದೇ ರೀರಿ ಕರ್ನಾಟಕದಲ್ಲೂ ಕೂಡ ಕೊರೋನಾ ಪಾಸಿಟೀವ್ ಕೇಸ್ ಗಳು ಪ್ರತಿನಿತ್ಯ ನೂರಾರು ಕೇಸ್ ಗಳು ದಾಖಲಾಗುತ್ತಿದೆ. ಅದರಲ್ಲೂ ಕೂಡ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ನೂರರ ಗಡಿಯನ್ನು ದಾಟುತ್ತಲೇ  ಇರುವುದು ಬೆಂಗಳೂರಿನ ಜನ ಬೆಚ್ಚಿ ಬೀಳೂವಂತೆ ಮಾಡಿದೆ.

 

ಹೌದುರಾಜ್ಯ ರಾಜಧಾನಿಯಲ್ಲಿ ಕೋವಿಡ್ 19 ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಇಂದು (ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ತನಕದ ಅವಧಿಯಲ್ಲಿ) ಹೊಸದಾಗಿ 144 ಕೇಸ್​ಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯ ರಾಜಧಾನಿಯಲ್ಲಿ ಕೋವಿಡ್ ಕೇಸ್​ಗಳ ಪ್ರಮಾಣ 1935ಕ್ಕೆ ತಲುಪಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 445 ಕೇಸ್​ಗಳು ಖಚಿತವಾಗಿದ್ದು, ಒಟ್ಟು ಕೇಸ್​ಗಳ ಸಂಖ್ಯೆ 11,005ಕ್ಕೆ ತಲುಪಿದೆ.

 

ಇಂದು ಒಟ್ಟು ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 3,905 ಆಗಿದ್ದು, ಮೃತಪಟ್ಟವರ ಸಂಖ್ಯೆ 10. ಸಾವಿನ ಪ್ರಕರಣಗಳ ಪೈಕಿ ಮೂರು ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗಿವೆ. ಅದರಲ್ಲಿ ಒಂದು ಪ್ರಕರಣದಲ್ಲಿ 45 ವರ್ಷದ ವ್ಯಕ್ತಿಗೆ ಎದೆನೋವಿ ಕಾಣಿಸಿಕೊಂಡಿತ್ತು. ಅವರಿಗೆ ಇನ್​ಫ್ಲುಯೆನ್ಜಾ ಲೈಕ್ ಇಲ್​ನೆಸ್​ ಲಕ್ಷಣಗಳಿದ್ದವು. ಕಲಬುರಗಿ, ಬಳ್ಳಾರಿ, ಬೀದರ್​, ಬಾಗಲಕೋಟೆ, ಶಿವಮೊಗ್ಗ, ಧಾರವಾಡ, ಕೋಲಾರಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಇದರೊಂದಿಗೆ ಕೋವಿಡ್​ 19 ಸೋಂಕು ತಗುಲಿದ ಬಳಿಕ ಮೃತಪಟ್ಟವರ ಸಂಖ್ಯೆ 180 ತಲುಪಿದೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ಅನ್ಯಕಾರಣಗಳಿಗೆ ಸಾವು ಸಂಭವಿಸಿದೆ.

 

ಆಸ್ಪತ್ರೆಯಿಂದ ಇಂದು ಬಿಡುಗಡೆಯಾದವರ ಸಂಖ್ಯೆ 246 ಆಗಿದೆ. ಇದುವರೆಗೆ ಒಟ್ಟು 6916 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಐಸಿಯುನಲ್ಲಿ 178 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ಕೇಸ್​ಗಳ ಪೈಕಿ 21 ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ, 65 ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯವರದ್ದು ಇದೆ.

 

ಇನ್ನು ಜಿಲ್ಲೆಗಳ ವಿವರ ಗಮನಿಸಿದರೆ ಬೆಂಗಳೂರು ನಗರ ಕಳೆದ ಕೆಲವು ದಿನಗಳಿಂದ ನಂಬರ್ 1 ಸ್ಥಾನದಲ್ಲಿದೆ. ಇಂದು ಬೆಂಗಳೂರಿನಲ್ಲಿ 144, ಬಳ್ಳಾರಿ 47, ಕಲಬರುಗಿ 42, ಕೊಪ್ಪಳ 36, ದಕ್ಷಿಣ ಕನ್ನಡ 33 ಪ್ರಕರಣಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ. ಒಟ್ಟು ಕೇಸ್​ಗಳ ಲೆಕ್ಕ ಗಮನಿಸಿದರೆ ಬೆಂಗಳೂರು 1935, ಕಲಬುರಗಿ 1331, ಉಡುಪಿ 1125, ಯಾದಗಿರಿ 916, ಬಳ್ಳಾರಿ 602 ಕೇಸ್​ಗಳೊಂದಿಗೆ ಟಾಪ್​ 5ರ ಪಟ್ಟಿಯಲ್ಲಿವೆ. ಉಳಿದ ವಿವರಗಳಿಗೆ ಕೆಳಗೆ ಇರುವ ಗ್ಯಾಲರಿ ಗಮನಿಸಿ.

 

Find Out More:

Related Articles: