ರಷ್ಯಾದ ಕೊರೋನಾ ಔಷಧಿಯ ಅಂತಿಮ ಪ್ರಯೋಗ ಭಾರತದಲ್ಲಿ ನಡೆಯುತ್ತಿರುವುದೇಕೆ..?

Soma shekhar
ರಷ್ಯಾವು ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆಯನ್ನು ಸಂಶೋಧಿಸಲಾಗಿದೆ ಎಂದು ಹೆಮ್ಮೆಯಿಂದೆ ಹೇಳಿಕೊಂಡಿತ್ತು. ಆದರೆ ಕೆಲವು ರಾಷ್ಟ್ರಗಳು ಈ ಕೊರೋನಾ ಔಷಧಿಯ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿದ ಪರಿಣಾಮ ತನ್ನ ಔಷಧಿಯನ್ನು ಮತ್ತೆ ಕ್ಲಿನಿಕಲ್ ಟೆಸ್ಟ್ ಗೆ ಒಳಪಡಿಸಲಾಗುತ್ತಿದೆ. ಅದರಲ್ಲೂ ಈ ಔಷಧಿಯ ಅಂತಿಮ ಹಂತದ ಕ್ಲಿನಿಕಲ್ ಟೆಸ್ಟ ಭಾರತದಲ್ಲಿ ಮಾಡುತ್ತಿರುವುದು ವಿಶೇಷ




ಹೌದು ರಷ್ಯವು ಅಭಿವೃದ್ಧಿಗೊಳಿಸಿರುವ ಸ್ಪುಟ್ನಿಕ್-V ಕೊರೋನ ವೈರಸ್ ಲಸಿಕೆಯ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗಗಳನ್ನು ತಾನು ಮುಂದಿನ ಕೆಲವೇ ವಾರಗಳಲ್ಲಿ ಆರಂಭಿಸಬಹುದು ಎಂದು ಡಾ.ರೆಡ್ಡೀಸ್ ಲ್ಯಾಬೊರೇಟರಿಸ್ ಲಿ.ನ ಹಿರಿಯ ಅಧಿಕಾರಿ ದೀಪಕ್ ಸಪ್ರಾ ಅವರು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು.




ಪರೀಕ್ಷಾರ್ಥ ಪ್ರಯೋಗಗಳಿಗೆ 1,000-2000 ಜನರನ್ನು ನೋಂದಣಿ ಮಾಡಿಕೊಳ್ಳಲಾಗುವುದು ಮತ್ತು ಈ ಪ್ರಯೋಗಗಳನ್ನು ದೇಶಾದ್ಯಂತ ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುವುದು. ಅಗತ್ಯ ಅನುಮತಿಯನ್ನು ಪಡೆದುಕೊಂಡ ಬಳಿಕ ಈ ಪ್ರಯೋಗಗಳನ್ನು ಆರಂಭಿಸಲಾಗುವುದು ಎಂದರು.




ಈ ಪರೀಕ್ಷಾರ್ಥ ಪ್ರಯೋಗಗಳು ರಷ್ಯನ್  ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್) ಮತ್ತು ಡಾ.ರೆಡ್ಡೀಸ್ ನಡುವಿನ ಒಪ್ಪಂದದ ಭಾಗವಾಗಿವೆ. ಡಾ.ರೆಡ್ಡೀಸ್ ಭಾರತದಲ್ಲಿ ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿ ನಿಯಂತ್ರಣ ಪ್ರಾಧಿಕಾರದ ಅನುಮತಿಯ ಬಳಿಕ ಅಂತಿಮ ಲಸಿಕೆ ಉತ್ಪನ್ನವನ್ನು ದೇಶದಲ್ಲಿ ವಿತರಿಸಲಿದೆ. ಆರ್‌ಡಿಐಎಫ್ ಡಾ.ರೆಡ್ಡೀಸ್‌ಗೆ 100 ಮಿಲಿಯನ್ ಡೋಸ್‌ಗಳನ್ನು ಪೂರೈಸಲಿದೆ.  ಭಾರತದಲ್ಲಿ 300 ಮಿಲಿಯನ್ ಡೋಸ್‌ಗಳ ತಯಾರಿಕೆಗಾಗಿ ಆರ್‌ಡಿಐಎಫ್ ದೇಶದ ಔಷಧಿ ತಯಾರಕ ಕಂಪನಿಗಳೊಂದಿಗೂ ಒಪ್ಪಂದಗಳನ್ನು ಮಾಡಿಕೊಂಡಿದೆ.





ಜಗತ್ತಿನಾದ್ಯಂತ ಕೊರೊನಾ ಹಾವಳಿ ಹೆಚ್ಚುತ್ತಿರುವ ಮಧ್ಯೆಯೇ ಒಂದು ಆಶಾದಾಯಕ ಸುದ್ದಿ ಹೊರಬಿದ್ದಿದೆ. ರಷ್ಯಾದ ಕೊರೊನಾ ಲಸಿಕೆಗೆ ಇನ್ನು ಕೆಲವೇ ವಾರಗಳಲ್ಲಿ ಭಾರತದಲ್ಲಿ ಅಂತಿಮ ಟ್ರಯಲ್ ನಡೆಯಲಿದೆ. ಕೊರೊನಾ ವಿರುದ್ಧ ರಷ್ಯಾ   ಕಂಡುಹಿಡಿಯುತ್ತಿರುವ   'ಸ್ಪುಟ್ನಿಕ್ V ಕೊರೊನಾ ಲಸಿಕೆಗೆ ಭಾರತದಲ್ಲಿ ಡಾ. ರೆಡ್ಡಿ ಲ್ಯಾಬೊರೇಟರೀಸ್ ಲಿ. ಸಂಸ್ಥೆ ಅಂತಿಮ ಟ್ರಯಲ್ ಕೈಗೊಳ್ಳಲಿದೆ ಎಂಬ ಮಾಹಿತಿ ಔಷಧ ಕಂಪನಿಗಳ ವಲಯದಿಂದ ಹೊರಬಿದ್ದಿದೆ.






ರಷ್ಯಾವು ಅಕ್ಟೋಬರ್ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೊರೊನಾ ಲಸಿಕೆಯನ್ನು ಸೈಬೇರಿಯಾದ ವೆಕ್ಟರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿದೆ. ಕಳೆದ ವಾರ ಮೊದಲನೇ ಹಂತದ ಮಾನವನ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ. 




 

ವಿಕ್ಟರ್ ಲಸಿಕೆಯ ಪ್ರಯೋಗವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಸಲಾಗಿತ್ತು, ಈ ಲಸಿಕೆಯಿಂದ ಮಾನವನ ದೇಹದಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ವೃದ್ಧಿಯಾಗುತ್ತವೆ ಎಂಬುದು ತಿಳಿದುಬಂದಿದೆ.


Find Out More:

Related Articles: