ಗುರುವಾರ ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ?

Soma shekhar
ಕೊರೋಸ್ ವೈರಸ್ ಪ್ರತಿನಿತ್ಯವೂ ಕೂಡ ತನ್ನ ಪ್ರತಾಪವನ್ನು ಹೆಚ್ಚಿಸಿಕೊಳ್ಳುತ್ತಾ ವ್ಯಾಪ್ತುಯನ್ನು ವುಸ್ತರಿಸುತ್ತಾ ಮುಂದೆ ಸಾಗುತ್ತಿದ. ಅದೇ ರೀತಿ ಕೊರೋನಾ ವೈರಸ್ ರಾಜ್ಯದಲ್ಲೂ ಕೂಡ ಕೊರೋನಾ ವೈರಸ್ ಆರು ಸಾವಿರದ ಗಡಿಯನ್ನು ದಾಟಿಮುಂದೋಗುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಕೊರೋನಾ ಸೋಂಕಿರು ಗುಣಮುಖರಾಗುತ್ತಿದ್ದಾರೆ.


ಹವದು ಕೊರೊನಾರ್ಭಟರಾಜ್ಯದಲ್ಲಿ ಇಂದು ಕೂಡ ಕೊರೊನಾ ಆರ್ಭಟ ಜೋರಾಗಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6,805 ಹೊಸ ಪ್ರಕರಣಗಳು ದಾಖಲಾಗಿದ್ದು, 93 ಜನರು ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣ ಶೇ.1.83ರಷ್ಟಿದೆ.


ಈ ಮೂಲಕ ರಾಜ್ಯದಲ್ಲಿ ಇದೀಗ 1,58,254 ಪ್ರಕರಣಗಳು ದಾಖಲಾಗಿವೆ. ಕೊರೋನಾ ಆರ್ಭಟ ಮುಂದುವರಿದಿದ್ದರೂ ಚೇತರಿಕೆ ಪ್ರಮಾಣವೂ ಏರಿಕೆಯಾಗಿರುವುದು ಆಶಾದಾಯಕ ಬೆಳವಣಿಗೆ. 1,58,254 ಸಕ್ರಿಯ ಪ್ರಕರಣಗಳಿದ್ದು, 671 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 48,421 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಇದುವರೆಗೂ ರಾಜ್ಯದಲ್ಲಿ 15,81,075 ಜನರು ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಬ್ಬರ ಮುಂದುವರಿದಿದ್ದು, ಇಂದು 2,544 ಮಂದಿಗೆ ಸೋಂಕು ತಗುಲಿದೆ.


ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬೆಂಗಳೂರು ನಗರ 2544, ಬಳ್ಳಾರಿ 431, ಮೈಸೂರು 361, ಶಿವಮೊಗ್ಗ 292, ಬೆಳಗಾವಿ 229, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರಗಿ 196, ರಾಯಚೂರು 181, ದಕ್ಷಿಣ ಕನ್ನಡ 173, ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಕೊಪ್ಪಳ 132, ಗದಗ 124, ಚಿಕ್ಕಬಳ್ಳಾಪುರ 117, ಕೋಲಾರ 107, ಬೀದರ್ 98, ಚಾಮರಾಜನಗರ 95, ಉತ್ತರ ಕನ್ನಡ 77, ಹಾವೇರಿ 64, ಚಿಕ್ಕಮಗಳೂರು 59, ವಿಜಯಪುರ 58, ಚಿತ್ರದುರ್ಗ 58, ಕೊಡಗು 51, ರಾಮನಗರ 41, ಯಾದಗಿರಿ 37 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 34 ಪ್ರಕರಣಗಳು ವರದಿಯಾಗಿವೆ.


ಗುರುವಾರ ರಾಜ್ಯದಲ್ಲಿ 6805 ಹೊಸ ಪತ್ತೆಯಾಗಿದ್ದು 5602 ಜನ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 93 ಜನ ಕೊರೋನಾಕ್ಕೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಏರಿಕೆ ಕಂಡಿದೆ. ಶೇ. 50.73 ರಷ್ಟು ಜನ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 158254ಕ್ಕೆ ಏರಿದೆ. ಪರೀಕ್ಷೆ ಮಾಡುವ ಪ್ರಮಾಣವೂ ಏರಿದ್ದು 48421 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ.

Find Out More:

Related Articles: