ಚೀನಾದ ಟಿಕ್ ಟಾಕ್ ಆಫ್ ಅನ್ನು ಬಿಕರಿ ಮಾಡಲು ಮುಂದಾಗಿದೆ ಅಮೇರಿಕಾದ ಈ ಸಾಫ್ಟ್ ವೇರ್ ಕಂಪನಿ..!!

Soma shekhar
ಟಿಕ್ ಟಾಕ್ ಚೀನಾದ ಆಪ್ ಆದರೂ ಭಾರತದಲ್ಲಿ ಜನಪ್ರಿಯವನ್ನು ಗಳಿಸಿದ್ದಂತಹ ಒಂದು ಮನರಂಜನಾ ಆಪ್ ಇದಾಗಿದ್ದು, ಇದನ್ನು ಭಾರತ ಮತ್ತು ಚೀನಾದ ನಡುವೆ ಉಂಟಾದ ಸಂಘರ್ಷದ ಪರಿಣಾಮ ಚೀನಾದ 49 ಆಫ್ ಗಳನ್ನು ನಿಷೇಧಿಸಲಾಗಿತ್ತು. ಇದರಿಂದ ಚೀನಾಕ್ಕೆ ಸಾಕಷ್ಟು ನಷ್ಟ ಉಂಟಾಗಿತ್ತು. ಆದರೆ ಈ ಚೀನಾ ಆಪ್ ಅನ್ನು ಅಮೇರಿಕಾ ಜನಪ್ರಿಯ ಸಾಪ್ಟ್ ವೇರ್ ಸಂಸ್ಥೆಯೊಂದು ಖರೀಧಿಸಲು ಮುಂದಾಗಿದೆ.


 

ಹೌದು ಮೈಕ್ರೋಸಾಫ್ಟ್ ಸಂಸ್ಥೆಯ ಭಾರತ ಮೂಲದ ಸಿಇಒ ಸತ್ಯ ನಾಡೆಲ್ಲ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ ನಂತರ ಚೀನಾದ ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಟಿಕ್‌ಟಾಕ್ ‌ನ ಅಮೇರಿಕನ್ ವ್ಯವಹಾರದ ಖರೀದಿಗೆ ಮಾತುಕತೆ ಮುಂದುವರಿಸುವುದಾಗಿ ಮೈಕ್ರೋಸಾಫ್ಟ್ ಹೇಳಿಕೆ ನೀಡಿ



ರಾಷ್ಟ್ರೀಯ ಭದ್ರತಾ ವಿಷಯಗಳ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಲು ತುರ್ತು ಆರ್ಥಿಕ ಅಧಿಕಾರಗಳನ್ನು ಅಥವಾ ಕಾರ್ಯನಿರ್ವಾಹಕ ಆದೇಶವನ್ನು ಬಳಸಬಹುದು ಎಂದು ಟ್ರಂಪ್ ಹೇಳಿದ ಕೆಲ ದಿನಗಳ ನಂತರ ಮೈಕ್ರೋಸಾಫ್ಟ್‌ನಿಂದ ಈ ಹೇಳಿಕೆ ಬಂದಿದೆ.


ರೆಡ್ಮಂಡ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮೈಕ್ರೋಸಾಫ್ಟ್ ಭಾನುವಾರ ಹೇಳಿಕೆಯಲ್ಲಿ, ನಾಡೆಲ್ಲ ಮತ್ತು ಟ್ರಂಪ್ ನಡುವಿನ ಮಾತುಕತೆ ನಂತರ, ಯುಎಸ್ ನಲ್ಲಿ ಟಿಕ್‌ಟಾಕ್ ಖರೀದಿಯ ಬಗ್ಗೆ ಚರ್ಚೆಗಳನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ಹೇಳಿಕೆ ವಿವರಿಸಿದೆ. "ಅಧ್ಯಕ್ಷರ ಕಳವಳಗಳನ್ನು ಮೈಕ್ರೋಸಾಫ್ಟ್ ಸಂಪೂರ್ಣವಾಗಿ ಪ್ರಶಂಸಿಸುತ್ತದೆ. ಮತ್ತು . ಸಂಪೂರ್ಣ ಭದ್ರತಾ ಪರಿಶೀಲನೆಗೆ ಒಳಪಟ್ಟು ಟಿಕ್‌ಟಾಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಯುನೈಟೆಡ್ ಸ್ಟೇಟ್ಸ್ ಟ್ರೆಜರಿ ಸೇರಿದಂತೆ ಯುಎಸ್ ಗೆ ಸರಿಯಾದ ಆರ್ಥಿಕ ಪ್ರಯೋಜನಗಳನ್ನು ಒದಗಿಸಲು ಸಂಸ್ಥೆ ಬದ್ಧವಾಗಿದೆ" ಎಂದು ಹೇಳಿಕೆ ತಿಳಿಸಿದೆ.



ಕೆಲವೇ ವಾರಗಳಲ್ಲಿ ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್‌ನೊಂದಿಗೆ ಚರ್ಚೆಯನ್ನು ಮುಂದುವರಿಸಲು ಮೈಕ್ರೋಸಾಫ್ಟ್ ಕ್ರತ ತೆಗೆದುಕೊಳ್ಳುತ್ತದೆ ಮಾತ್ರವಲ್ಲದೆ ಸೆಪ್ಟೆಂಬರ್ 15 ರೊಳಗೆ ಯಾವುದೇ ಸಂದರ್ಭದಲ್ಲಿ ಈ ಚರ್ಚೆಗಳನ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿಕೆ ತಿಳಿಸಿದೆ. "ಈ ಪ್ರಕ್ರಿಯೆಯಲ್ಲಿ, ಮೈಕ್ರೋಸಾಫ್ಟ್ ಯುಎಸ್ ಸರ್ಕಾರ, ಅಧ್ಯಕ್ಷರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಬಯಸುತ್ತದೆ" ಟ್ರಂಪ್ ಕಳೆದ ವಾರ ಯುಎಸ್ ನಲ್ಲಿ ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಅನ್ನು ನಿಷೇಧಿಸುವುದಾಗಿ ಬೆದರಿಕೆ ಹಾಕಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಪಾಯ ತಂದೊಡ್ಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು."ಟಿಕ್‌ಟಾಕ್ ಅನ್ನು ಅಮೆರಿಕದಿಂದ ನಿಷೇಧಿಸುತ್ತಿದ್ದೇವೆ" ಎಂದು ಟ್ರಂಪ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು

Find Out More:

Related Articles: