ರಾಹುಲ್, ಪ್ರಸ್ತುತ ಟೀಂ ಇಂಡಿಯಾದ ಸ್ಟಾರ್ ಕನ್ನಡದ ಆಟಗಾರ. ಹೌದು, ಇತ್ತೀಚಿನ ಪಂದ್ಯಗಳಲ್ಲಿ ಹೊಡಿ ಬಡಿ ಆಟದ ಮೂಲಕ ತನ್ನ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇದರ ಜೊತೆಗೆ ಕಿವೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಕ್ಯಾಪ್ಟನ್ ಕೊಹ್ಲಿಯೂ ಮಾಡದ ದ್ರಾವಿಡ್ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಕೆಳ ಕ್ರಮಾಂಕದಲ್ಲಿ ಫಿನಿಶರ್ ಜವಾಬ್ದಾರಿಗೂ ತಾವು ಸೈ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ಅಮೋಘ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಗೆ, ಓರ್ವ ವಿಕೆಟ್ ಕೀಪರ್ ಆಗಿ ಕೆಳ ಕ್ರಮಾಂಕದಲ್ಲಿ ಫಿನಿಶರ್ ಜವಾಬ್ದಾರಿಯನ್ನು ವಹಿಸಿಕೊಡಲಾಗಿತ್ತು. ತಂಡ ಬಯಸಿದಂತೆ ಎಲ್ಲ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ರಾಹುಲ್, ಮಿಸ್ಟರ್ 360 ಡಿಗ್ರಿಯಂತೆ ಮೈದಾನದ ಎಲ್ಲ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ್ದಾರೆ. ಈ ಮೂಲಕ ದ್ರಾವಿಡ್ ಸಾಧನೆಯನ್ನು ಸಹ ಬ್ರೇಕ್ ಮಾಡಿದ್ದಾರೆ.
ಭಾರತದ ಪರ ಏಕದಿನದಲ್ಲಿ ಅತಿ ವೇಗದಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಗಳ ಪೈಕಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಇದೀಗ ಕೆಎಲ್ ರಾಹುಲ್ ಮುರಿದಿದ್ದಾರೆ. ತಮ್ಮ 31ನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ನಾಲ್ಕನೇ ಶತಕ ಸಾಧನೆ ಮಾಡಿದ್ದಾರೆ. ಇದೇ ದಾಖಲೆ ತಲುಪಲು ಕೊಹ್ಲಿಗೆ 36 ಇನ್ನಿಂಗ್ಸ್ ಗಳೇ ಬೇಕಾಗಿತ್ತು. ಪ್ರಸ್ತುತ ಪಟ್ಟಿಯಲ್ಲಿ ಶಿಖರ್ ಧವನ್ (24 ಇನ್ನಿಂಗ್ಸ್) ಅಗ್ರಸ್ಥಾನದಲ್ಲಿದ್ದಾರೆ.
ಭಾರತದ ಏಕದಿನದಲ್ಲಿ ಅತಿ ವೇಗದಲ್ಲಿ ನಾಲ್ಕು ಶತಕ:
ಶಿಖರ್ ಧವನ್: 24 ಇನ್ನಿಂಗ್ಸ್
ಕೆಎಲ್ ರಾಹುಲ್: 31
ವಿರಾಟ್ ಕೊಹ್ಲಿ: 36
ಗೌತಮ್ ಗಂಭೀರ್: 44
ವೀರೇಂದ್ರ ಸೆಹ್ವಾಗ್: 50
ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್ ಬ್ಯಾಟಿಂಗ್:
ಮೊದಲ ಏಕದಿನ: 88* ರನ್ (64 ಎಸೆತ, 11 ಬೌಂಡರಿ, 1 ಸಿಕ್ಸರ್)
ದ್ವಿತೀಯ ಏಕದಿನ: 4 ರನ್ (8 ಎಸೆತ)
ಅಂತಿಮ ಏಕದಿನ: 112 ರನ್ (113 ಎಸೆತ, 9 ಬೌಂಡರಿ, 2 ಸಿಕ್ಸರ್)